ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 11 : ಉತ್ತರಪ್ರದೇಶದಲ್ಲಿ ಗೂಂಡಾ ಆಡಳಿತ, ಕುಟುಂಬ ರಾಜಕೀಯ, ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆಗೆ ರೋಸತ್ತುಹೋಗಿದ್ದ ಎಲ್ಲ ಜಾತಿ, ವರ್ಗ, ಪಂಗಡಗಳ ಜನರು, ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಸೋತು ಮತ ಹಾಕಿ ಐತಿಹಾಸಿಕ ಜಯಕ್ಕೆ ಕಾರಣರಾಗಿದ್ದಾರೆ.

'ಯುವ ನೇತಾರ'ರಾದ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಅವರ ಭೀಕರ ಭಾಷಣಕ್ಕೆ, ಪ್ರಿಯಾಂಕಾ ಗಾಂಧಿ ಅವರ ಮಾತಿಗೆ, ಮುಲಾಯಂ ಸೊಸೆ ಡಿಂಪಲ್ ಯಾದವ್ ಅವರ ಗಿಳಿಮಾತುಗಳಿಗೆ ಉತ್ತರಪ್ರದೇಶದ ಜನರು ಮರುಳಾಗಿಲ್ಲ ಎಂಬುದು ಸಾಬೀತಾಗಿದೆ.[ಯುಪಿ ಸಿಎಂ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು!]

Live : ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ಉತ್ತರಪ್ರದೇಶದ ಜನತೆಗೆ ಒಂದು ಬದಲಾವಣೆ ಬೇಕಿತ್ತು. ಹೀಗಾಗಿ ಸರಿಯಾಗಿ 17 ವರ್ಷಗಳ ನಂತರ ಬಿಜೆಪಿ ಆಡಳಿತವನ್ನು ಉತ್ತರಪ್ರದೇಶದ ಜನರು ಪ್ರತಿಷ್ಠಾಪಿಸಿದ್ದಾರೆ. 2000ರಲ್ಲಿ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚಿಸಿದ ನಂತರ ಮತ್ತೆ ಅಧಿಕಾರಕ್ಕೆ ಬಂದೇ ಇಲ್ಲ.[ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?]

ಬಿಜೆಪಿಯ ಈ ಅತ್ಯದ್ಭುತವಾದ ಗೆಲುವಿಗೆ ಕಾರಣಗಳು ಹಲವಾರು. ನರೇಂದ್ರ ಮೋದಿಯವರ ಅಲೆ ಮಾತ್ರವಲ್ಲ, ಅಖಿಲೇಶ್ ಯಾದವ್ ಅವರ ಕಳೆಗುಂದಿದ್ದ ನಾಯಕತ್ವ ಕೂಡ ಇದರಲ್ಲಿ ಭಾಗಿಯಾಗಿದೆ. ಇನ್ನು ರಾಹುಲ್ ಗಾಂಧಿಯಂತೂ ಉತ್ತರಪ್ರದೇಶದಲ್ಲಿ ಲೆಕ್ಕಕ್ಕೇ ಇಲ್ಲ.

ನಿರೀಕ್ಷೆಗೂ ಮೀರಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದ್ದಕ್ಕೆ 10 ಕಾರಣಗಳು ಇಲ್ಲಿವೆ. [ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?]

ನರೇಂದ್ರ ಮೋದಿ ನಾಯಕತ್ವ

ನರೇಂದ್ರ ಮೋದಿ ನಾಯಕತ್ವ

ಪ್ರಧಾನಿ ನರೇಂದ್ರ ಮೋದಿ ಏನಿಲ್ಲವೆಂದರೂ 23 ರ್ಯಾಲಿಗಳಲ್ಲಿ ಭಾಗವಹಿಸಿ ಪ್ರಚಾರ ಮಾಡಿದ್ದಾರೆ. ಅವರ ಸ್ಪಷ್ಟ ನಿಲುವು, ಖಚಿತವಾದ ಮಾತು ಜನರ ಹೃದಯಕ್ಕೆ ನೇರವಾಗಿ ನಾಟಿವೆ. ಮೋದಿಯವರ ತಂತ್ರಗಾರಿಕೆ ಕಳೆದ ಕೆಲ ಚುನಾವಣೆಗಳಲ್ಲಿ ಫಲಿಸಿದೆ. ಇದೇ ತಂತ್ರಗಾರಿಕೆ ಉತ್ತರಪ್ರದೇಶದಲ್ಲಿಯೂ ಫಲ ನೀಡಿದೆ. ಸಭೆಗಳಲ್ಲಿ ಭಾಗವಹಿಸಿದಲ್ಲೆಲ್ಲ ಸುಳ್ಳು ಭರವಸೆ ನೀಡುವುದಾಗಲಿ, ವಿರೋಧಿಗಳನ್ನು ಹೀಯಾಳಿಸುವುದಾಗಲಿ ಅಷ್ಟೊಂದು ಮಾಡದಿರುವುದು ವರವಾಗಿ ಬಂದಿದೆ. [ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸಿದ ಮೋದಿ 9 ಹೇಳಿಕೆ]

