ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚ ರಾಜ್ಯಗಳ ಮತಎಣಿಕೆಗೆ ದಿನಗಣನೆ: ಸಮೀಕ್ಷೆ ಏನು ಹೇಳುತ್ತಿದೆ?

ಉತ್ತರಪ್ರದೇಶ, ಗೋವಾ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯ ಈ ಹಿಂದಿನ 'ಚುನಾವಣಾಪೂರ್ವ ಸಮೀಕ್ಷೆ' ಏನು ಹೇಳಿತ್ತು.

|
Google Oneindia Kannada News

ಎರಡು ರಾಷ್ಟ್ರೀಯ ಪಕ್ಷಗಳಿಗೆ, ಮತ್ತಷ್ಟು ಪ್ರಾದೇಶಿಕ ಪಕ್ಷಗಳಿಗೆ ನಿರ್ಣಾಯಕವಾಗಿರುವ, ಐದು ರಾಜ್ಯಗಳ ಅಸೆಂಬ್ಲಿಗಾಗಿ ನಡೆದ ಚುನಾವಣೆ ಬುಧವಾರ (ಮಾ 8) ಮುಕ್ತಾಯಗೊಂಡಿದೆ.

ಇನ್ನೇನಿದ್ದರೂ ಚುನಾವಣಾ ಫಲಿತಾಂಶ, ಅದಕ್ಕೂ ಮೊದಲು ನಡೆಯುವ ಮತಗಟ್ಟೆ ಸಮೀಕ್ಷೆ. ಪಂಜಾಬ್, ಗೋವಾ, ಛತ್ತೀಸಗಡ, ಮಣಿಪುರ ಮತ್ತು ಉತ್ತರಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ದೇಶದ ಗಮನ ಪ್ರಮುಖವಾಗಿ ಉತ್ತರಪ್ರದೇಶದ ಚುನಾವಣಾ ಫಲಿತಾಂಶದತ್ತ. (ಉ.ಪ್ರ ಅಸೆಂಬ್ಲಿ ಚುನಾವಣೆ ಸಮೀಕ್ಷೆ, ಬಿಜೆಪಿಗೆ ಮುನ್ನಡೆ)

ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲಿ ಹಿಂದೆ ಇರುವ ಮತ್ತು ಕಣದಲ್ಲಿ ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿಗಳು ಹೆಚ್ಚಿದ್ದರೂ ಉತ್ತರಪ್ರದೇಶದಲ್ಲಿ ಯಾವುದೇ ಶಾಂತಿಗೆ ಭಂಗಬರದಂತೆ ಚುನಾವಣೆಯನ್ನು ಸುಸೂತ್ರವಾಗಿ ನಡೆಸಿದ್ದಕ್ಕಾಗಿ, ಕೇಂದ್ರ ಚುನಾವಣಾ ಆಯೋಗ ಮತ್ತು ಪೊಲೀಸ್ ವ್ಯವಸ್ಥೆಗೆ ಧನ್ಯವಾದ ಹೇಳಬೇಕು.[ಚುನಾವಣೋತ್ತರ ಸಮೀಕ್ಷೆ LIVE : ಉತ್ತರಪ್ರದೇಶದಲ್ಲಿ ಕೇಸರಿ ರಂಗು]

ಉತ್ತರಪ್ರದೇಶದ ಅಲಾಪುರ ಕ್ಷೇತ್ರದಲ್ಲಿ ಗುರುವಾರ (ಮಾ 9) ಮರು ಮತದಾನ ನಡೆಯುತ್ತಿರುವುದರಿಂದ, ಗುರುವಾರ ಸಂಜೆ 5.30ರ ನಂತರ ಮತಗಟ್ಟೆ ಸಮೀಕ್ಷೆ (ಎಕ್ಸಿಟ್ ಪೋಲ್) ವರದಿ ಪ್ರಕಟಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಗುರುವಾರ ಸಂಜೆಯ ನಂತರ ಪ್ರಕಟವಾಗುವ ಮತಗಟ್ಟೆ ಸಮೇಕ್ಷೆಯ ವರದಿ ಒನ್ ಇಂಡಿಯಾ ಕನ್ನಡದಲ್ಲಿ ಪ್ರಸಾರವಾಗಲಿದೆ. ಅದಕ್ಕೂ ಮೊದಲು, ಕಳೆದ ಎರಡ್ಮೂರು ತಿಂಗಳಿನಿಂದ ವಿವಿಧ ವಾಹಿನಿಗಳು ಮತ್ತು ಸಂಸ್ಥೆಗಳು ಪ್ರಕಟಿಸಿದ್ದ ಪಂಜಾಬ್, ಗೋವಾ ಮತ್ತು ಉತ್ತರಪ್ರದೇಶದ ಚುನಾವಣಾಪೂರ್ವ ಸಮೀಕ್ಷೆಯ ವರದಿ ಕಡೆಗೆ ಒಂದು ಝಲಕ್..

