ಉತ್ತರ ಪ್ರದೇಶ: 7 ವರ್ಷದ ಮಗುವಿನ ಮೇಲೆ ಪೇದೆಯಿಂದ ಅತ್ಯಾಚಾರ

Posted By:
Subscribe to Oneindia Kannada

ಗ್ರೇಟರ್ ನೋಯ್ಡಾ, ಜನವರಿ 12: ಏಳು ವರ್ಷದ ಪುಟ್ಟ ಮಗುವಿನ ಮೇಲೆ ಪೊಲೀಸ್ ಪೇದೆಯೊಬ್ಬ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆಗೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪ್ರದೇಶ ಸಾಕ್ಷಿಯಾಗಿದೆ.

ಜ.11 ರಂದು ಸುಭಾಶ್ ಸಿಂಗ್ ಎಂಬ ಪೇದೆ ತನ್ನ ಮನೆಯ ಬಳಿಯಿಂದ ಮನೆಯೊಂದಕ್ಕೆ ತೆರಳಿದ್ದಾನೆ. ಅಲ್ಲಿ ಆಟವಾಡುತ್ತಿದ್ದ ಪುಟ್ಟ ಮಗು ಒಂಟಿಯಾಗಿರುವುದನ್ನು ಗಮನಿಸಿ, ಅದರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಗುವನ್ನು ಮನೆಯಲ್ಲಿ ಬಿಟ್ಟು, ತಾಯಿ ಹೊರಗೆ ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.

ಮಧ್ಯಪ್ರದೇಶದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ

ಅತ್ಯಾಚಾರದ ನಂತರ ನೋವು ಸವಿಸಲಾಗದೆ ಮಗು ಜೋರಾಗಿ ಕಿರುಚಾಡುವುದಕ್ಕೆ ಶುರುಮಾಡಿದಾಗ ಅಕ್ಕ ಪಕ್ಕದ ಮನೆಯವರೆಲ್ಲ ಬಂದು ನೋಡಿದ್ದಾರೆ. ಈ ಸಂದರ್ಭದಲ್ಲಿ ಕಾಮುಕ ಪೇದೆಯ ಬಣ್ಣ ಬಯಲಾಗಿದೆ. ತಕ್ಷಣವೇ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಆತನ ವಿರುದ್ಧ ಪೋಕ್ಸೋ(Protection of Children against Sexual Offences Act) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Uttar Pradesh cop rapes 7 yrs old

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿರುವ ಘಟನೆ ಇತ್ತೀಚೆಗೆ ಹೆಚ್ಚಾಗಿದ್ದು, ಮಧ್ಯಪ್ರದೇಶದ ತಿಕಾಂಗರ್ ಎಂಬಲ್ಲಿ 14 ವರ್ಷದ ಬಾಲಕಿಯ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ ಘಟನೆ ನಿನ್ನೆ ತಾನೇ(ಜ.11) ಬೆಳಕಿಗೆ ಬಂದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A seven-year-old minor was allegedly raped by an Uttar Pradesh police constable in Greater Noida's Surajpur. The incident took place on Thursday when the accused constable, Subhash Singh, entered the minor's house in the absence of her mother and allegedly raped her.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