ಅಮಿತ್ ಶಾ ಅವರ ತಂತ್ರಗಾರಿಕೆ

ಅಮಿತ್ ಶಾ ಅವರ ತಂತ್ರಗಾರಿಕೆ

2014ರ ಲೋಕಸಭೆ ಚುನಾವಣೆಯಲ್ಲಿ ಅಮಿತ್ ಶಾ ಅವರು ಉತ್ತರಪ್ರದೇಶದಲ್ಲಿ ಜಾದೂ ಮಾಡಿದ್ದರು. 80ರಲ್ಲಿ 71 ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅದೇ ಜಾದೂ ಇಲ್ಲೂ ವರ್ಕೌಟ್ ಆಗಿದೆ. ಜಾತಿಯ ಪ್ರಾಮುಖ್ಯತೆ ಮನಗಂಡಿದ್ದ ಅಮಿತ್ ಅವರು ಅತೀದೊಡ್ಡ ಹಿಂದುಳಿದ ಜನಾಂಗವಾದ ಮೌರ್ಯ ಜಾತಿಗೆ ಸೇರಿದ ಕೇಶವ್ ಪ್ರದಾಸ್ ಮೌರ್ಯ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಕೆಲಸ ಮಾಡಿದೆ. ಇದೇ ತಂತ್ರಗಾರಿಕೆಯನ್ನು ಹಿಂದೆ ಕಲ್ಯಾಣ್ ಸಿಂಗ್ ಕೂಡ ಮಾಡಿ ಜಯಗಳಿಸಿದ್ದರು. [ಯುಪಿ ಸಿಎಂ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು!]

ನೇರವಾಗಿ ಜಾತಿ ವೋಟ್ ಬ್ಯಾಂಕ್ ಗೆ ಕೈ

ನೇರವಾಗಿ ಜಾತಿ ವೋಟ್ ಬ್ಯಾಂಕ್ ಗೆ ಕೈ

ಮೇಲ್ಜಾತಿಯವರಾದ ಬ್ರಾಹ್ಮಣ ಮತ್ತು ಠಾಕೂರ್ ಬೆಂಬಲ ಬಿಜೆಪಿಗೆ ಇದ್ದೇ ಇತ್ತು. ಇತರ ಜಾತಿಯ ಜನರನ್ನು ಸೆಳೆಯುವ ಉದ್ದೇಶದಿಂದ 170ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಲೋಧ್, ರಾಜ್‌ಭಾರ್, ಸೈನಿ, ಗುಜ್ಜರ್, ಶಾಕ್ಯ, ಮೌರ್ಯ, ಧನ್ಕರ್, ನಿಶಾದ್ ಮುಂತಾದ ಜಾತಿಗೆ ಸೇರಿದ ಅಭ್ಯರ್ಥಿಗಳನ್ನು ಕಣಕಿಳಿಸಿದ್ದು ಮತಗೆಲ್ಲಲು ಸಹಕಾರಿಯಾಯಿತು.

ಭರ್ಜರಿ ಪ್ರಚಾರ

ಭರ್ಜರಿ ಪ್ರಚಾರ

ಪ್ರಚಾರ ತಂತ್ರಗಾರಿಕೆ ಅನುಸರಿಸುವಾಗ ನಾಯಕರನ್ನು ಅತ್ಯಂತ ನಾಜೂಕಿನಿಂದ ಆಯ್ಕೆ ಮಾಡಲಾಗಿತ್ತು. ಪೋಸ್ಟರುಗಳಲ್ಲಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಉಮಾ ಭಾರತಿ, ಕಲ್ರಾಜ್ ಮಿಶ್ರಾ ಅವರನ್ನು ಬಳಸಲಾಗಿತ್ತು. ಇವರಲ್ಲಿ ಇಬ್ಬರು ಮೇಲ್ಜಾತಿಗೆ ಸೇರಿದ್ದರೆ, ಇಬ್ಬರು ಯಾದವೇತರ ಜನಾಂಗಕ್ಕೆ ಸೇರಿದವರು. ಅಲ್ಲದೆ, ಅತ್ಯಂತ ಕರಾರುವಾಕ್ಕಾಗಿ ಅಧ್ಯಯನ ಮಾಡಿದ ನಂತರವೇ ಸ್ಟಾರ್ ಕ್ಯಾಂಪೇನರ್ ಗಳನ್ನು ಆಯ್ಕೆ ಮಾಡಲಾಗಿತ್ತು.

