ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ ರಿಸೆಪ್ಷನಿಸ್ಟ್ ಹತ್ಯೆ: ಆರೋಪಿಯ ತಂದೆ, ಸಹೋದರ ಬಿಜೆಪಿಯಿಂದ ಉಚ್ಛಾಟನೆ

|
Google Oneindia Kannada News

ಪೌರಿಯ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯನನ್ನು ಬಂಧನದ ಬಳಿಕ ಬಿಜೆಪಿ ಶನಿವಾರ ವಿನೋದ್ ಆರ್ಯ ಮತ್ತು ಅವರ ಮಗ ಅಂಕಿತ್ ಆರ್ಯನನ್ನು ಪಕ್ಷದಿಂದ ಉಚ್ಚಾಟಿಸಿದೆ. ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪುಲ್ಕಿತ್ ಆರ್ಯನನ್ನು ಈಗಾಗಲೇ ಬಂಧಿಸಲಾಗಿದೆ.

ಪೌರಿಯ ಯಮಕೇಶ್ವರ ಬ್ಲಾಕ್‌ನಲ್ಲಿ ರೆಸಾರ್ಟ್ ಮಾಲೀಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಮತ್ತು ರೆಸಾರ್ಟ್‌ನ ಇಬ್ಬರು ಉದ್ಯೋಗಿಗಳಾದ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಶುಕ್ರವಾರ ಪ್ರಕರಣದಲ್ಲಿ ಬಂಧಿಸಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರ ಆದೇಶದ ಮೇರೆಗೆ ವಿನೋದ್ ಆರ್ಯ ಮತ್ತು ಅಂಕಿತ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾಣ್ ಶನಿವಾರ ಹೇಳಿದ್ದಾರೆ. ಹರಿದ್ವಾರದ ಪಕ್ಷದ ನಾಯಕ ವಿನೋದ್ ಆರ್ಯ ಅವರು ಈ ಹಿಂದೆ ಉತ್ತರಾಖಂಡ್ ಮತಿ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಸಚಿವ ಶ್ರೇಣಿಯೊಂದಿಗೆ ಸೇವೆ ಸಲ್ಲಿಸಿದ್ದಾರೆ. ಅಂಕಿತ್ ಅವರನ್ನು ರಾಜ್ಯ ಒಬಿಸಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಕಾರ್ಯದರ್ಶಿ (ಸಮಾಜ ಕಲ್ಯಾಣ) ಎಲ್ ಫನೈ ತಿಳಿಸಿದ್ದಾರೆ.

Uttarakhand receptionist murder: Accuseds father and brother expelled from BJP

ರಿಸೆಪ್ಷನಿಸ್ಟ್ ಹತ್ಯೆಯ ಬಳಿಕ ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ನ ಕೆಲವು ಭಾಗಗಳನ್ನು ಸರ್ಕಾರ ನೆಲಸಮಗೊಳಿಸಿದ್ದು, ಆಕ್ರೋಶಗೊಂಡ ಸ್ಥಳೀಯರು ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಆರೋಪಿಗಳು ರಿಸೆಪ್ಷನಿಸ್ಟ್ ಹತ್ಯೆಯ ಬಳಿಕ ಆಕೆಯ ಶವವನ್ನು ಚೀಲದಲ್ಲಿ ತುಂಬಿಸಿ ರೆಸಾರ್ಟ್ ಬಳಿಕ ಕಾಲುವೆಯಲ್ಲಿ ಎಸೆದಿದ್ದಾರೆ. ಬಳಿಕ ಪೊಲೀಸರು ಕಾರ್ಯಚರಣೆ ಮೂಲಕ ಶವವನ್ನು ಕಾಲುವೆಯಿಂದ ಹೊರತೆಗೆಯಲಾಗಿದೆ.

ಖಾಸಗಿ ರೆಸಾರ್ಟ್ ಆವರಣದಲ್ಲಿ ನಾಪತ್ತೆಯಾಗಿದ್ದ ಅಂಕಿತಾ ಭಂಡಾರಿ ಅವರ ಮೃತದೇಹ ಇಂದು ಬೆಳಗ್ಗೆ ಚಿಲ್ಲಾ ಪವರ್‌ಹೌಸ್ ಬಳಿ ಪೊಲೀಸರಿಗೆ ಪತ್ತೆಯಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ವೇಳೆ ಆರೋಪಿಗಳು ವೈಯಕ್ತಿಕ ವಿವಾದದಿಂದಾಗಿ ಆಕೆಯನ್ನು ರೆಸಾರ್ಟ್ ಬಳಿಯ ಕಾಲುವೆಗೆ ತಳ್ಳಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ, ನಂತರ ಅವಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮಾನತುಗೊಂಡ ಬಳಿಕ ವಿನೋದ್ ಆರ್ಯ ಮಾತನಾಡಿ, 'ಜಿಲ್ಲಾಡಳಿತ ಈ ಬಗ್ಗೆ ತನಿಖೆ ನಡೆಸಿ ತಪ್ಪಿದ್ದರೆ ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ. ಹರಿದ್ವಾರದ ಪಕ್ಷದ ನಾಯಕ ವಿನೋದ್ ಆರ್ಯ ಅವರು ಈ ಹಿಂದೆ ಉತ್ತರಾಖಂಡ್ ಮತಿ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಸಚಿವ ಶ್ರೇಣಿಯೊಂದಿಗೆ ಸೇವೆ ಸಲ್ಲಿಸಿದ್ದಾರೆ. ಪುಲ್ಕಿತ್ ಅವರ ಸಹೋದರ ಅಂಕಿತ್ ರಾಜ್ಯ ಒಬಿಸಿ ಆಯೋಗದ ಉಪಾಧ್ಯಕ್ಷರಾಗಿದ್ದಾರೆ.

English summary
Uttarakhand Receptionist Murder: BJP on Saturday expelled Vinod Arya and his son Ankit Arya from the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X