ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ ಚುನಾವಣೆ: ಕಾಂಗ್ರೆಸ್ ಸರ್ಕಾರ ಶಂಕುಸ್ಥಾಪನೆಗೆ ಮಾತ್ರ ಸೀಮಿತ; ಸಿಎಂ ಧಾಮಿ

|
Google Oneindia Kannada News

ಡೆಹ್ರಾಡೂನ್, ಜನವರಿ 18: ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ದಿನಗಣನೆ ಸಮೀಪಿಸಿರುವಾಗಲೇ ರಾಜಕೀಯ ನಾಯಕರುಗಳ ವಾಗ್ಯುದ್ಧ ಜೋರಾಗಿದೆ. ಇದೇ ವೇಳೆ ಬಿಜೆಪಿ ಸರ್ಕಾರ ತಾನು ಆರಂಭಿಸಿದ್ದ ಯೋಜನೆಗಳನ್ನು ತರಾತುರಿಯಿಂದ ಪೂರ್ಣಗೊಳಿಸುತ್ತಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದು, ಕಾಂಗ್ರೆಸ್ ಸರ್ಕಾರ ಕೇವಲ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿತ್ತು ಮತ್ತು ಅವುಗಳನ್ನು ಅಲ್ಲಿಗೆ ನಿಲ್ಲಿಸಿತ್ತು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಆಡಳಿತದ ಕಳೆದ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕ್ರೆಡಿಟ್ ಅನ್ನು ಪಡೆದುಕೊಳ್ಳಲು ಆಗಾಗ್ಗೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಇದು ಎರಡು ಪಕ್ಷಗಳ ನಡುವಿನ ವ್ಯತ್ಯಾಸವಾಗಿದೆ ಎಂದರು.

Uttarakhand Election 2022: Congress Government Only Laid Foundation Stones says CM Pushkar Singh Dhami

"ನೀವು (ಕಾಂಗ್ರೆಸ್) ನಿಮ್ಮ ಅವಧಿಯಲ್ಲಿ ಯೋಜನೆಗಳ ಅಡಿಗಲ್ಲುಗಳನ್ನು ಹಾಕಿದ್ದೀರಿ ಮತ್ತು ನಾವು ಅವುಗಳನ್ನು ಪ್ರಾರಂಭಿಸುತ್ತೇವೆ ಮತ್ತು ಪೂರ್ಣಗೊಳಿಸುತ್ತೇವೆ,'' ಎಂದು ಡೆಹ್ರಾಡೂನ್‌ನಲ್ಲಿ ನಡೆದ ವರ್ಚುವಲ್ ಮೆರವಣಿಗೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ವಾಗ್ದಾಳಿ ನಡೆಸಿದರು.

ಕೇದಾರನಾಥ ಪುನರ್‌ನಿರ್ಮಾಣ, ಚಾರ್‌ಧಾಮ್ ಸರ್ವಋತು ರಸ್ತೆ ಮತ್ತು ಬಹು ನಿರೀಕ್ಷಿತ ಋಷಿಕೇಶ- ಕರ್ಣಪ್ರಯಾಗ ರೈಲು ಮಾರ್ಗವೇ ಬಿಜೆಪಿ ಕೈಗೆತ್ತಿಕೊಂಡ ನಂತರ ಎಲ್ಲ ಯೋಜನೆಗಳ ಕಾಮಗಾರಿಯು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಉತ್ತರಾಖಂಡಕ್ಕೆ 1.5 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಮಂಜೂರು ಮಾಡಿದ್ದು, ಅವುಗಳಲ್ಲಿ ಹಲವು ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ ಎಂದು ಸಿಎಂ ಧಾಮಿ ತಿಳಿಸಿದರು.

"ಕೇದಾರನಾಥದಲ್ಲಿ ಎರಡು ಹಂತಗಳ ಪುನರ್‌ನಿರ್ಮಾಣ ಕಾರ್ಯವು ಈಗಾಗಲೇ ಪೂರ್ಣಗೊಂಡಿದೆ ಮತ್ತು ಮೂರನೆಯದರಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಮಾಸ್ಟರ್‌ಪ್ಲಾನ್‌ಗೆ ಅನುಗುಣವಾಗಿ ಬದರಿನಾಥದಲ್ಲಿ ಪುನರ್‌ನಿರ್ಮಾಣ ಕಾರ್ಯವೂ ಪ್ರಕ್ರಿಯೆಯಲ್ಲಿದೆ,'' ಎಂದು ಪುಷ್ಕರ್ ಸಿಂಗ್ ಧಾಮಿ ಹೇಳಿದರು.

