ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್‌ ರಾಜೀನಾಮೆ?

|
Google Oneindia Kannada News

ಡೆಹ್ರಾಡೂನ್, ಜು. 02: ರಾಜ್ಯದ ಎರಡು ಪ್ರಮುಖ ಕ್ಷೇತ್ರಗಳಾದ ಗಂಗೋತ್ರಿ ಮತ್ತು ಹಲ್ದ್ವಾನಿಯ ಉಪಚುನಾವಣೆಗೂ ಮುಂಚಿತವಾಗಿ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಶುಕ್ರವಾರ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ, ಇನ್ನಷ್ಟೇ ರಾಜೀನಾಮೆ ಅಂಗೀಕಾರ ಆಗಬೇಕಿದೆ ಎಂದು ವರದಿಗಳು ತಿಳಿಸಿವೆ.

ರಾವತ್ ಪ್ರಸ್ತುತ ಹಿಮಾಲಯನ್ ರಾಜ್ಯದ ಗರ್ವಾಲ್ ಕ್ಷೇತ್ರದ ಲೋಕಸಭಾ ಸಂಸದರಾಗಿದ್ದು, ಭಾರತದ ಸಂವಿಧಾನದ ಪ್ರಕಾರ ಸಿಎಂ ಆಗಲು ರಾಜ್ಯ ವಿಧಾನಸಭೆಯಲ್ಲಿ ಸದಸ್ಯರಾಗಿರಬೇಕು. ರಾವತ್‌ ಹುದ್ದೆಯಲ್ಲಿ ಮುಂದುವರಿಯಲು ಸೆಪ್ಟೆಂಬರ್ 10 ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಾಗಿದೆ.

ತೀರಥ್ ಸಿಂಗ್ ರಾವತ್‌ ಭಾರತೀಯ ಜನತಾ ಪಕ್ಷದ ಹೈಕಮಾಂಡ್‌ನ ತೀರ್ಮಾನದಂತೆ ಈ ವರ್ಷದ ಮಾರ್ಚ್ 10 ರಂದು ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡರು.

Uttarakhand CM Tirath Singh Rawat tenders resignation?

ಮತ್ತೊಮ್ಮೆ ಪಕ್ಷದ ರಾಜ್ಯ ನಾಯಕತ್ವದಲ್ಲಿ ಬದಲಾವಣೆಯಾಗಲಿದೆ ಎಂಬ ಸುದ್ದಿಗಳ ನಡುವೆ ನವದೆಹಲಿಯಲ್ಲಿ ಶುಕ್ರವಾರ ರಾವತ್ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾದರು.

ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ

ಈ ನಡುವೆ ಕೊರೊನಾ ಸೋಂಕು ಕಾರಣದಿಂದಾಗಿ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗಳನ್ನು ಚುನಾವಣೆ ಆಯೋಗ ಮುಂದೂಡಿದೆ. ಇದು ತೀರತ್‌ಗೆ ಇನ್ನಷ್ಟು ತಲೆನೋವಾಗಿ ಪರಿಣಮಿಸಿದೆ.

ಪ್ರಸ್ತುತ ಉತ್ತರಾಖಂಡ ಸಂಸತ್ತಿನ ಅವಧಿ ಮಾರ್ಚ್ 2022 ರಲ್ಲಿ ಕೊನೆಗೊಳ್ಳಲಿದೆ. ಕೇವಲ ಒಂಬತ್ತು ತಿಂಗಳು ಇರುವಾಗ ಈಗ ಉತ್ತರಾಖಂಡ ರಾಜಕೀಯದಲ್ಲಿ ಬದಲಾವಣೆಯಾಗಿದೆ.

ಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ

ಇನ್ನು ಈ ಬಗ್ಗೆ ಮಾತನಾಡಿದ ವಿಕಾಸ್‌ನಗರದ ಬಿಜೆಪಿ ಶಾಸಕ ಮುನ್ನಾ ಸಿಂಗ್ ಚೌಹಾನ್, "ರಾಜ್ಯದಲ್ಲಿ ಉಪಚುನಾವಣೆ ನಡೆಸಬೇಕೆ ಅಥವಾ ಬೇಡವೇ ಎಂಬುದು ಚುನಾವಣಾ ಆಯೋಗದ ತೀರ್ಮಾಣ. ಎಲ್ಲವೂ ಭಾರತದ ಚುನಾವಣಾ ಆಯೋಗದ ಮೇಲೆ ಅವಲಂಬಿತವಾಗಿದೆ," ಎಂದು ಹೇಳಿದ್ದಾರೆ.

ಇನ್ನು ತೀರಥ್ ಸಿಂಗ್ ರಾವತ್‌ ರಾಜೀನಾಮೆಯ ಸುದ್ದಿಯಾಗುತ್ತಿದ್ದಂತೆ ತೀರಥ್‌ ಇಂದು ರಾತ್ರಿ 9:30 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಗವರ್ನರ್‌ ಅನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.

English summary
Uttarakhand CM Tirath Singh Rawat tenders resignation? Major shake up in state leadership expected soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X