ಹಿಂದೂತ್ವದ ಜೈಜೈಕಾರ

ಹಿಂದೂತ್ವದ ಜೈಜೈಕಾರ

ಇಡೀ ರಾಜ್ಯದಲ್ಲಿ ಒಂದೇ ಒಂದು ಕ್ಷೇತ್ರದಲ್ಲಿಯೂ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಪ್ರಚಾರ ಭಾಷಣದಲ್ಲಿ ಮೋದಿಯವರು, ಹಳ್ಳಿಗಳಲ್ಲಿ ಮುಸ್ಲಿಂರಿಗೆ ಕಬರಸ್ತಾನ ಇದ್ದಂತೆ ಹಿಂದೂಗಳಿಗೆ ಸ್ಮಶಾನವೂ ಇರಬೇಕು ಎಂದು ಘೋಷಣೆ ಕೂಗಿದ್ದು ಜನರನ್ನು ಭಾವುಕರನ್ನಾಗಿ ಮಾಡಿದ್ದರಲ್ಲಿ ಅಚ್ಚರಿಯಿಲ್ಲ. ಅಮಿತ್ ಅವರು ಕೂಡ ಜನರಿಗೆ ಕಸಬ್ ನಿಂದ ಮುಕ್ತಿ ಬೇಕಾಗಿದೆ ಎಂದಿದ್ದರು. ಕ ಅಂದ್ರೆ ಕಾಂಗ್ರೆಸ್, ಸ ಅಂದ್ರೆ ಸಮಾಜವಾದಿ ಪಕ್ಷ ಮತ್ತು ಬ ಅಂದ್ರೆ ಬಹುಜನ ಸಮಾಜವಾದಿ ಪಕ್ಷ.

ಅಪವಿತ್ರ ಮೈತ್ರಿಗೆ ಕೈಹಾಕದಿರುವುದು

ಅಪವಿತ್ರ ಮೈತ್ರಿಗೆ ಕೈಹಾಕದಿರುವುದು

ಉತ್ತರಪ್ರದೇಶದಲ್ಲಿ ಬಿಜೆಪಿ ಅಪ್ನಾದಳ, ಸುಖದೇವ್ ಭಾರತೀಯ ಸಮಾಜವಾದಿ ಪಾರ್ಟಿಯೊಂದಿಗೆ ಕೈಜೋಡಿಸಿತ್ತು. ಪೂರ್ವಾಂಚಲ ಮತ್ತು ಉತ್ತರಪ್ರದೇಶದ ಕೇಂದ್ರ ಭಾಗದಲ್ಲಿ ಅಪ್ನಾದಳ ಪ್ರತಿನಿಧಿಸುವ ಪಟೇಲ್ ಕುರ್ಮಿ ಜನಾಂಗದವರು ಹೆಚ್ಚಿದ್ದಾರೆ. ಇದು ಎಸ್ಪಿ ಮತ್ತು ಬಿಎಸ್ಪಿಯನ್ನು ಮಟ್ಟಹಾಕಲು ಕಾರಣವಾಯಿತು.

ಇತರ ಪಕ್ಷದ ನಾಯಕರಿಗೆ ಗಾಳ

ಇತರ ಪಕ್ಷದ ನಾಯಕರಿಗೆ ಗಾಳ

ಬಹುಜನ ಸಮಾಜವಾದಿ ಪಕ್ಷದ ಪ್ರಮುಖ ಮುಖಂಡರಾದ ಬ್ರಜೇಶ್ ಪಾಠಕ್, ಸ್ವಾಮಿ ಪ್ರಸಾದ್ ಮೌರ್ಯ, ಆರ್ ಕೆ ಮೌರ್ಯ ಅವರನ್ನು ಸೆಳೆದಿದ್ದು ಆ ಪಕ್ಷಕ್ಕೆ ಭಾರೀ ಹೊಡೆತ ಕೊಟ್ಟಿತು ಮತ್ತು ಜಾತಿ ನೆಲೆಯನ್ನು ಭದ್ರಪಡಿಸಿತು. ಅಲ್ಲದೆ, ಕಾಂಗ್ರೆಸ್ ನ ಹಿರಿಯ ನಾಯಕಿ ರೀಟಾ ಬಹುಗುಣ ಅವರನ್ನು ಸೆಳೆದಿದ್ದು ಕೂಡ ಸಹಾಯಕವಾಯಿತು. ಎಲ್ಲೆಲ್ಲಿ ದುರ್ಬಲವಿತ್ತೊ ಅಲ್ಲೆಲ್ಲ ಪ್ರಬಲ ರಾಜಕಾರಣಿಗಳನ್ನು ಸೆಳೆದಿದ್ದು ಅಮಿತ್ ಶಾ ಮಾಸ್ಟರ್ ಸ್ಟ್ರೋಕ್.

