ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ ಪರ್ವತದಲ್ಲಿ ಸರೋವರ ಸೃಷ್ಟಿ; ಮತ್ತೊಂದು ಅನಾಹುತದ ಎಚ್ಚರಿಕೆ

|
Google Oneindia Kannada News

ಡೆಹ್ರಾಡೂನ್, ಫೆಬ್ರುವರಿ 12: ಉತ್ತರಾಖಂಡದ ಚಾಮೋಲಿ ಜಿಲ್ಲೆಯಲ್ಲಿ ಫೆಬ್ರುವರಿ 7ರಂದು ಸಂಭವಿಸಿದ ಹಿಮಪ್ರವಾಹಕ್ಕೆ ಸಂಬಂಧಿಸಿದಂತೆ ಹಲವು ವಿಶ್ಲೇಷಣೆಗಳು ಸಾಗಿವೆ.

ಪರ್ವತದಲ್ಲಿನ ಬೃಹತ್ ನೀರ್ಗಲ್ಲು ಒಡೆದಿರುವುದು ಹಿಮಪ್ರವಾಹಕ್ಕೆ ಕಾರಣವಾಗಿದೆ ಎಂಬುದು ಒಂದು ಸಾಧ್ಯತೆಯಾದರೆ, ಹಿಮಪರ್ವತದಡಿಯಲ್ಲಿನ ಅಂತರ್ಜಲದ ಮೇಲೆ ಒತ್ತಡ ಹೆಚ್ಚಾಗಿ ರಭಸದಿಂದ ನುಗ್ಗಿ ಪ್ರವಾಹವಾಗಿರುವ ಸಾಧ್ಯತೆಯಿದೆ ಎಂದು ಕೆಲವು ವಿಜ್ಞಾನಿಗಳು ತಿಳಿಸಿದ್ದಾರೆ. ಇದೀಗ ರಿಷಿ ಗಂಗಾ ಮೇಲ್ಭಾಗದಲ್ಲಿ ತಾತ್ಕಾಲಿಕ ಸರೋವರವೊಂದು ಸೃಷ್ಟಿಯಾಗಿರುವುದಾಗಿ ಭೂವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಸರೋವರ ಒಡೆದು ನುಗ್ಗಿದರೆ ಮತ್ತೆ ಅಪಾಯ ಸಂಭವಿಸುವ ಸೂಚನೆಯನ್ನು ನೀಡಿದ್ದಾರೆ. ಮುಂದೆ ಓದಿ...

ಉತ್ತರಾಖಂಡ ಅನಾಹುತ: ಹಿಮಸ್ಫೋಟದ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋಉತ್ತರಾಖಂಡ ಅನಾಹುತ: ಹಿಮಸ್ಫೋಟದ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ

 ತಾತ್ಕಾಲಿಕ ಸರೋವರ ದೃಢಪಡಿಸಿದ ಉಪಗ್ರಹ ಚಿತ್ರಗಳು

ತಾತ್ಕಾಲಿಕ ಸರೋವರ ದೃಢಪಡಿಸಿದ ಉಪಗ್ರಹ ಚಿತ್ರಗಳು

ಹಿಮಪ್ರವಾಹ ಸಂಭವಿಸಿದ ನಂತರ ಪ್ರವಾಹದೊಂದಿಗೆ ಹರಿದು ಬಂದ ಬೃಹತ್ ಪ್ರಮಾಣದ ತ್ಯಾಜ್ಯ ಹಾಗೂ ಹಿಮದ ನೀರು ಒಂದೆಡೆ ಶೇಖರಣೆಯಾಗಿದ್ದು, ಡಿಆರ್ ಡಿಒ ಹಾಗೂ ಎನ್‌ಡಿಆರ್ ಎಫ್ ವಿಜ್ಞಾನಿಗಳು ಇವುಗಳ ಉಪಗ್ರಹ ಚಿತ್ರಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