Uttarakhand Election 2022: Congress Government Only Laid Foundation Stones says CM Pushkar Singh Dhami

ಡೆಹ್ರಾಡೂನ್ ವಿಮಾನ ನಿಲ್ದಾಣವನ್ನು ಈಗಾಗಲೇ 250 ಜನರ ಹಿಂದಿನ ಸಾಮರ್ಥ್ಯದಿಂದ 1,600 ಜನರಿಗೆ ಏಕಕಾಲದಲ್ಲಿ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ನವೀಕರಿಸಲಾಗಿದೆ ಮತ್ತು ಈಗ ಅದು ವಿಶ್ವ ದರ್ಜೆಯ ವಿಮಾನ ನಿಲ್ದಾಣವಾಗುವ ಹಾದಿಯಲ್ಲಿದೆ ಎಂದರು.

ರಸ್ತೆ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಕೆಲಸವನ್ನು ಪ್ರಸ್ತಾಪಿಸಿದ ಸಿಎಂ ಧಾಮಿ,ಕಳೆದ ಐದು ವರ್ಷಗಳಲ್ಲಿ ಪ್ರಾರಂಭಿಸಿದ ಎಲ್ಲಾ ಮೂಲಸೌಕರ್ಯ ಯೋಜನೆಗಳಿಗೆ "ಡಬಲ್ ಇಂಜಿನ್' (ರಾಜ್ಯ ಮತ್ತು ಕೇಂದ್ರ) ಸರ್ಕಾರಕ್ಕೆ ಮನ್ನಣೆ ನೀಡಿದರು.

ದಿವಂಗತ ಜನರಲ್ ಬಿಪಿನ್ ರಾವತ್‌ರನ್ನು ಕಾಂಗ್ರೆಸ್ ನಾಯಕರು ಹೇಗೆ "ಬೀದಿ ಬದಿಯ ಗೂಂಡಾ' ಎಂದು ಕರೆದಿದ್ದಾರೆ ಮತ್ತು ಚುನಾವಣಾ ಲಾಭಕ್ಕಾಗಿ ಪಕ್ಷವು ಈಗ ತನ್ನ ಚುನಾವಣಾ ಮೆರವಣಿಗೆಗಳಲ್ಲಿ ಅವರ ಪೋಸ್ಟರ್‌ಗಳನ್ನು ಅಳವಡಿಸುತ್ತಿದೆ ಎಂದು ಪುಷ್ಕರ್ ಸಿಂಗ್ ಧಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಉತ್ತರಾಖಂಡ ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಮಾತನಾಡಿ, ಪ್ರಧಾನಿಯವರು ಉತ್ತರಾಖಂಡದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದಾರೆ ಮತ್ತು ಪುಷ್ಕರ್ ಸಿಂಗ್ ಧಾಮಿ ಅವರಂತಹ ಯುವ ಮುಖ್ಯಮಂತ್ರಿ ತಮ್ಮ ಎಲ್ಲಾ ಶಕ್ತಿ ಮತ್ತು ಸಮಯವನ್ನು ಹೇಗೆ ಕಾರ್ಯಗತಗೊಳಿಸುತ್ತಿದ್ದಾರೆ ಎಂಬುದನ್ನು ಜನರು ತಿಳಿದಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಕೆಲಸ ನೋಡಿ ಜನತೆ ಮತ್ತೆ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ನಿಮ್ಮ ಆಶೀರ್ವಾದದೊಂದಿಗೆ ನಾವು 2017ಕ್ಕಿಂತ ಈ ಬಾರಿ ದೊಡ್ಡ ವಿಜಯವನ್ನು ದಾಖಲಿಸುವ ನಮ್ಮ ಗುರಿಯನ್ನು ಖಂಡಿತವಾಗಿಯೂ ಸಾಧಿಸುತ್ತೇವೆ,'' ಎಂದು ಮದನ್ ಕೌಶಿಕ್ ಹೇಳಿದರು.

ಫೆ.14ರಂದು ಮತದಾನ
ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ.

Recommended Video

ಹಿಮಪಾತದಲ್ಲಿ ಸಿಲುಕಿದ 14 ಜನರನ್ನು ರಕ್ಷಿಸಿದ ಭಾರತೀಯ ಸೇನೆ | Oneindia Kannada

ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

English summary
Congress government only laid foundation stones of projects and left them, BJP government was completing the ones it had started, Uttarakhand Chief Minister Pushkar Singh Dhami said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X