ಚಾಣಕ್ಯ ಭವಿಷ್ಯ: ಉತ್ತರಾಖಂಡ್ ನಲ್ಲಿ ಬಿಜೆಪಿಗೆ ಭರ್ಜರಿ ಜಯ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 09: ದೇವತೆಗಳ ನಾಡು ಎಂದು ಕರೆಯಲ್ಪಡುವ ಉತ್ತರಾಖಂಡ್ ರಾಜ್ಯದಲ್ಲಿ ಮತ್ತೊಮ್ಮೆ ಕೇಸರಿ ಬಾವುಟ ಹಾರಾಡಲಿದೆ ಎಂದು ಚಾಣಕ್ಯ ಸಂಸ್ಥೆ ಚುನಾವಣೆ ನಂತರದ ಸಮೀಕ್ಷೆ ಹೇಳುತ್ತಿದೆ. ಹರೀಶ್ ರಾವತ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವ ಕನಸಿಗೆ ಭಾರಿ ಪೆಟ್ಟು ಬೀಳಲಿದೆ.

ಚಾಣಕ್ಯ ಸಂಸ್ಥೆಯ ಎಕ್ಸಿಟ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 53 ಸ್ಥಾನ ಲಭಿಸಲಿದ್ದು, ಕಾಂಗ್ರೆಸ್ ಗೆ 15 ಹಾಗೂ ಇತರೆ 2 ಗಳಿಸಲಿದೆ. ರಾವತ್ ಅವರ ಕಾಂಗ್ರೆಸ್ ಸರ್ಕಾರ ಭಾರಿ ಮುಖಭಂಗ ಅನುಭವಿಸಲಿದೆ.[24 ಗಂಟೆ ವಿದ್ಯುತ್, ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ]

Uttarakhand Election Result 2017 Live : Chanakya exit poll predicts a win for BJP

ರೆಬೆಲ್ ಶಾಸಕರನ್ನು ಮುಖ್ಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ನಿಲ್ಲಿಸುವ ಮೂಲಕ ಬಿಜೆಪಿ ಈ ಬಾರಿ ಬಾಜಿ ಗೆದ್ದಿದೆ. ಉಳಿದಂತೆ ಇಂಡಿಯಾ ಟಿವಿ ಸಿ ವೋಟರ್ : ಬಿಜೆಪಿ ಹಾಗೂ ಕಾಂಗ್ರೆಸ್ ಗೆ 29-35 ಸ್ಥಾನ ಸಿಗಲಿದೆ ಎಂದಿದೆ.ಇಂಡಿಯಾ ಟುಡೇ ಆಕ್ಸಿಸ್ ಕೂಡಾ ಬಿಜೆಪಿಗೆ 46-53ರಷ್ಟು ಸ್ಥಾನ ಖಾತ್ರಿ ಎಂದಿದೆ. ಇಂಡಿಯಾ ನ್ಯೂಸ್ ಮಾತ್ರ ಬಿಜೆಪಿಗೆ 38 ಎಂದಿದೆ.

70 ಅಸೆಂಬ್ಲಿ ಸ್ಥಾನವುಳ್ಳ ಉತ್ತರಾಖಂಡ್ ಅಸೆಂಬ್ಲಿಯ ಈಗಿನ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)

ಫೆ 15ರಲ್ಲಿ ಒಂದೆ ಹಂತದಲ್ಲಿ ಮತದಾನ ನಡೆದಿದ್ದು, ಮಾರ್ಚ್ 11 ರಂದು ಫಲಿತಾಂಶ ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chanakya's poll forecast for Uttarakhand assembly elections 2017 put the BJP in the driver's seat with 53 seats with an average expected difference of 7 seats.
Please Wait while comments are loading...