 ಬೃಹತ್ ಪ್ರಮಾಣದಲ್ಲಿ ಶೇಖರಣೆಯಾಗಿರುವ ತ್ಯಾಜ್ಯ ಹಾಗೂ ನೀರು

ಬೃಹತ್ ಪ್ರಮಾಣದಲ್ಲಿ ಶೇಖರಣೆಯಾಗಿರುವ ತ್ಯಾಜ್ಯ ಹಾಗೂ ನೀರು

ಪರಿಸ್ಥಿತಿಯ ಪರಿಶೀಲನೆಗೆ ಈಗಾಗಲೇ ತಜ್ಞರನ್ನು ಕಳುಹಿಸಲಾಗಿದೆ. ಚಾಪರ್ ಗಳಲ್ಲಿ ಹಾಗೂ ಡ್ರೋನ್, ವೈಮಾನಿಕ ಸಮೀಕ್ಷೆ ಮೂಲಕ ಸರೋವರ ಸೃಷ್ಟಿಯ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಎನ್ ಡಿಆರ್ ಎಫ್ ನಿರ್ದೇಶ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ. ಈ ಸರೋವರವು ಫುಟ್ ಬಾಲ್ ಕ್ರೀಡಾಂಗಣಕ್ಕಿಂತ ಮೂರು ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. 350 ಮೀಟರ್ ಎತ್ತರ ಹಾಗೂ 60 ಮೀಟರ್ ಆಳವಿರಬಹುದು ಎನ್ನಲಾಗಿದೆ.

ಎಂಥ ದುರ್ವಿಧಿ; ಉತ್ತರಾಖಂಡ ಹಿಮಪ್ರವಾಹದಲ್ಲಿ ಕಳೆದುಹೋದವರ ಮನಕಲಕುವ ಕಥೆಗಳು...ಎಂಥ ದುರ್ವಿಧಿ; ಉತ್ತರಾಖಂಡ ಹಿಮಪ್ರವಾಹದಲ್ಲಿ ಕಳೆದುಹೋದವರ ಮನಕಲಕುವ ಕಥೆಗಳು...

"ಯಾವಾಗ ಬೇಕಾದರೂ ಇದು ಒಡೆಯಬಹುದು"

ಗರ್ವಾಲ್ ವಿಶ್ವವಿದ್ಯಾಲಯದ ಭೂವಿಜ್ಞಾನಿ ನರೇಶ್ ರಾಣಾ ಎಂಬುವರು ಈ ಕುರಿತು ವಿವರಣೆ ನೀಡಿದ್ದಾರೆ. ರಿಷಿ ಗಂಗಾ ಮೇಲ್ಭಾಗದಲ್ಲಿ ಸರೋವರದಂತೆ ನಿರ್ಮಾಣವಾಗಿದೆ. ಭೂಕುಸಿತವಾಗಿ, ಒಂದೆಡೆ ಬೃಹತ್ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಂಡಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇದು ಒಡೆದು ಪ್ರವಾಹ ಸೃಷ್ಟಿಯಾಗಬಹುದು. ಹೀಗಾಗಿ ರಕ್ಷಣಾ ಪಡೆಗಳು ಎಚ್ಚರಿಕೆಯಿಂದಿರಬೇಕಿದೆ ಎಂದು ತಿಳಿಸಿದ್ದಾರೆ.

 36 ಮೃತದೇಹಗಳು ಪತ್ತೆ

36 ಮೃತದೇಹಗಳು ಪತ್ತೆ

ಭಾನುವಾರ ಚಾಮೋಲಿ ಜಿಲ್ಲೆಯ ತಪೋವನ-ರೇಣಿ ಪ್ರದೇಶದಲ್ಲಿ ನೀರ್ಗಲ್ಲು ಒಡೆದಿದ್ದು, ಧೌಲಿ ಗಂಗಾ ಹಾಗೂ ಅಲಕಾನಂದ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಹಲವು ಮನೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ನಾಶವಾಗಿದ್ದು, ಆರನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ 36 ಮೃತದೇಹಗಳು ಪತ್ತೆಯಾಗಿವೆ. ಇನ್ನೂ 200 ಜನ ಕಾಣೆಯಾಗಿದ್ದಾರೆ.
ಸರೋವರ ನಿರ್ಮಾಣದ ಕುರಿತು ಮಾಹಿತಿ ದೊರೆತಿದೆ. ಎಚ್ಚರಿಕೆಯಿಂದಿರಲು ಜನರಿಗೆ ಸೂಚಿಸಲಾಗಿದೆ. ವಿಜ್ಞಾನಿಗಳು ಈ ಬಗ್ಗೆ ಪರಿಶೀಲನೆ ಮುಂದುವರೆಸಿದ್ದಾರೆ ಎಂದು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

English summary
High resolution satellite images have identified the spot where lake was formed by the debris of the avalanche in uttarakhand,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X