ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೋದಲ್ಲಿ ಒಂಬತ್ತು ಹೆಂಡಿರ ಮುದ್ದಿನ ಗಂಡನ ಬಂಧನ!

|
Google Oneindia Kannada News

ಲಕ್ನೋ, ಮೇ 02: ಎಂಥ ಕಾಲ ಬಂತು ನೋಡಿ! ಇದ್ದೊಬ್ಬ ಪತ್ನಿಯನ್ನೇ ಮೆಂಟೇಯ್ನ್ ಮಾಡೋದು ಕಷ್ಟ ಅನ್ನೋ ಈ ಕಾಲದಲ್ಲಿ ಉತ್ತರ ಪ್ರದೇಶದ ಲಕ್ನೋದ ಭೂಪನೊಬ್ಬ ಬರೋಬ್ಬರಿ ಒಂಬತ್ತು ಮದುವೆಯಾಗಿದ್ದಾನೆ!

ಪತಿಯಿಂದ ನನ್ನ ರಕ್ಷಿಸಿ: ವಿಡಿಯೋದಲ್ಲಿ ಮುಂಬೈ ಮಹಿಳೆಯ ಆರ್ತನಾದಪತಿಯಿಂದ ನನ್ನ ರಕ್ಷಿಸಿ: ವಿಡಿಯೋದಲ್ಲಿ ಮುಂಬೈ ಮಹಿಳೆಯ ಆರ್ತನಾದ

ಈ ಒಂಬತ್ತು ಹೆಂಡಿರ ಮುದ್ದಿನ ಗಂಡ ಕೊನೆಗೂ ಪೊಲೀಸರಿಗೆ ಅತಿಥಿಯಾಗಿದ್ದಾನೆ! 'ನೀನು ನನ್ನ ಏಳನೇ ಪತ್ನಿ' ಎಂದು ಪದೇ ಪದೇ ಪತಿ ಹೇಳುತ್ತಿದ್ದರೂ ಓರ್ವ ಪತ್ನಿ ಇದನ್ನು ತಮಾಷೆ ಎಂಡುಕೊಂಡು ಸುಮ್ಮನಿದ್ದಳು. ಈತ ತನ್ನ ಒಂಬತ್ತನೇ ಪತ್ನಿಯ ಬಳಿಯೂ 'ನೀನು ನನ್ನ ಒಂಬತ್ತನೇ ಪತ್ನಿ' ಎಂದು ಪದೇ ಪದೇ ಹೇಳುತ್ತಿದ್ದ. ಆಕೆಯೂ ಇದನ್ನು ತಮಾಷೆ ಎಂದುಕೊಂಡಿದ್ದಳು.

ಆದರೆ ಅಚಾನಕ್ಕಾಗಿ ಈ ಇಬ್ಬರು ಹೆಂಡಿರೂ ಭೇಟಿಯಾದಾಗ ಪತಿಯ ಅಸಲಿಯತ್ತು ಬಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಏಳನೇ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಆರೋಪಿ ಹೇಳುವ ಮಾತೇ ಬೇರೆ!

"ನಾನು ಮದುವೆಯಾಗಿದ್ದು 'ಕೇವಲ' ಮೂರೇ ಬಾರಿ! ನಾನು ತಮಾಷೆ ಮಾಡಿದ್ದನ್ನು ಅವರು ಗಭೀರವಾಗಿ ತೆಗೆದುಕೊಂಡಿದ್ದಾರೆ" ಎಂದು ಆರೋಪಿ ಹೇಳಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಭೂಪನ ಒಂಬತ್ತು ಮಡದಿಯರು ಯಾರೆಂಬುದನ್ನು ಪತ್ತೆಹಚ್ಚಲು ತೊಡಗಿದ್ದಾರೆ!

English summary
Uttar Pradesh: Woman alleges his husband has married 9 times, says, 'he used to joke I am his 7th wife. I contacted a girl known to him & came to know that he is married to her as well. She said he used to call her his 9th wife'. Accused arrested in Lucknow
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X