ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಬಾಸ್ ವಿರುದ್ಧ ತಿರುಗಿ ಬಿದ್ದ ಮಹಿಳಾಮಣಿಗಳು

By Mahesh
|
Google Oneindia Kannada News

ಲಕ್ನೋ. ಡಿ. 16: ಕಲರ್ಸ್ ವಾಹಿನಿಯ ವಿವಾದಿತ ರಿಯಾಲಿಟಿ ಶೋ 'ಬಿಗ್ ಬಾಸ್' ವಿರುದ್ಧ ಉತ್ತರ ಪ್ರದೇಶದ ಮಹಿಳೆಯರು ತಿರುಗಿ ಬಿದ್ದಿದ್ದಾರೆ. ಈ ಕಾರ್ಯಕ್ರಮ ಎಲ್ಲೆ ಮೀರುತ್ತಿದ್ದು, ಮಹಿಳೆಯರ ವಿರುದ್ಧ ಹಿಂಸಾಚಾರ, ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಲಾಗಿದೆ.

ನಟ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 9 ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಮಹಿಳಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಕಾರ್ಯಕ್ರಮದ ಕೆಲ ಕಂತುಗಳ ಕ್ಲಿಪ್ಪಿಂಗ್ಸ್ ಆಧಾರವಾಗಿಟ್ಟುಕೊಂಡು ಕ್ರಮ ಜರುಗಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಯೋಗದ ಮುಖ್ಯಸ್ಥರಾದ ಜರೀನಾ ಉಸ್ಮಾನಿ ಅವರಿಗೆ ಪತ್ರ ಬರೆಯಲಾಗಿದೆ.[ಬಿಗ್ ಬಾಸ್ ಸ್ಪರ್ಧಿ ಔಟ್, ಅಭಿಮಾನಿಯಿಂದ ಆತ್ಮಹತ್ಯೆ ಯತ್ನ!]

Salman Khan's 'Bigg Boss'

ರಿಯಾಲಿಟಿ ಶೋನಲ್ಲಿ ಮಹಿಳಾ ಸ್ಪರ್ಧಿಗಳ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಲಾಗುತ್ತಿದೆ. ಮಹಿಳಾ ಸ್ಪರ್ಧಿಯ ಮೇಲೆ ಹಲ್ಲೆ ಮಾಡುವೆ ಬೆದರಿಕೆ ಒಡ್ಡಲಾಗಿದೆ. ಸಭ್ಯತೆಯ ಎಲ್ಲೆ ಮೀರುತ್ತಿರುವ ಕಾರ್ಯಕ್ರಮದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ.

ಇತ್ತೀಚಿನ ಎಪಿಸೋಡುವೊಂದರಲ್ಲಿ ಇರಾನಿ ಮೂಲದ ನಟಿ ಮಂದನಾ ಕರಿಮಿ ಅವರ ಬಳಿ ವಾಕ್ಸಮರ ಸಾರಿದ್ದ ಸುಯಶ್ ಎಂಬ ಸ್ಪರ್ಧಿ, ಧೈರ್ಯವಿದ್ದರೆ ನನ್ನ ಗೆಳತಿ ಹಲ್ಲೆ ಮಾಡು ಎಂದು ಮಂದನಾಗೆ ಸವಾಲೆಸೆಯುತ್ತಾರೆ. ರಾಷ್ಟ್ರೀಯ ವಾಹಿನಿಯೊಂದರಲ್ಲಿ ಈ ರೀತಿ ಬೆದರಿಕೆ ಒಡ್ಡುವುದು ಎಷ್ಟು ಸರಿ ಎಂದು ಮಹಿಳಾ ಆಯೋಗ ಪ್ರಶ್ನಿಸಿದೆ.

ದೂರಿನ ಅರ್ಜಿಯನ್ನು ಪ್ರಸಾರ ಭಾರತಿ, ರಾಷ್ಟ್ರೀಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೂ ಕಳಿಸಲಾಗಿದೆ. (ಐಎಎನ್ಎಸ್)

English summary
The Uttar Pradesh Women's Commission has sought action against the 'Bigg Boss 9' reality show being aired on Colours channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X