ಎಸ್ಪಿ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿಕೂಟ

ಎಸ್ಪಿ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿಕೂಟ

ಅಪವಿತ್ರ ಮೈತ್ರಿಕೂಟ ಮಾಡಿಕೊಂಡಿದ್ದಲ್ಲದೆ 105 ಸ್ಥಾನಗಳನ್ನು ಕಾಂಗ್ರೆಸ್ಸಿಗೆ ಸಮಾಜವಾದಿ ಪಕ್ಷ ಬಿಟ್ಟುಕೊಟ್ಟಿದ್ದು ಇಬ್ಬರಿಗೂ ಮುಳುವಾಯಿತು. ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಒಟ್ಟೊಟ್ಟಿಗೆ ಪ್ರಚಾರ ಮಾಡಿದರಾದರೂ ಇಬ್ಬರೂ ಮೋದಿಯನ್ನು ಟೀಕಿಸುವಲ್ಲೇ ಕಾಲ ಕಳೆದರೇ ಹೊರತು, ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಲಿಲ್ಲ. ಎರಡೂ ಪಕ್ಷಗಳ ನಡುವೆ ಈಗಾಗಲೆ ಆರೋಪ ಪ್ರತ್ಯಾರೋಪಗಳು ಶುರುವಾಗಿವೆ.

ಹೊಸಬರಿಗೆ ಅವಕಾಶ ಕೊಡದಿರುವುದು

ಹೊಸಬರಿಗೆ ಅವಕಾಶ ಕೊಡದಿರುವುದು

ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು ಶೇ.30ರಷ್ಟು ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದ್ದರೆ. ಆದರೆ, ಸಮಾಜವಾದಿ ಪಕ್ಷದಲ್ಲಿ ಸ್ಪರ್ಧಿಸಿದವರೆಲ್ಲ ಶಾಸಕರೇ. ತನ್ನ ತಂದೆ ಮತ್ತು ಕಾಕಾನ ಜೊತೆ ಅಖಿಲೇಶ್ ಆಡಿದ ಜಗಳ ಯಾವುದೇ ರೀತಿ ಸಹಾಯ ಮಾಡಲಿಲ್ಲ. ಶಿವಪಾಲ್ ಯಾದವ್ ಅವರು ಕೆಲ ಕ್ಷೇತ್ರಗಳಲ್ಲಿ ಅಖಿಲೇಶ್ ಅವರ ಅಭ್ಯರ್ಥಿಯನ್ನು ಸೋಲಿಸಲು ಕೂಡ ಸಹಾಯ ಮಾಡಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದು

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದು

ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಖಿಲೇಶ್ ಯಾದವ್, ಬಹುಜನ ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮಾಯಾವತಿ. ಆದರೆ, ಬಿಜೆಪಿಗೆ ಈ ರೀತಿ ಯಾರನ್ನೂ ಘೋಷಿಸಿರಲಿಲ್ಲ. ಯಾವುದೇ ವ್ಯಕ್ತಿಯನ್ನು ಘೋಷಿಸಿದ್ದರೂ ಮತ್ತೊಂದು ಜಾತಿಯ ಜನರಿಗೆ ಅಸಮಾಧಾನವಾಗುವ ಸಾಧ್ಯತೆಯಿತ್ತು. ಆದ್ದರಿಂದ, ಸಾಕಷ್ಟು ವಿಚಾರ ಮಾಡಿಯೇ ಯಾವುದೇ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಜೆಪಿ ಘೋಷಿಸಿರಲಿಲ್ಲ. ಇದರಿಂದಾಗಿ ಎಲ್ಲ ಜಾತಿ, ಪಂಗಡಗಳ ಜನರು ಮೋದಿಯ ಮುಖ ನೋಡಿಕೊಂಡು ಮತ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many factors have worked out for the victory of BJP in Uttar Pradesh assembly election 2017. BJP has registered emphatic win in Uttar Pradesh by trouncing SP, Congress and BSP together. Here are 10 possible reasons for the victory of BJP.
Please Wait while comments are loading...