ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷರತ್ತುಗಳನ್ನು ಹಾಕಿ ಮದುವೆಗೆ ಅವಕಾಶ ನೀಡಿದ ಉತ್ತರಾಖಂಡ ಸರ್ಕಾರ

|
Google Oneindia Kannada News

ಡೆಹ್ರಾಡೂನ್, ಏಪ್ರಿಲ್ 17: ಲಾಕ್‌ಡೌನ್ ಇರುವ ಕಾರಣ ಮದುವೆ ಕಾರ್ಯಕ್ರಮಗಳಿಗೆ ಉತ್ತರಾಖಂಡ ಸರ್ಕಾರ ನಿರ್ಬಂಧ ಏರಿತ್ತು. ಇದೀಗ ಕೆಲವು ಷರತ್ತುಗಳನ್ನು ಹಾಕಿ ಮದುವೆ ಮಾಡಲು ಅವಕಾಶ ನೀಡಲಾಗಿದೆ.

ಮದುವೆಯಲ್ಲಿ ವರ ಹಾಗೂ ವಧುವಿನ ಕಡೆಯಿಂದ ತಲಾ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿವಾಹ ಸಮಾರಂಭಗಳಿಗೆ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಅಗತ್ಯವಾಗಿದೆ. ವರ ಹಾಗೂ ವಧು ಎರಡೂ ಕಡೆಯವರು ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಾಗುತ್ತದೆ.

ಚಿತ್ರಗಳು; ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ-ರೇವತಿಚಿತ್ರಗಳು; ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ-ರೇವತಿ

ಮದುವೆಯೂ ಮನೆಯ ಒಳಗೆಯೇ ನಡೆಸಬೇಕಿದೆ. ಕಾರ್ಯಕ್ರಮದ ವೇಳೆ ಎಲ್ಲರೂ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

Uttarakhand Government Allowed Marriages In The State During The Lockdown

ಉತ್ತರಖಂಡದಲ್ಲಿ ಲಾಕ್‌ಡೌನ್‌ನಿಂದ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಜನರಿಗೆ ಸ್ವಲ್ಪ ಬಿಡುವು ನೀಡುವ ನಿರ್ಧಾರ ಮಾಡಲಾಗಿದೆ. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಈ ಬಗ್ಗೆ ಸಭೆ ನಡೆಸಿದ್ದು, ಸರಳ ಮದುವೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾರೆ.

ಉತ್ತರಖಂಡದಲ್ಲಿ 37 ಕೊರೊನಾ ಪ್ರಕರಣಗಳು ದೃಢವಾಗಿದೆ. ಈಗಾಗಲೇ ಈ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿಗೆ ಪರಿಹಾರ ಕ್ರಮಗಳಿಗೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಲಾಕ್‌ಡೌನ್‌ನಿಂದ ಉತ್ತರಖಂಡದಲ್ಲಿ 1000 ಕೋಟಿ ನಷ್ಟ ಆಗಿರಬಹುದು ಎಂದು ಊಹಿಸಲಾಗಿದೆ.

English summary
Uttarakhand government allowed marriages in the state during the lockdown with some conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X