ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದಲ್ಲಿ ಚುನಾವಣೆ ನಡೆದರೆ, ದಯನೀಯ ಸ್ಥಿತಿಗೆ ಕಾಂಗ್ರೆಸ್?

|
Google Oneindia Kannada News

ಭೌಗೋಳಿಕವಾಗಿ, ದೇಶದ ಅತಿಹೆಚ್ಚು ಅಸೆಂಬ್ಲಿ ಮತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಒಂದು ವೇಳೆ ಈಗ (ಮಾರ್ಚ್ ಮೂರನೇ ವಾರದಲ್ಲಿ) ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಲಾಭವಾಗಲಿದೆ? 2017ರ ಆದಿಯಲ್ಲಿ ಇಲ್ಲಿ ಚುನಾವಣೆ ನಡೆಯಲಿದೆ.

ಈ ಸಂಬಂಧ ಎಬಿಪಿ ನ್ಯೂಸ್ ಸರ್ವೇ ನಡೆಸಿದ್ದು, ಮತದಾರರ ಇಂಗಿತದ ಪ್ರಕಾರ ಸದ್ಯ ಅಧಿಕಾರದಲ್ಲಿರುವ ಅಖಿಲೇಶ್ ಯಾದವ್ ಸರಕಾರಕ್ಕೆ ಈ ಸಮೀಕ್ಷೆ ಎಚ್ಚರಿಕೆಯ ಗಂಟೆಯಾಗಲಿದೆ. (ದನದ ಮಾಂಸದ ಸುತ್ತ ರಾಜಕೀಯ ದುರ್ಮಾಂಸ)

ನೆಹರೂ ಮತ್ತು ಗಾಂಧಿ ಕುಟುಂಬದ ಕರ್ಮಭೂಮಿಯಾಗಿರುವ ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆ ಕಾಂಗ್ರೆಸ್ ಪಾಲಿಗೆ ಇನ್ನಷ್ಟು ಕಗ್ಗಂಟಾಗಲಿದ್ದು, ದಯನೀಯ ಸ್ಥಿತಿಗೆ ತಲುಪಲಿದೆ ಎನ್ನುವುದು ಸರ್ವೇಯಲ್ಲಿ ವ್ಯಕ್ತವಾದ ಜನಾಭಿಪ್ರಾಯ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ ಒಟ್ಟಾರೆ ಸಾಧನೆಯ ಬಗ್ಗೆ ಶೇ. 62 ಉತ್ತರ ಪ್ರದೇಶದ ಮತದಾರರು ತೃಪ್ತಿಯನ್ನು ಹೊಂದಿದ್ದರೂ, ಮುಸ್ಲಿಂ ಮತದಾರರು ಕೇಂದ್ರ ಸರಕಾರದ ಕಾರ್ಯವೈಖರಿಯ ಬಗ್ಗೆ ತೃಪ್ತಿ ಹೊಂದಿಲ್ಲ.

ಹಾಲಿ ಅಖಿಲೇಶ್ ಸರಕಾರದ ವಿರುದ್ದ ರಾಜ್ಯದ ಜನತೆಗಿರುವ ದೊಡ್ಡ ಚಿಂತೆಯೆಂದರೆ ಕಾನೂನು, ಸುವ್ಯವಸ್ಥೆ ಮತ್ತು ಯಾವಾಗ ಕೋಮುಗಲಭೆ ಆರಂಭವಾಗುತ್ತೋ ಅನ್ನೋ ಭಯ. (ಬಿಜೆಪಿ ಅಧಿಕಾರ ಅವಧಿಯಲ್ಲೇ ರಾಮಮಂದಿರ)

ಜನಪ್ರಿಯ ರಾಜಕಾರಣಿ ಯಾರು ಎನ್ನುವ ಪ್ರಶ್ನೆಗೆ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಮೋದಿ, ನಂತರ ಮಾಯಾವತಿ, ಆನಂತರದ ಸ್ಥಾನ ಅಖಿಲೇಶ್ ಯಾದವ್ ಎನ್ನುವ ಉತ್ತರ ಹೊರಬಿದ್ದಿದೆ.

ಸಮೀಕ್ಷೆಯ ಪ್ರಕಾರ ಲಾಭ ಬಿಜೆಪಿಗೋ, ಬಿಎಸ್ಪಿಗೋ.. ಸ್ಲೈಡಿನಲ್ಲಿ ನೋಡಿ..

