ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ; ಬಿಜೆಪಿ ಅಧ್ಯಕ್ಷನ ವಿರುದ್ಧ ಜನಪ್ರಿಯ ವ್ಯಕ್ತಿಯನ್ನು ಕಣಕ್ಕಿಳಿಸಿದ ಕಾಂಗ್ರೆಸ್

|
Google Oneindia Kannada News

ಉತ್ತರಾಖಂಡ, ಜನವರಿ 24: ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿವೆ. ಅದರಲ್ಲೂ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ.

ಉತ್ತರಾಖಂಡದ ಪ್ರಮುಖ ಧಾರ್ಮಿಕ ಹರಿದ್ವಾರ ನಗರ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ರಾಜ್ಯ ಅಧ್ಯಕ್ಷ ಮದನ್ ಕೌಶಿಕ್ ಅವರನ್ನು ಕಣಕ್ಕಿಳಿಸಿದ್ದು, ಇವರು ಈಗಾಗಲೇ ಹರಿದ್ವಾರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷವು ಸ್ಥಳೀಯ ವೀಕ್ಷಕ ಸತ್ಪಾಲ್ ಬ್ರಹ್ಮಚಾರಿಗೆ ಟಿಕೆಟ್ ನೀಡಿದೆ. ಹರಿದ್ವಾರ ನಗರ ಪಾಲಿಕೆಯ ಮಾಜಿ ಅಧ್ಯಕ್ಷರಾಗಿರುವ (ಈಗ ನಗರ ನಿಗಮ) ಸತ್ಪಾಲ್ ಬ್ರಹ್ಮಚಾರಿಯವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಪಕ್ಷದ ನಿರೀಕ್ಷೆ ಮೀರಿ ಬೆಂಬಲಿಗರನ್ನು ಗೆದ್ದಿತ್ತು. ಸತ್ಪಾಲ್ ಬ್ರಹ್ಮಚಾರಿಯನ್ನು ಕ್ಲೀನ್ ಇಮೇಜ್ ಹೊಂದಿರುವವರು ಎಂದು ಪರಿಗಣಿಸಲಾಗಿದೆ ಮತ್ತು ಆಡಳಿತ ವಿರೋಧಿ ಎದುರಿಸುತ್ತಿರುವ ಮದನ್ ಕೌಶಿಕ್‌ಗೆ ಕಠಿಣ ಹೋರಾಟವನ್ನು ನೀಡುವ ನಿರೀಕ್ಷೆಯಿದೆ.

Uttarakhand Election 2022: BJP chief Madan Koushik Contest against Congress seer

ಹರಿದ್ವಾರದಲ್ಲಿ ಜನಪ್ರಿಯ ಕಾಂಗ್ರೆಸ್ ಮುಖವಾಗಿರುವ ಸತ್ಪಾಲ್ ಬ್ರಹ್ಮಚಾರಿ ಅವರು ಎರಡನೇ ಬಾರಿಗೆ ಪಕ್ಷದ ಟಿಕೆಟ್ ಪಡೆದಿದ್ದಾರೆ. ವಾಸ್ತವವಾಗಿ 2017ರಲ್ಲಿ ಹರಿದ್ವಾರ ನಗರದಿಂದ ಸತ್ಪಾಲ್ ಬ್ರಹ್ಮಚಾರಿ ಬದಲಿಗೆ ಮತ್ತೊಬ್ಬ ದಾರ್ಶನಿಕ ಬ್ರಹ್ಮಸ್ವರೂಪ ಬ್ರಹ್ಮಚಾರಿ ಕಾಂಗ್ರೆಸ್ ಟಿಕೆಟ್ ಪಡೆದಾಗ, ಅನೇಕ ಕಾರ್ಯಕರ್ತರು ನಿರಾಶೆಗೊಂಡಿದ್ದರು. ಇದರಿಂದ ಕೌಶಿಕ್ ಗೆಲುವು ಸುಲಭವಾಯಿತು ಎಂದು ಹೆಸರು ಹೇಳಲಿಚ್ಛಿಸದ ಹರಿದ್ವಾರದ ಅತೃಪ್ತ ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಹಿಂದಿನ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಅಂದರೆ 2007ರಲ್ಲಿ ಕಾಂಗ್ರೆಸ್ ಪುರುಷೋತ್ತಮ ಶರ್ಮಾ ಅವರನ್ನು ಮದನ್ ಕೌಶಿಕ್ ವಿರುದ್ಧ ಕಣಕ್ಕಿಳಿಸಿತ್ತು ಮತ್ತು ಶರ್ಮಾ 28,000ಕ್ಕೂ ಹೆಚ್ಚು ಮತಗಳಿಂದ ಸೋತಿದ್ದರು. ಇದು ಆ ಚುನಾವಣೆಯ ಅತಿ ಹೆಚ್ಚು ಮತಗಳ ಅಂತರದ ಗೆಲುವಾಗಿತ್ತು.

