ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ್ ಪ್ರವಾಹ: ಮಾಲೀಕನಿಗಾಗಿ ಸುರಂಗದ ಬಳಿ ಕಾದು ಕುಳಿತ ನಾಯಿ

|
Google Oneindia Kannada News

ಡೆಹ್ರಾಡೂನ್,ಫೆಬ್ರವರಿ 16:ಉತ್ತರಾಖಂಡ್ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವವರ ಕುಟುಂಬದ ಆಕ್ರಂತನ ಮುಗಿಲು ಮುಟ್ಟಿದೆ. ಅದರ ಜತೆ ನಾಯಿಯೂ ಕೂಡ ತನ್ನ ಮಾಲೀಕನ ಬರುವಿಕೆಗಾಗಿ ಕಾಯುತ್ತಿದೆ.

ಉತ್ತರಾಖಂಡ್ ಪ್ರವಾಹಕ್ಕೆ ಸಿಲುಕಿ ಇದುವರೆಗೂ 56 ಮಂದಿ ಮೃತಪಟ್ಟಿದ್ದು ಅನೇಕರು ಸಿಲುಕಿರುವ ಸಾಧ್ಯತೆ ಇದೆ.

ಇನ್ನು ತನ್ನ ಮಾಲೀಕನನ್ನು ಕಳೆದುಕೊಂಡ ನಾಯಿಯೊಂದು ಅನ್ನ,ನೀರು ಬಿಟ್ಟು ಸುರಂಗದ ಬಳಿ ಕಾದು ಕುಳಿತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರೂರುವಂತೆ ಮಾಡುತ್ತದೆ.
ತಪೋವನ ಹೈಡಲ್ ಯೋಜನೆ ನಡೆಯುತ್ತಿದ್ದ ಪ್ರದೇಶದ ಬಳಿಕ ನಾಯಿಯೊಂದು ತನ್ನ ಮಾಲೀಕನಿಗಾಗಿ ಫೆಬ್ರವರಿ 7 ರಿಂದ ಕಾದು ಕುಳಿತಿದೆ.

ಉತ್ತರಾಖಂಡ್ ಪ್ರವಾಹ: 2019ರಲ್ಲೇ ವಿಜ್ಞಾನಿಗಳು ಕೊಟ್ಟಿದ್ದರು ಎಚ್ಚರಿಕೆ ಉತ್ತರಾಖಂಡ್ ಪ್ರವಾಹ: 2019ರಲ್ಲೇ ವಿಜ್ಞಾನಿಗಳು ಕೊಟ್ಟಿದ್ದರು ಎಚ್ಚರಿಕೆ

ಕೆಸರು ತುಂಬಿದ ಸುರಂಗದಲ್ಲೀಗ ಉತ್ಖನನ ಮಾಡುವ ಯಂತ್ರದಿಂದ ಮಾತ್ರ ರಕ್ಷಣಾಕಾರ್ಯಾಚರಣೆ ನಡೆಸಲು ಸಾಧ್ಯ, ಕ್ಯಾಮರಾ ಅಥವಾ ಪೈಪ್ ಲಗತ್ತಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ವಾತಿ ಮಾಹಿತಿ ನೀಡಿದ್ದಾರೆ.

ವಾರದ ಹಿಂದೆ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಬಂಡೆ ಸ್ಫೋಟ ಮತ್ತು ಪ್ರವಾಹ ದುರಂತ ಘಟನೆಯಲ್ಲಿ ಮಡಿದವರ ಸಂಖ್ಯೆ ಏರುತ್ತಲೇ ಇದೆ. ನಿನ್ನೆ ಭಾನುವಾರ ತಪೋವನ್ ಸುರಂಗದಲ್ಲಿ ಆರು ಮೃತದೇಹಗಳು ಪತ್ತೆಯಾಗಿವೆ. ರೈನಿ ಗ್ರಾಮದಲ್ಲಿ ಏಳು ಮಂದಿಯ ಶವ ಸಿಕ್ಕಿವೆ.

ಇದರೊಂದಿಗೆ ಈವರೆಗೆ ಸಿಕ್ಕಿರುವ ಮೃತ ದೇಹಗಳ ಸಂಖ್ಯೆ 53ಕ್ಕೆ ಏರಿದೆ. ಇವುಗಳ ಪೈಕಿ 24 ಮಂದಿಯನ್ನ ಗುರುತು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೂ 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಇವರು ಬದುಕಿರುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗುತ್ತಿದೆ. ರಕ್ಷಣೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಕಳೆದ ಭಾನುವಾರದಂದು ಚಮೋಲಿ ಜಿಲ್ಲೆಯಲ್ಲಿ ಧೌಲಿಗಂಗಾ ನದಿಯ ಹಿಮಬಂಡೆ ಸ್ಫೋಟಗೊಂಡ ಪರಿಣಾಮ ಗಂಗಾ ನದಿಯ ಉಪನದಿಗಳಾದ ಧೌಲಿಗಂಗಾ ಮತ್ತು ಅಲಕನಂದ ನೀರು ಉಕ್ಕೇರಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ನದಿ ಪಾತ್ರದ ಅನೇಕ ಪ್ರದೇಶಗಳಿಗೆ ಪ್ರವಾಹ ನುಗ್ಗಿತ್ತು. ಸಾಧ್ಯವಾದಷ್ಟೂ ಬೇಗ ನದಿ ಪಾತ್ರದ ಪ್ರದೇಶಗಳಲ್ಲಿದ್ದ ಜನರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿತ್ತು. ಹೀಗಾಗಿ ಹೆಚ್ಚಿನ ಅನಾಹುತ ಆಗಲಿಲ್ಲ. ಈ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಮುಖ್ಯಮಂತ್ರಿಗಳು 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಅಲ್ಲೇ ಹುಟ್ಟಿ ಬೆಳೆದ ನಾಯಿ

