ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ್ ಪ್ರವಾಹ: 2019ರಲ್ಲೇ ವಿಜ್ಞಾನಿಗಳು ಕೊಟ್ಟಿದ್ದರು ಎಚ್ಚರಿಕೆ

|
Google Oneindia Kannada News

ಡೆಹ್ರಾಡೂನ್,ಫೆಬ್ರವರಿ 08: ಉತ್ತರಾಖಂಡ್‌ನಲ್ಲಿ ಸಂಭವಿಸಿರುವ ಪ್ರವಾಹನದ ಬಗ್ಗೆ 2019ರಲ್ಲೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು ಎನ್ನುವ ವಿಚಾರ ಬಹಿರಂಗಗೊಂಡಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡಿದೆ. ಈ ಹಿಮ ಪ್ರವಾಹವು ಧೌಲಿಗಂಗಾ ನದಿಯ ಮೂಲಕ ಉಕ್ಕಿ ಹರಿದು ಹಲವು ಜೀವಗಳನ್ನು ಬಲಿತೆಗೆದುಕೊಂಡಿದೆ.

ಉತ್ತರಾಖಂಡ್ ಪ್ರವಾಹ: ಅಪಾಯದ ಹಂತಕ್ಕೆ ತಲುಪಿದ ಧೌಲಿ ಗಂಗಾ ನದಿ ನೀರಿನ ಮಟ್ಟಉತ್ತರಾಖಂಡ್ ಪ್ರವಾಹ: ಅಪಾಯದ ಹಂತಕ್ಕೆ ತಲುಪಿದ ಧೌಲಿ ಗಂಗಾ ನದಿ ನೀರಿನ ಮಟ್ಟ

ಈ ಘಟನೆಗೆ ಹವಾಮಾನ ವೈಪರೀತ್ಯ ಕಾರಣ ಎಂದು ಹೇಳಲಾಗುತ್ತಿದೆಯಾದರೂ, ಅಲ್ಲದೆ ಈ ಬಗ್ಗೆ 2019ರಲ್ಲೇ ವಿಜ್ಞಾನಿಗಳ ತಂಡ ಸಂಭಾವ್ಯ ದುರಂತದ ಕುರಿತು ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.

ತಾಪಮಾನ ಏರಿಕೆಯಿಂದಾಗಿ ಉತ್ತರಾಖಂಡದ ಹಿಮಗಲ್ಲುಗಳು ಕರಗಿ ಸ್ಫೋಟವಾಗಿವೆ ಎಂದು ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ. ಜಲ ಪ್ರವಾಹದಿಂದಾಗಿ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ.

ನೀರ್ಗಲ್ಲು ಸ್ಫೋಟಕ್ಕೆ ಕಾರಣವೇನು?

ನೀರ್ಗಲ್ಲು ಸ್ಫೋಟಕ್ಕೆ ಕಾರಣವೇನು?

ನೀರಿನ ಒತ್ತಡ ಹೆಚ್ಚುವುದು, ಸವಕಳಿ, ಹಿಮಪಾತ, ನೀರ್ಗಲ್ಲುಗಳ ಕೆಳಗೆ ಭೂಕಂಪ ಹೀಗೆ ಬೇರೆ ಬೇರೆ ಕಾರಣಗಳಿಂದ ನೀರ್ಗಲ್ಲುಗಳು ಸ್ಫೋಟಗೊಳ್ಳಬಹುದು. ಜತೆಗೆ, ಒಂದು ನೀರ್ಗಲ್ಲುಗಳ ಸರೋವರದ ಮೇಲೆ ಮತ್ತೂಂದು ನೀರ್ಗಲ್ಲು ಬಂದು ಢಿಕ್ಕಿ ಹೊಡೆದಾಗಲೂ ಇಂಥ ಘಟನೆ ಸಂಭವಿಸಬಹುದು.

170ಕ್ಕೂ ಅಧಿಕ ಮಂದಿ ನಾಪತ್ತೆ

170ಕ್ಕೂ ಅಧಿಕ ಮಂದಿ ನಾಪತ್ತೆ

ಉತ್ತರಾಖಂಡದಲ್ಲಿ ಸಂಭವಿಸಿರುವ ಪ್ರವಾಹದಲ್ಲಿ ಸುಮಾರು 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದಾಗಿ ಉತ್ತರಾಖಂಡದಲ್ಲಿ ವ್ಯಾಪಕ ಪ್ರವಾಹ ಸಂಭವಿಸಿದ್ದು, ಹಲವು ಜೆಲ್ಲೆಗಳು ನೀರಿನಲ್ಲಿ ಮುಳುಗಿವೆ. ಘಟನೆಯಲ್ಲಿ ಕನಿಷ್ಟ 12 ಮಂದಿ ಸಾವನ್ನಪ್ಪಿದ್ದು, 170ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ನೀರ್ಗಲ್ಲುಗಳು ವರ್ಷಕ್ಕೆ ಅರ್ಧ ಮೀಟರ್‌ ನಷ್ಟು ಕರಗುತ್ತಿವೆ

