ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಲಾಕ್ ಡೌನ್ ನಡುವೆ ಆ ದೇವಸ್ಥಾನದ ಹೆಬ್ಬಾಗಿಲು ಓಪನ್!

|
Google Oneindia Kannada News

ಡೆಹ್ರಾಡೂನ್, ಏಪ್ರಿಲ್.28: ದೇಶಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿಯಲ್ಲಿ ಭಾರತ ಲಾಕ್ ಡೌನ್ ಘೋಷಿಸಲಾಗಿದೆಯ ಇದರ ನಡುವೆ ಬುಧವಾರ ಉತ್ತರಾಖಂಡ್ ನಲ್ಲಿರುವ ಕೇದಾರನಾಥ ದೇವಸ್ಥಾನದ ಹೆಬ್ಬಾಗಿಲು ತೆರಯಲು ಅಲಂಕಾರಗೊಳಿಸಲಾಗಿದೆ.

Recommended Video

ರೈತನ ಪತ್ನಿ ವಿಡಿಯೋ ನೋಡಿದ ಕೂಡಲೇ ಫೋನ್ ಮಾಡಿದ C M..? | Oneindia Kannada

ಕೇದಾರನಾಥ ದೇವಸ್ಥಾನ ತೆರೆಯುವ ಸಂದರ್ಭದಲ್ಲಿ ಅತಿಹೆಚ್ಚು ಜನರು ಸೇರುವುದಕ್ಕೆ ಅವಕಾಶವಿಲ್ಲ. ಬದಲಿಗೆ ದೇಗುಲದ ಮುಖ್ಯ ಅರ್ಚಕರು ಸೇರಿದಂತೆ ಕೇವಲ 16 ಮಂದಿಗೆ ಮಾತ್ರ ಕೇದಾರನಾಥ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಕೊರೊನಾ ಕಾಟದಿಂದ ಭಾರತದಲ್ಲಿ ಮುಂದುವರಿಯುತ್ತಾ ಲಾಕ್ ಡೌನ್?ಕೊರೊನಾ ಕಾಟದಿಂದ ಭಾರತದಲ್ಲಿ ಮುಂದುವರಿಯುತ್ತಾ ಲಾಕ್ ಡೌನ್?

ಉತ್ತರಾಖಂಡ್ ನಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ ಒಟ್ಟು 51 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಇದುವರೆಗೂ ರಾಜ್ಯದಲ್ಲಿ ಒಬ್ಬರೇ ಒಬ್ಬರು ಮಾರಕ ರೋಗದಿಂದ ಪ್ರಾಣ ಬಿಟ್ಟಿಲ್ಲ. ಅಲ್ಲದೇ ಈವರೆಗೂ 33 ಮಂದಿ ಕೊರೊನಾ ವೈರಸ್ ನಿಂದ ಗುಣಮುಖರಾಗಿದ್ದು, 18 ಮಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

Uttarkhand: Kedarnath Temple Being Decorated As Its Portals Will Open Wednesday

ಕೇದಾರನಾಥ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶವಿಲ್ಲ:

ಬುಧವಾರ ಕೇದಾರನಾಥ ದೇವಸ್ಥಾನವನ್ನು ತೆರೆಯುವುದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬೆಳಗ್ಗೆ ಕೇದಾರನಾಥನಿಗೆ ಮುಖ್ಯ ಅರ್ಚಕರನ್ನೊಳಗೊಂಡ 16 ಅರ್ಚಕರ ತಂಡವು ವಿಶೇಷ ಪೂಜೆಯನ್ನು ಸಲ್ಲಿಸಲಿದೆ. ಆದರೆ ಈ ವೇಳೆಯಲ್ಲಿ ಯಾವುದೇ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅನುಮತಿ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯು ತಿಳಿಸಿದೆ.

English summary
Uttarkhand: Kedarnath Temple Being Decorated As Its Portals Will Open Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X