ಅಲ್ಲೇ ಹುಟ್ಟಿ ಬೆಳೆದ ನಾಯಿ

ಬ್ಲ್ಯಾಕಿ ಅಲ್ಲೇ ಹುಟ್ಟಿ, ಕೆಲಸಗಾರರು ಹಾಕುತ್ತಿದ್ದ ಊಟವನ್ನೇ ಉಂಡು ದಷ್ಟಪುಷ್ಟವಾಗಿ ಬೆಳೆದಿದೆ. ಈಗ ಮಾಲಿಕರ ಬರುವಿಕೆಗಾಗಿ ಕಾಯುತ್ತಿದೆ. ನಿತ್ಯ ಅವರ ಬಳಿಯೇ ಮಲಗುತ್ತಿತ್ತು.ಅವರನ್ನು ಬಿಟ್ಟು ಒಂದು ಗಂಟೆಯೂ ಕೂಡ ಎಲ್ಲಿಯೂ ಹೋಗುತ್ತಿರಲಿಲ್ಲವಂತೆ.

ಪ್ರವಾಹದ ಸಂದರ್ಭದಲ್ಲಿ ನಾಯಿ ಅಲ್ಲಿರಲಿಲ್ಲ

ಪ್ರವಾಹದ ಸಂದರ್ಭದಲ್ಲಿ ನಾಯಿ ಅಲ್ಲಿರಲಿಲ್ಲ

ಭಾನುವಾರ ಪ್ರವಾಹದ ಸಂದರ್ಭದಲ್ಲಿ ನಾಯಿ ಅಲ್ಲಿರಲಿಲ್ಲ. ಸೋಮವಾರ ಬೆಳಗ್ಗೆ ಮತ್ತೆ ಆ ಪ್ರದೇಶಕ್ಕೆ ಬಂದಾಗ ತನ್ನ ಮಾಲೀಕರಲಿಲ್ಲ. ಅವರನ್ನು ಹುಡುಕುತ್ತಾ ಸುರಂಗದ ಬಳಿಯೇ ಕಾದು ಕುಳಿತಿದೆ.

ಏನೋ ನಡೆದಿರುವ ಸುಳಿವು

ಏನೋ ನಡೆದಿರುವ ಸುಳಿವು

ನಾಯಿಗೆ ಇಲ್ಲಿ ಏನೋ ಸರಿಯಿಲ್ಲ, ಏನೋ ಸಂಭವಿಸಿದೆ ಎಂದು ತಿಳಿದಿದೆ ಆದರೆ ತನ್ನ ಮಾಲೀಕರು ಯಾಕೆ ಬಂದಿಲ್ಲ ಎಂದು ಹುಡುಕುತ್ತಿದೆ, ಸುರಂಗದ ಸುತ್ತಮುತ್ತ ಅಪರಿಚಿತ ಜನರು ಓಡಾಡುತ್ತಿದ್ದಾರೆ, ಯಾರೂ ಕೂಡ ಅದರ ಕಡೆ ಗಮನ ಕೊಡುತ್ತಿಲ್ಲ ಇದೆಲ್ಲವೂ ಅದಕ್ಕೆ ತಿಳಿಯುತ್ತಿದೆ.

ನಾಯಿ ಓಡಿಸಲು ಎಷ್ಟೇ ಕಷ್ಟ ಪಟ್ಟರೂ ಸಾಧ್ಯವಾಗುತ್ತಿಲ್ಲ

ನಾಯಿ ಓಡಿಸಲು ಎಷ್ಟೇ ಕಷ್ಟ ಪಟ್ಟರೂ ಸಾಧ್ಯವಾಗುತ್ತಿಲ್ಲ

ರಕ್ಷಣಾ ತಂಡವು ನಾಯಿಯನ್ನು ಅಲ್ಲಿಂದ ಎಷ್ಟೇ ಓಡಿಸಲು ಪ್ರಯತ್ನಿಸಿದರೂ ಸ್ವಲ್ಪ ಹೊತ್ತು ಬಿಟ್ಟು ಮತ್ತದೇ ಜಾಗದಲ್ಲಿ ಬಂದು ಕುಳಿತುಕೊಳ್ಳುತ್ತಿದೆ. ಆ ಸ್ಥಳವನ್ನು ಬಿಟ್ಟು ಹೋಗಲು ಮುಂದಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

English summary
A dog, affectionately named Blackie, spent days waiting outside the sludge-choked Tapovan tunnel in Uttarakhand as rescue teams battled against odds to save those trapped inside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X