ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ಗೆ ಕೊರೊನಾ ಸೋಂಕು

|
Google Oneindia Kannada News

ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಖುದ್ದಾಗಿ ರಾವತ್ ಅವರೇ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದ ತಕ್ಷಣ ಕ್ಯಾಬಿನೆಟ್ ಸಚಿವರು, ಬಿಜೆಪಿ ಕಾರ್ಯಕರ್ತರು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಉತ್ತರಾಖಂಡ್ ಬಿಜೆಪಿ ಶಾಸಕ ಕೊರೊನಾ ಸೋಂಕಿಗೆ ಬಲಿಉತ್ತರಾಖಂಡ್ ಬಿಜೆಪಿ ಶಾಸಕ ಕೊರೊನಾ ಸೋಂಕಿಗೆ ಬಲಿ

ಸಿಎಂ ಮಾಡಿರುವ ಟ್ವೀಟ್ ಅನುಸಾರ, ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಕಂಡುಬಂದಿಲ್ಲ. ಆದರೆ ವೈದ್ಯರು ಸೂಚನೆ ಮೇರೆಗೆ ಗೃಹ ಬಂಧನದಲ್ಲಿರಲಿದ್ದಾರೆ.

Uttarakhand CM Trivendra Singh Rawat Tests Positive For Covid 19

ಹಾಗೆಯೇ ಯಾರ್ಯಾರು ಅವರ ಸಂಪರ್ಕಕ್ಕೆ ಬಂದಿದ್ದರೋ ಅವರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ.

ಉತ್ತರಖಂಡದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ 84,689 ಮಂದಿಗೆ ಕೊರೊನಾ ಸೋಂಕು ತಗುಲಿದೆ. 6062 ಕೊರೊನಾ ಸಕ್ರಿಯ ಪ್ರಕರಣಗಳಿವೆ. 1384 ಮಂದಿ ಮೃತಪಟ್ಟಿದ್ದಾರೆ. ಈ ತಿಂಗಳ ಆರಂಭದಲ್ಲಿ ಸಚಿವರಾದ ರೇಖಾ ಆರ್ಯಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು.

English summary
Uttarakhand Chief Minister Trivendra Singh Rawat tested positive for coronavirus on Friday. "I got tested for corona and the report has come back positive. I am well and there are no symptoms," Rawat said in a tweet while making the announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X