ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ಲಜನಕವನ್ನು ಉಚ್ವಾಸ-ನಿಶ್ವಾಸ ಮಾಡುವ ಏಕೈಕ ಪ್ರಾಣಿ ಗೋವು!

|
Google Oneindia Kannada News

ಡೆಹರಾಡೂನ್, ಜುಲೈ 26: ಎಲ್ಲ ಪ್ರಾಣಿ ಪಕ್ಷಿಗಳೂ ಆಮ್ಲಜನಕವನ್ನು ಎಳೆದುಕೊಂಡು ಇಂಗಾಲದ ಡೈ ಆಕ್ಸೈಡ್‌ಅನ್ನು ಹೊರಬಿಡುತ್ತವೆ. ಸಸ್ಯಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕ ಹೊರಬಿಡುತ್ತವೆ ಎಂಬುದನ್ನು ಓದಿದ್ದೇವೆ. ಆದರೆ, ಗೋವುಗಳು ಆಮ್ಲಜನಕವನ್ನು ಒಳಗೆಳೆದುಕೊಂಡು, ಆಮ್ಲಜನಕವನ್ನೇ ಹೊರಬಿಡುತ್ತವೆ ಎನ್ನುವುದು ಗೊತ್ತಿದೆಯೇ?

ಇದು ವಿಜ್ಞಾನಿಗಳ ಅಧ್ಯಯನ ವರದಿಯಲ್ಲ. ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಸಂಶೋಧನೆ!

ಬೇಟಿ ಬಚಾವೋ: ಉತ್ತರಕಾಶಿಯ ಈ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳೇ ಜನಿಸುತ್ತಿಲ್ಲ!ಬೇಟಿ ಬಚಾವೋ: ಉತ್ತರಕಾಶಿಯ ಈ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳೇ ಜನಿಸುತ್ತಿಲ್ಲ!

ಆಮ್ಲಜನಕವನ್ನು ಉಚ್ವಾಸ-ನಿಶ್ವಾಸ ಮಾಡುವ ಏಕೈಕ ಪ್ರಾಣಿಯೆಂದರೆ ಹಸು. ಹಸುವಿಗೆ ಮಸಾಜ್ ಮಾಡುವ ಮೂಲಕ ನಮ್ಮ ಉಸಿರಾಟದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ನಗೆಪಾಟಲಿಗೀಡಾಗಿದ್ದಾರೆ.

Uttarakhand CM Trivendra Singh Rawat Cow Inhales Exhales Oxygen

ಹಸುವಿನ ಹಾಲು ಮತ್ತು ಗೋಮೂತ್ರದಿಂದ ಇರುವ ವೈದ್ಯಕೀಯ ಉಪಯೋಗಗಳ ಕುರಿತು ನಡೆದ ಕಾರ್ಯಕ್ರಮವೊಂದರಲ್ಲಿ ರಾವತ್ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಗೋವುಗಳು ಆಮ್ಲಜನಕವನ್ನು ಒಳಗೆ ಎಳೆದುಕೊಳ್ಳುವುದು ಮಾತ್ರವಲ್ಲ, ಆಮ್ಲಜನಕವನ್ನೇ ಹೊರಬಿಡುತ್ತವೆ ಎಂದು ಅವರು ಹೇಳಿದ್ದಾರೆ.

ಒಂದು ಹಸುವಿಗೆ ಮಸಾಜ್ ಮಾಡಿದರೆ ಉಸಿರಾಟದ ಸಮಸ್ಯೆಯಿದ್ದರೆ ನಿವಾರಣೆಯಾಗುತ್ತದೆ. ಗೋವುಗಳೊಂದಿಗೆ ಆಪ್ತ ಬಾಂಧವ್ಯ ಹೊಂದಿದ್ದರೆ ಕ್ಷಯ ರೋಗವೂ ವಾಸಿಯಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಸಸ್ಯಜ್ಞಾನ(?!) ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಪ್ರಜ್ವಲ್ ರೇವಣ್ಣ ಸಸ್ಯಜ್ಞಾನ(?!) ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

ಅಂದಹಾಗೆ, ಈ 'ಸಂಶೋಧನೆ'ಯ ಶ್ರೇಯಸ್ಸು ರಾವತ್ ಅವರಿಗೆ ಸಿಗುವುದಿಲ್ಲ. ಏಕೆಂದರೆ ಎರಡು ವರ್ಷಗಳ ಮೊದಲೇ ಸಚಿವರೊಬ್ಬರು ಈ 'ಸಂಶೋಧನೆ' ಮಂಡಿಸಿದ್ದರು.

2017ರಲ್ಲಿ ರಾಜಸ್ಥಾನದ ಶಿಕ್ಷಣ ಸಚಿವರಾಗಿದ್ದ ವಾಸುದೇವ್ ದೇವ್ನಾನಿ ಆಮ್ಲಜನಕವನ್ನು ಉಚ್ವಾಸ-ನಿಶ್ವಾಸ ಮಾಡುವ ಏಕೈಕ ಪ್ರಾಣಿ ಗೋವು ಎಂದು ಹೇಳಿಕೆ ನೀಡಿದ್ದರು.

ಉತ್ತರಾಖಂಡ್‌ನ ಮುಖ್ಯಮಂತ್ರಿ ಕಚೇರಿ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಇದು ಉತ್ತರಾಖಂಡದ ಗುಡ್ಡಗಾಡುಗಳಲ್ಲಿ ಇರುವ ಸಾಮಾನ್ಯ ನಂಬಿಕೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
Uttarakhand CM Trivendra Singh Rawat said Cow is the only animal which Inhales and Exhales Oxygen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X