 ಎನ್ಡಿಟಿವಿ - ಪಂಜಾಬ್

ಎನ್ಡಿಟಿವಿ - ಪಂಜಾಬ್

ಎಎಪಿಗೆ ಶೇ 55-60 ರಷ್ಟು ಪ್ರತಿಶತ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ, ಕಾಂಗ್ರೆಸ್ಸಿಗೆ ಶೇ 20-35 ರಷ್ಟು ಮತ್ತು ಅಕಾಲಿ ದಳಕ್ಕೆ ಶೇ 5 ರಿಂದ 10ರಷ್ಟು ಅವಕಾಶವಿದೆ. ಅಕಾಲಿದಳದಿಂದ ಶೇ 27ರಷ್ಟು ಸಿಖ್ ಮತಗಳು ಕೇಜ್ರಿವಾಲ್ ಪಕ್ಷಕ್ಕೆ ಹೋಗುವ ಸಾಧ್ಯತೆಯಿದೆ.[ಗೋವಾದಲ್ಲಿ ಅತಂತ್ರ ವಿಧಾನಸಭೆ - ಸಿ ವೋಟರ್]

 ಸಿವೋಟರ್ - ಹಫಿಂಗ್ಟನ್ ಪೋಸ್ಟ್ - ಗೋವಾ

ಸಿವೋಟರ್ - ಹಫಿಂಗ್ಟನ್ ಪೋಸ್ಟ್ - ಗೋವಾ

ಗೋವಾ (40 ಸ್ಥಾನಗಳು), ಸೀಟು ಗೆಲ್ಲುವ ಸಾಧ್ಯತೆ
ಬಿಜೆಪಿ : 15
ಕಾಂಗ್ರೆಸ್: 14
ಎಎಪಿ: 2
ಇತರೆ : 9

[ಪಂಜಾಬಿನಲ್ಲಿ ಕಾಂಗ್ರೆಸ್ ಗೆ ಅವಕಾಶ ಜಾಸ್ತಿ, ಎಎಪಿಯನ್ನೂ ಕಡೆಗಣಿಸುವಂತಿಲ್ಲ]

 ಇಂಡಿಯಾ ಟುಡೇ-ಆಕ್ಸಿಸ್-ಮೈ ಇಂಡಿಯಾ - ಉತ್ತರಪ್ರದೇಶ

ಇಂಡಿಯಾ ಟುಡೇ-ಆಕ್ಸಿಸ್-ಮೈ ಇಂಡಿಯಾ - ಉತ್ತರಪ್ರದೇಶ

ಅಕ್ಟೋಬರ್ 16 : ಬಿಜೆಪಿ : 170-183 ಎಸ್ಪಿ - ಕಾಂಗ್ರೆಸ್ : 102-115 ಬಿಎಸ್ಪಿ : 115-124
ಡಿಸೆಂಬರ್ 16 : ಬಿಜೆಪಿ : 206-216 ಎಸ್ಪಿ - ಕಾಂಗ್ರೆಸ್ : 97-106 ಬಿಎಸ್ಪಿ : 79-85
ಜನವರಿ 17 : ಬಿಜೆಪಿ : 180-191 ಎಸ್ಪಿ - ಕಾಂಗ್ರೆಸ್ : 168-178 ಬಿಎಸ್ಪಿ : 39-43

[ಉತ್ತರಾಖಂಡ ವಿಧಾನಸಭೆ ಚುನಾವಣೆ ಸಮೀಕ್ಷೆ ಫಲಿತಾಂಶ ಏನು?]

 ಎಬಿಪಿ ನ್ಯೂಸ್ -ಲೋಕ್ ನೀತಿ-ಸಿಎಸ್ ಒಡಿಎಸ್ - ಉತ್ತರಪ್ರದೇಶ

ಎಬಿಪಿ ನ್ಯೂಸ್ -ಲೋಕ್ ನೀತಿ-ಸಿಎಸ್ ಒಡಿಎಸ್ - ಉತ್ತರಪ್ರದೇಶ

ಎಸ್ ಪಿ ಹಾಗೂ ಕಾಂಗ್ರೆಸ್ : 187-197
ಬಿಎಸ್ ಪಿ : 76-86
ಬಿಜೆಪಿ + : 118-128
ಇತರೆ : 5-9

 ಟೈಮ್ಸ್ ನೌ, ವಿಎಂಆರ್ ಸಮೀಕ್ಷೆ - ಉತ್ತರಪ್ರದೇಶ

ಟೈಮ್ಸ್ ನೌ, ವಿಎಂಆರ್ ಸಮೀಕ್ಷೆ - ಉತ್ತರಪ್ರದೇಶ

ಬಿಜೆಪಿ : 202
ಎಸ್ಪಿ-ಕಾಂಗ್ರೆಸ್ : 147
ಬಿಎಸ್ಪಿ - 47
ಆರ್ ಎಲ್ಡಿ - 11

 ಎಬಿಪಿ ನ್ಯೂಸ್ -ಲೋಕ್ ನೀತಿ ಜನವರಿಯಲ್ಲಿ ನಡೆಸಿದ ಸಮೀಕ್ಷೆ (ಉ.ಪ್ರ)

ಎಬಿಪಿ ನ್ಯೂಸ್ -ಲೋಕ್ ನೀತಿ ಜನವರಿಯಲ್ಲಿ ನಡೆಸಿದ ಸಮೀಕ್ಷೆ (ಉ.ಪ್ರ)

ಎಸ್ಪಿ : 141-151
ಬಿಜೆಪಿ : 129-139
ಬಿಎಸ್ಪಿ : 93 - 103
ಕಾಂಗ್ರೆಸ್ : 13-19
ಇತರರು : 6-12

 ಸೆಪ್ಟಂಬರ್ ನಲ್ಲಿ ನಡೆದ ಸಮೀಕ್ಷೆ (ಉ.ಪ್ರ, ಇಂಡಿಯಾ ಟಿವಿ - ಸಿವೋಟರ್)

ಸೆಪ್ಟಂಬರ್ ನಲ್ಲಿ ನಡೆದ ಸಮೀಕ್ಷೆ (ಉ.ಪ್ರ, ಇಂಡಿಯಾ ಟಿವಿ - ಸಿವೋಟರ್)

ಬಿಜೆಪಿ - 134-150
ಎಸ್ಪಿ - 133-149
ಬಿಎಸ್ಪಿ - 95-111
ಕಾಂಗ್ರೆಸ್ - 05-13
ಇತರರು - 04-12

English summary
Uttar Pradesh, Goa and Punjab assembly election : Previous pre-poll survey results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X