ನೀರ್ಗಲ್ಲುಗಳು ವರ್ಷಕ್ಕೆ ಅರ್ಧ ಮೀಟರ್‌ ನಷ್ಟು ಕರಗುತ್ತಿವೆ

ಈ ಹಿಂದೆ ನೀರ್ಗಲ್ಲುಗಳು ಸುಮಾರು 0.25 ಮೀಟರ್‌ನಷ್ಟು ಮಂಜುಗಡ್ಡೆಗಳನ್ನು ಕಳೆದುಕೊಂಡಿದ್ದರೆ, 2000ದ ಬಳಿಕ ವರ್ಷ ಅರ್ಧ ಮೀಟರ್ನಷ್ಟು ಮಂಜುಗಡ್ಡೆ ಕರಗಿ ಹೋಗಿವೆ ಎಂದು ವರದಿ ತಿಳಿಸಿದೆ. ಕಳೆದ 4 ದಶಕಗಳಲ್ಲಿ ನೀರ್ಗಲ್ಲುಗಳು ತಮ್ಮ ಕಾಲು ಭಾಗದಷ್ಟು ದ್ರವ್ಯ ರಾಶಿಯನ್ನೇ ಕಳೆದುಕೊಂಡಿವೆ. 1975- 2000ದ ಅವಧಿಗೆ ಹೋಲಿಸಿದರೆ 2000-2016ರ ವರೆಗೆ ತಾಪಮಾನವು ಸರಾಸರಿ 1 ಡಿ.ಸೆ.ನಷ್ಟು ಹೆಚ್ಚಾಗಿದೆ. 1975ರಿಂದ 2000ದ ವರೆಗೆ ಹಿಮಾಲಯದ ನೀರ್ಗಲ್ಲುಗಳು ಎಷ್ಟು ಪ್ರಮಾಣದಲ್ಲಿ ಕರಗಿದ್ದವೋ, ಅದರ ದುಪ್ಪಟ್ಟು ಪ್ರಮಾಣದಲ್ಲಿ ಈಗ ಅವುಗಳು ಕರಗತೊಡಗಿವೆ.

ತಾಪಮಾನ ಏರಿಕೆ

ತಾಪಮಾನ ಏರಿಕೆ

ಜಗತ್ತಿನ ವಿವಿಧೆಡೆಯ ಬೃಹತ್ ನೀರ್ಗಲ್ಲುಗಳು ದಪ್ಪಟ್ಟು ವೇಗದಲ್ಲಿ ಕರಗುತ್ತಿವೆ. ಇದಕ್ಕೆ ಹಿಮಾಲಯದ ನೀರ್ಗಲ್ಲುಗಳು ಕೂಡ ಹೊರತಾಗಿಲ್ಲ ಎಂದು ವಿಜ್ಞಾನಿಗಳ ತಂಡ ಆತಂಕ ವ್ಯಕ್ತಪಡಿಸಿತ್ತು. ತಾಪಮಾನ ಏರಿಕೆಯಿಂದಾಗಿ 21ನೇ ಶತಮಾನದ ಆರಂಭದಿಂದಲೇ ಹಿಮಾಲಯದ ನೀರ್ಗಲ್ಲುಗಳು ದುಪ್ಪಟ್ಟು ವೇಗದಲ್ಲಿ ಕರಗುತ್ತಿವೆ. ಪ್ರಮುಖವಾಗಿ ಭಾರತ, ಚೀನ, ನೇಪಾಲ ಮತ್ತು ಭೂತಾನ್‌ ನಾದ್ಯಂತ 40 ವರ್ಷಗಳ ಕಾಲ ಉಪಗ್ರಹದ ಮೂಲಕ ಪರಿವೀಕ್ಷಣೆ ನಡೆಸಿ 2019ರಲ್ಲಿ ಈ ವರದಿ ತಯಾರಿಸಲಾಗಿತ್ತು.

English summary
A part of the Nanda Devi glacier broke off in Uttarakhand’s Chamoli district on Sunday, leading to massive floods, recalling a 2019 study that warned about the dangers of climate change and said Himalayan glaciers have been melting twice as fast since the start of this century.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X