2012ರ ಚುನಾವಣೆಯಲ್ಲಿ ಮದನ್ ಕೌಶಿಕ್ ವಿರುದ್ಧ ಸತ್ಪಾಲ್ ಬ್ರಹ್ಮಚಾರಿ ಕಣಕ್ಕಿಳಿದು ಸೋತಿದ್ದರು. ಆದರೆ ಈ ಬಾರಿ ಕೇವಲ 8,000 ಮತಗಳ ಅಂತರಕ್ಕೆ ಇಳಿಕೆಯಾಗಿತ್ತು. ಮತ್ತೆ 2017ರಲ್ಲಿ ಕಾಂಗ್ರೆಸ್ ಬ್ರಹ್ಮಸ್ವರೂಪ ಬ್ರಹ್ಮಚಾರಿಯನ್ನು ಕಣಕ್ಕಿಳಿಸಿದಾಗ, ಮದನ್ ಕೌಶಿಕ್ 35,000 ಮತಗಳ ಭಾರೀ ಅಂತರದಿಂದ ಗೆದ್ದರು.

ಸ್ಥಳೀಯ ನಿವಾಸಿಗಳ ಪ್ರಕಾರ, ಮದನ್ ಕೌಶಿಕ್ ಆಡಳಿತ-ವಿರೋಧಿ ಅಲೆಯನ್ನು ಎದುರಿಸಬಹುದಾದರೂ, ಅವರ ಪರವಾಗಿ ಹಲವಾರು ಅಂಶಗಳಿವೆ. ಅವರು ಎರಡು ಬಾರಿ ಕ್ಯಾಬಿನೆಟ್ ಸಚಿವರಾಗಿದ್ದರು ಮತ್ತು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ ಎಂದು ಸ್ಥಳೀಯ ಆರ್‌ಎಸ್‌ಎಸ್ ಕಾರ್ಯಕರ್ತ ರವಿ ದತ್ ಶರ್ಮಾ ಹೇಳಿದ್ದು, "ಮದನ್ ಕೌಶಿಕ್ ಇತ್ತೀಚೆಗೆ ಹರಿದ್ವಾರ ನಗರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ, ಅವರು ವಿದ್ಯುತ್ ಕೇಬಲ್‌ಗಳು ಮತ್ತು ಗ್ಯಾಸ್ ಪೈಪ್‌ಲೈನ್‌ಗಳನ್ನು ಭೂಗತಗೊಳಿಸಲು ಸಹಾಯ ಮಾಡಿದ್ದಾರೆ,'' ಎಂದು ಹೇಳಿದರು.

"ಕೌಶಿಕ್‌ಗೆ ಕಠಿಣ ಹೋರಾಟವನ್ನು ನೀಡಬಲ್ಲ ಕಾಂಗ್ರೆಸ್‌ನ ಸತ್ಪಾಲ್ ಬ್ರಹ್ಮಚಾರಿ ಏಕೈಕ ನಾಯಕ. ಆದರೆ, ಕೌಶಿಕ್ ಕೂಡ ಸವಾಲುಗಳನ್ನು ಎದುರಿಸುತ್ತಾರೆ. ಅಮೃತ ಗಂಗಾ, ನಮಾಮಿ ಗಂಗೆ ಮತ್ತು ಭೂಗತ ಕೇಬಲ್ ಹಾಕುವಿಕೆಯಂತಹ ಯೋಜನೆಗಳಿಂದ ಜನರು ತೃಪ್ತರಾಗಿಲ್ಲ," ಎಂದು ಭೂಪತ್ವಾಲಾ ನಿವಾಸಿ ರತನ್ ಮಣಿ ದೋಭಾಲ್ ಹೇಳಿದ್ದಾರೆ.

ಫೆ.14ರಂದು ಮತದಾನ
ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ.

ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.

English summary
Uttarakhand Election 2022: BJP chief Madan Koushik Contest against Congress seer Satpal Brahmachari, close contest likely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X