ಭ್ರಷ್ಟ ಸರಕಾರ

ಭ್ರಷ್ಟ ಸರಕಾರ

ಕಾನೂನು, ಸುವ್ಯವಸ್ಥೆಯ ವಿಚಾರದಲ್ಲಿ ಅಖಿಲೇಶ್ ಯಾದವ್ ಸರಕಾರಕ್ಕಿಂತ ಬಿಎಸ್ಪಿ ನೇತೃತ್ವದ ಮಾಯಾವತಿ ಸರಕಾರವೇ ಉತ್ತಮ. ಇನ್ನು ಭ್ರಷ್ಟಾಚಾರದ ವಿಚಾರದಲ್ಲಿ ಮಾಯಾವತಿ ಸರಕಾರಕ್ಕಿಂತಲೂ ಅಖಿಲೇಶ್ ಸರಕಾರ ಒಂದು ಕೈಮೇಲು ಎಂದು ಸಮೀಕ್ಷೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದೆ.

ನಾಲ್ಕು ಅತಿಮುಖ್ಯ ಅಂಶಗಳು

ನಾಲ್ಕು ಅತಿಮುಖ್ಯ ಅಂಶಗಳು

ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಬಡತನ ಪ್ರಮುಖ ವಿಷಯವಾಗಲಿದೆ. ಮಹಿಳಾ ಸುರಕ್ಷತೆಯ ವಿಚಾರದಲ್ಲಿ ಅಖಿಲೇಶ್ ಸರಕಾರ ಫೈಲ್ ಆಗಿದೆ ಎನ್ನುವುದು ಜನರ ಅಭಿಪ್ರಾಯ.

ಮುಖ್ಯಮಂತ್ರಿಗೆ ಅತ್ಯುತ್ತಮ ಆಯ್ಕೆಯಾರು?

ಮುಖ್ಯಮಂತ್ರಿಗೆ ಅತ್ಯುತ್ತಮ ಆಯ್ಕೆಯಾರು?

ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸ್ಮೃತಿ ಇರಾನಿ, ವರುಣ್ ಗಾಂಧಿ ಆಯ್ಕೆ ಮಾಡಬಹುದು ಎನ್ನುವ ಗಾಳಿಸುದ್ದಿಯ ನಡುವೆ, ಸಮೀಕ್ಷೆಯಲ್ಲಿ ಲಭ್ಯವಿದ್ದ ಎರಡು ಆಯ್ಕೆಯ ಪೈಕಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಈಗಿನ ಬಲಾಬಲ

ಈಗಿನ ಬಲಾಬಲ

ಒಟ್ಟು ಸ್ಥಾನ - 403
ಬಿಜೆಪಿ - 43
ಬಿಎಸ್ಪಿ - 80
ಕಾಂಗ್ರೆಸ್ - 37
ಎಸ್ಪಿ - 228
ಇತರರು - 15

ಕಾಂಗ್ರೆಸ್ ಪರಿಸ್ಥಿತಿ

ಕಾಂಗ್ರೆಸ್ ಪರಿಸ್ಥಿತಿ

ಎಬಿಪಿ ನ್ಯೂಸ್ ನಡೆಸಿದ ಸಮೀಕ್ಷೆ ಪ್ರಕಾರ, ನೆಹರೂ ಮತ್ತು ಗಾಂಧಿ ಕುಟುಂಬದ ಕರ್ಮಭೂಮಿಯಾಗಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಕ್ಷೀಣ. ಇನ್ನು, ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ವರ್ಕೌಟ್ ಆಗುತ್ತೋ ಎನ್ನುವುದು ಸದ್ಯದ ಸಮೀಕ್ಷೆಯಲ್ಲಿ ವ್ಯಕ್ತವಾಗಿಲ್ಲ.

ಎಬಿಪಿ ನ್ಯೂಸ್ ಸಮೀಕ್ಷೆ ಪ್ರಕಾರ ಯಾರು ಮುಂದೆ

ಎಬಿಪಿ ನ್ಯೂಸ್ ಸಮೀಕ್ಷೆ ಪ್ರಕಾರ ಯಾರು ಮುಂದೆ

ಒಟ್ಟು ಸ್ಥಾನ - 403
ಬಿಜೆಪಿ - 120
ಬಿಎಸ್ಪಿ - 185
ಕಾಂಗ್ರೆಸ್ - 13
ಎಸ್ಪಿ - 80
ಇತರರು - 05

English summary
ABP News latest opinion poll that gauges the current mood of UP has revealed that BSP and BJP will gain more seat from previous election, while INC has tough time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X