ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ: ತುರ್ತುಸ್ಥಿತಿಯಲ್ಲಿ ಅಲೋಪಥಿಕ್ ಔಷಧಿ ಶಿಫಾರಸ್ಸಿಗೆ ಆಯುರ್ವೇದ ವೈದ್ಯರಿಗೆ ಅನುಮತಿ

|
Google Oneindia Kannada News

ಡೆಹ್ರಾಡೂನ್‌, ಜೂ.21: ತುರ್ತು ಪರಿಸ್ಥಿತಿಯಲ್ಲಿ ಅಲೋಪತಿ ಔಷಧಿಗಳನ್ನು ಶಿಫಾರಸು ಮಾಡಲು ಉತ್ತರಾಖಂಡ ಸರ್ಕಾರ ಆಯುರ್ವೇದ ವೈದ್ಯರಿಗೆ ಸೋಮವಾರ ಅನುಮತಿ ನೀಡಿದೆ.

ಆದರೆ ಸರ್ಕಾರದ ಈ ನಿರ್ಧಾರಕ್ಕೆ ಅಲೋಪತಿ ವೈದ್ಯರ ಉನ್ನತ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಕಾನೂನುಬಾಹಿರ ಎಂದು ಐಎಂಎ ಹೇಳಿದೆ.

ರಾಮ್‌ದೇವ್‌ ವಿರುದ್ದ ಪಿಪಿಇ ಕಿಟ್‌ಗಳಲ್ಲಿ ಘೋಷಣೆ ಬರೆದು, ಕಪ್ಪು ಬ್ಯಾಂಡ್‌ ಧರಿಸಿ ವೈದ್ಯರ ಪ್ರತಿಭಟನೆರಾಮ್‌ದೇವ್‌ ವಿರುದ್ದ ಪಿಪಿಇ ಕಿಟ್‌ಗಳಲ್ಲಿ ಘೋಷಣೆ ಬರೆದು, ಕಪ್ಪು ಬ್ಯಾಂಡ್‌ ಧರಿಸಿ ವೈದ್ಯರ ಪ್ರತಿಭಟನೆ

ಇನ್ನು ಸರ್ಕಾರದ ಈ ಕ್ರಮವನ್ನು ರಾಜ್ಯದ ಆಯುಷ್ ಸಚಿವ ಹರಕ್ ಸಿಂಗ್ ರಾವತ್ ಶ್ಲಾಘಿಸಿದ್ದಾರೆ. " ಆಯುರ್ವೇದ ವೈದ್ಯರ ಬೇಡಿಕೆಗೆ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಬಹುನಿರೀಕ್ಷಿತ ಅನುಮೋದನೆ ನೀಡಿದ್ದಾರೆ. ಆಯುರ್ವೇದ ವೈದ್ಯರು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ತಮ್ಮ ಸಹವರ್ತಿಗಳಂತೆ ಅಲೋಪತಿ ಔಷಧಿಗಳನ್ನು ಶಿಫಾರಸು ಮಾಡಲು ಅನುಮತಿ ಪಡೆಯಬಹುದೇ ಎಂದು ಕೇಳುತ್ತಿದ್ದರು," ಎಂದಿದ್ದಾರೆ.

 Uttarakhand Ayurveda Doctors Can Prescribe Allopathic Medicine in Emergency

"ಈ ನಿರ್ಧಾರವು ಆರೋಗ್ಯ ಸೇವೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅಲೋಪತಿ ಔಷಧಿಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ಶಿಫಾರಸು ಮಾಡುವ ಆಯುರ್ವೇದ ವೈದ್ಯರ ಬೇಡಿಕೆಯನ್ನು ನಾವು ಅಂಗೀಕರಿಸಿದ್ದೇವೆ. ಈ ನಿರ್ಧಾರದಿಂದ ರಾಜ್ಯದ ದೂರದ ಪ್ರದೇಶಗಳಲ್ಲಿ ಸಾವಿರಾರು ಜನರಿಗೆ ಯಾವುದೇ ಅಲೋಪಥಿಕ್ ವೈದ್ಯರಿಲ್ಲದ ಕಾರಣ ಸಾಕಷ್ಟು ಸಹಾಯ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ," ಎಂದು ಆಯುಷ್ ಸಚಿವರು ಹೇಳಿದ್ದಾರೆ.

