ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ ಚುನಾವಣೆ: ಎಎಪಿ 18 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

|
Google Oneindia Kannada News

ಉತ್ತರಾಖಂಡ, ಜನವರಿ 11: ಮುಂಬರುವ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮಂಗಳವಾರ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 18 ಹೆಸರುಗಳಿವೆ. ಸದ್ಯಕ್ಕೆ ಎಎಪಿ 70 ಸ್ಥಾನಗಳಲ್ಲಿ 42 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಗಜೇಂದ್ರ ಚೌಹಾಣ್ ಶ್ರೀನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರೆ, ಅರವಿಂದ್ ವರ್ಮಾ ಕೋಟ್‌ದ್ವಾರದಿಂದ ಸ್ಪರ್ಧಿಸಲಿದ್ದಾರೆ. ನಾರಾಯಣ ಸುರಡಿ ಅವರು ಧಾರ್ಚುಲಾದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದು, ಪ್ರಕಾಶ್‌ಚಂದ್ ಉಪಾಧ್ಯಾಯ ಅವರು ದ್ವಾರಹತ್‌ನಿಂದ ಕಣಕ್ಕಿಳಿದಿದ್ದಾರೆ.

ಜಾಗೇಶ್ವರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾರಾದತ್ ಪಾಂಡೆ ಅವರನ್ನು ಪಕ್ಷ ಆಯ್ಕೆ ಮಾಡಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಆಯ್ಕೆಯಾದ ಇತರ ಅಭ್ಯರ್ಥಿಗಳೆಂದರೆ ಸಾಗರ್ ಪಾಂಡೆ, ಭುವನ್ ಆರ್ಯ, ಜರ್ನೈಲ್ ಸಿಂಗ್ ಕಾಲಿ ಮತ್ತು ಕುಲ್ವಂತ್ ಸಿಂಗ್ ಅವರು ಕ್ರಮವಾಗಿ ಭೀಮತಾಲ್, ನೈನಿತಾಲ್ (ಎಸ್‌ಸಿ), ಗದರ್‌ಪುರ ಮತ್ತು ಕಿಚ್ಚಾ ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ.

Uttarakhand election 2022: Aam Aadmi Party Releases 2nd List of 18 Candidates

ಎರಡನೇ ಪಟ್ಟಿಯಲ್ಲಿ 18 ಎಎಪಿ ಅಭ್ಯರ್ಥಿಗಳ ಹೆಸರು ಬಿಡುಗಡೆ
1. ಗುಡ್ಡು ಲಾಲ್ - ತರಲಿ (SC)
2. ಸುಮಂತ್ ತಿವಾರಿ - ಕೇದಾರನಾಥ
3. ಅಮೇಂದ್ರ ಬಿಷ್ಟ್ - ಧನೌಲ್ತಿ
4. ನವೀನ್ ಪಿರ್ಷಾಲಿ - ರಾಯ್ಪುರ್
5. ರವೀಂದ್ರ ಆನಂದ್ - ಡೆಹ್ರಾಡೂನ್ ಕ್ಯಾಂಟ್
6. ತ್ರಿಲೋಕ್ ಸಿಂಗ್ ನೇಗಿ - ತೆಹ್ರಿ
7. ರಾಜು ಮೌರ್ಯ - ದೋಯಿವಾಲಾ
8. ಮಮತಾ ಸಿಂಗ್ - ಜ್ವಾಲಾಪುರ (SC)
9. ಮನೋರಮಾ ತ್ಯಾಗಿ - ಖಾನ್ಪುರ್
10. ಗಜೇಂದ್ರ ಚೌಹಾಣ್ - ಶ್ರೀನಗರ
11. ಅರವಿಂದ್ ವರ್ಮಾ - ಕೋಟ್‌ದ್ವಾರ
12. ನಾರಾಯಣ ಸುರಡಿ - ಧಾರ್ಚುಲಾ
13. ಪ್ರಕಾಶ್ ಚಂದ್ರ ಉಪಾಧ್ಯಾಯ - ದ್ವಾರಹತ್
14. ತಾರಾ ದತ್ ಪಾಂಡೆ - ಜಾಗೇಶ್ವರ್
15. ಸಾಗರ್ ಪಾಂಡೆ - ಭೀಮತಾಲ್
16. ಡಾ. ಭುವನ್ ಆರ್ಯ - ನೈನಿತಾಲ್ (SC)
17. ಜರ್ನೈಲ್ ಸಿಂಗ್ ಕಲಿ - ಗದರ್ಪುರ್
18. ಕುಲ್ವಂತ್ ಸಿಂಗ್ (ಕಿಚ್ಚ)

ಒಟ್ಟು 70 ಸ್ಥಾನಗಳ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಕುರಿತು ಶನಿವಾರದಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಉತ್ತರಾಖಂಡ ಸೇರಿದಂತೆ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು. ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ ಮತ್ತು ಉತ್ತರಾಖಂಡದ ಮತ ಎಣಿಕೆ ಮತ್ತು ಫಲಿತಾಂಶ ಮಾರ್ಚ್ 10ರಂದು ನಡೆಯಲಿದೆ.

ಕೋವಿಡ್- 19 ಉಲ್ಬಣದ ಹಿನ್ನೆಲೆಯಲ್ಲಿ ಜನವರಿ 15ರವರೆಗೆ ಯಾವುದೇ ಭೌತಿಕ ರಾಜಕೀಯ ಮೆರವಣಿಗೆಗಳು ಮತ್ತು ರೋಡ್‌ಶೋಗಳನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗವು ನಿರ್ದೇಶಿಸಿದೆ. ಆದಾಗ್ಯೂ, ಮುಂದಿನ ಮೆರವಣಿಗೆಗಳು ಮತ್ತು ಚುನಾವಣಾ ಪ್ರಚಾರ ಸಭೆಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮತ್ತು ಜಿಲ್ಲಾಡಳಿತದ ಪೂರ್ವಾನುಮತಿಯೊಂದಿಗೆ ಮಾತ್ರ ಅನುಮತಿಸಲಾಗುವುದು.

Recommended Video

Ross Taylor ಕಡೇ ಪಂದ್ಯದ ಕಡೇ ಎಸೆತದಲ್ಲಿ ಮಾಡಿದ Magic | Oneindia Kannada

ಈ ಮಧ್ಯೆ, ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರವು ಜನವರಿ 16ರವರೆಗೆ ರಾಜ್ಯದಲ್ಲಿ ಎಲ್ಲಾ ರಾಜಕೀಯ ಮೆರವಣಿಗೆಗಳು ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿದೆ.

English summary
The Aam Aadmi Party on Tuesday released its second list of candidates for the upcoming Uttarakhand assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X