ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವಿವಾದದಲ್ಲಿ ಸಿಲುಕಿದ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್

ಟೋಲ್ ಪ್ಲಾಜಾ ಮೂಲಕ ಸಾಗಿದರೂ ಶುಲ್ಕ ಕಟ್ಟದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್. ಬಾರಾಬಂಕಿ ಟೋಲ್ ಪ್ಲಾಜಾ ಮೂಲಕ ತಮ್ಮ ವಾಹನ ಸೇರಿದಂತೆ ತಮ್ಮ ಭದ್ರತೆ ಹೆಸರಿನಲ್ಲಿ 175 ವಾಹನಗಳನ್ನು ಕೊಂಡೊಯ್ದರೂ ಶುಲ್ಕ ಕಟ್ಟದ ಅಖಿಲೇಶ್.

|
Google Oneindia Kannada News

ಲಖ್ನೋ, ಆಗಸ್ಟ್ 10: ಪ್ರಧಾನಿ ನರೇಂದ್ರ ಮೋದಿ, ವಿಐಪಿ ಸಂಸ್ಕೃತಿಗೆ ವಿದಾಯ ಹೇಳಬೇಕೆಂಬ ನಿಟ್ಟಿನಲ್ಲಿ ಗಣ್ಯ ವ್ಯಕ್ತಿಗಳ ವಾಹನಗಳ ಮೇಲಿನ ಕೆಂಪು ದೀಪವನ್ನು ನಿರ್ಮೂಲನೆ ಮಾಡುವಂಥ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈಗ ವಿವಾದದಲ್ಲಿ ಸಿಲುಕಿದ್ದಾರೆ.

ಮೋದಿ ಸಾಮ್ರಾಜ್ಯ ಗುಜರಾತಿನಲ್ಲಿ ಅಖಿಲೇಶ್ ಚಿತ್ರವಿರುವ ಶಾಲಾ ಬ್ಯಾಗ್‌!ಮೋದಿ ಸಾಮ್ರಾಜ್ಯ ಗುಜರಾತಿನಲ್ಲಿ ಅಖಿಲೇಶ್ ಚಿತ್ರವಿರುವ ಶಾಲಾ ಬ್ಯಾಗ್‌!

ಆಗಸ್ಟ್ 9ರಂದು ಬಾರಾಬಂಕಿ ಎಂಬಲ್ಲಿ ಇರುವ ಟೋಲ್ ಮೂಲಕ ತೆರಳಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಅವರ ಕಾರು, ಭದ್ರತಾ ಸಿಬ್ಬಂದಿ ಹಾಗೂ ಬೆಂಬಲಿಗರ ವಾಹನಗಳು ಒಂದು ಪೈಸೆ ಶುಲ್ಕವನ್ನೂ ಕಟ್ಟದೆ ಸಾಗಿ ಹೋಗಿವೆ. ಇದು ವಿವಾದವನ್ನು ಸೃಷ್ಟಿಸಿದೆ.

Uttar Pradesh: Akhilesh Yadav pays no toll tax at Barabanki toll plaza

ತಮ್ಮ ಭದ್ರತೆ ಹೆಸರಿನಲ್ಲಿ ಹೋದೆಡೆಯೆಲ್ಲಾ ಹೀಗೆ ಅನೇಕ ವಾಹನಗಳನ್ನು ಕೊಂಡೊಯ್ಯುವುಸರಿಯೇ ಎಂಬ ಟೀಕೆಗಳು ಕೇಳಿಬಂದಿವೆ. ಬಾರಾಬಂಕಿಯಲ್ಲಿ ಸಾಗಿ ಹೋದ 175 ವಾಹನಗಳಿಂದ ಬರಬೇಕಿದ್ದ ಶುಲ್ಕವನ್ನು ಮುಖ್ಯಮಂತ್ರಿ ಯೋಗಿ ಹೇಗೆ ವಸೂಲಿ ಮಾಡುತ್ತಾರೆಂಬುದು ಈಗ ಸದ್ಯದ ಕುತೂಹಲವಾಗಿದೆ.

English summary
Uttar Pradesh's Former Chief Minister Akhilesh Yadav's convoy of 175 cars passes toll plaza in Barabanki without paying toll tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X