ಆದಾಗ್ಯೂ, ಈ ನಿರ್ಧಾರಕ್ಕೆ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ವಿರೋಧ ವ್ಯಕ್ತಪಡಿಸಿದೆ. ಐಎಂಎ ಉತ್ತರಾಖಂಡದ ಅಧ್ಯಕ್ಷ ಡಾ.ಅರವಿಂದ್ ಶರ್ಮಾ, "ಈ ನಿರ್ಧಾರವು ನಿಯಮಗಳಿಗೆ ವಿರುದ್ದವಾಗಿದೆ. ಆಯುರ್ವೇದ ವೈದ್ಯರು ಅಲೋಪತಿ ಔಷಧಿಗಳನ್ನು ಶಿಫಾರಸು ಮಾಡವುದಾದರೆ, ಈ ಔಷಧಿಗಳನ್ನು ಪ್ರಶ್ನಿಸಿರುವುದೇಕೆ," ಎಂದು ಪ್ರಶ್ನಿಸಿದ್ದಾರೆ.

ಲಸಿಕೆ ಪಡೆಯುತ್ತೇನೆ, ವೈದ್ಯರು ದೇವರ ದೂತರು: ಬಾಬಾ ರಾಮ್‌ದೇವ್ ಯೂಟರ್ನ್ಲಸಿಕೆ ಪಡೆಯುತ್ತೇನೆ, ವೈದ್ಯರು ದೇವರ ದೂತರು: ಬಾಬಾ ರಾಮ್‌ದೇವ್ ಯೂಟರ್ನ್

ಐಎಂಎ ಉತ್ತರಾಖಂಡ ಅಧ್ಯಾಯದ ಪ್ರಧಾನ ಕಾರ್ಯದರ್ಶಿ ಡಾ.ಅಜಯ್ ಖನ್ನಾ, "ಕಾನೂನಿನ ಬಗ್ಗೆ ಸರ್ಕಾರಕ್ಕೆ ತಿಳಿದಿಲ್ಲವೆಂದು ತೋರುತ್ತದೆ. ರಾಜ್ಯ ಸರ್ಕಾರದ ಈ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ," ಎಂದು ಹೇಳಿದ್ದಾರೆ.

ಇತ್ತೀಚೆಗೆ ಅಲೋಪತಿ ಮತ್ತು ಆಯುರ್ವೇದದ ನಡುವಿನ ಚರ್ಚೆಯು ವಿವಾದವನ್ನು ಹುಟ್ಟುಹಾಕಿತ್ತು. ಯೋಗ ಗುರು ರಾಮದೇವ್ ಮೇ ತಿಂಗಳಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಅಲೋಪತಿಯನ್ನು ಅವಿವೇಕಿ ವಿಜ್ಞಾನ ಎಂದು ಹೇಳಿದ್ದರು. ಕೋವಿಡ್‌ ರೋಗಿಗಳಿಗೆ ನೀಡುವ ರೆಮ್ಡೆಸಿವಿರ್ ನಂತಹ ಔಷಧಗಳು ವಿಫಲವಾಗಿವೆ ಎಂದು ದೂರಿದ್ದರು. ಈ ಆರೋಪಗಳ ಮಧ್ಯೆ ಉತ್ತರಾಖಂಡದ ಐಎಂಎ ಬಾಬಾ ವಿರುದ್ಧ 1,000 ರೂ. ಮಾನನಷ್ಟ ನೋಟಿಸ್‌ ನೀಡಿತ್ತು.

(ಒನ್‌ಇಂಡಿಯಾ ಸುದ್ದಿ)

English summary
The Uttarakhand government on Monday gave a nod to Ayurveda doctors to prescribe allopathic medicines in an ‘emergency’ situation. But The Indian Medical Council (IMA) Calls state government’s Decision 'Illegal'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X