ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಬಿ.1.617 ರೂಪಾಂತರಿ ಭಾರತದ್ದಲ್ಲ: ಆರೋಗ್ಯ ಸಚಿವಾಲಯ

|
Google Oneindia Kannada News

ನವದೆಹಲಿ, ಮೇ 12: ದೇಶದಲ್ಲಿ ಎರಡನೇ ಅಲೆಗೆ ಕಾರಣ ಎನ್ನಲಾಗಿರುವ ಬಿ.1.617 ರೂಪಾಂತರಿ ಭಾರತದ್ದಲ್ಲ, ಇಲ್ಲಿಯದ್ದು ಅನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತೀಯ ರೂಪಾಂತರಿ ಎಂದು ಕರೆಯಲ್ಪಡುವ ಬಿ.1.617 ರೂಪಾಂತರ ಪದ ಬಳಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ವಿಶ್ವ ಆರೋಗ್ಯ ಸಂಸ್ಥೆ 'ಭಾರತೀಯ' ಎಂಬ ಪದವನ್ನು ಎಲ್ಲೂ ಬಳಸಿಲ್ಲ ಎಂದು ಹೇಳಿದೆ.

ದೇಶದಲ್ಲಿ ಕೋವಿಡ್ 19 ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿಕೆದೇಶದಲ್ಲಿ ಕೋವಿಡ್ 19 ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿಕೆ

ಡಬ್ಲ್ಯುಎಚ್‌ಒ ತನ್ನ 32 ಪುಟಗಳ ದಾಖಲೆಯಲ್ಲಿ ಇಂಡಿಯನ್ ವೇರಿಯಂಟ್ ಎಂಬ ಪದವನ್ನು ಕೊರೊನಾ ವೈರಸ್‌ನ ಬಿ .1.617 ಸ್ಟ್ರೈನ್‌ನೊಂದಿಗೆ ಸಂಯೋಜಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಾಸ್ತವವಾಗಿ, ಈ ವಿಷಯದ ಬಗ್ಗೆ ತನ್ನ ವರದಿಯಲ್ಲಿ ಭಾರತೀಯ ಎಂಬ ಪದವನ್ನು ಬಳಸಲಾಗಿಲ್ಲ ಎಂದು ಸಚಿವಾಲಯ ಹೇಳಿದೆ.

 Using Term Indian Variant For B.1.617 Strain Has No Basis, WHO Has Not Done So: Health Ministry

ಭಾರತದಲ್ಲಿ ಕೊರೊನಾ ಎರಡನೇ ಅಲೆ ಗಂಡಾಂತರವನ್ನೇ ಸೃಷ್ಟಿಸಿದೆ. ದೇಶದಲ್ಲಿ ದಿನಕ್ಕೆ ಬರೋಬ್ಬರಿ ಮೂರುವರೆ ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೆ ದಿನಕ್ಕೆ 4 ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ.

ಬಿ.1.617 ಭಾರತದ ರೂಪಾಂತರ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿಯೂ ಉಲ್ಲೇಖಿಸಿಲ್ಲ, ಈ ರೂಪಾಂತರವು ಜಾಗತಿಕ ಕಳವಳಕ್ಕೆ ಸಂಬಂಧಿಸಿದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದಾಗಿ ಅನೇಕ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ ಕೆಲವು ವರದಿಗಳಲ್ಲಿ ಅದನ್ನು ಭಾರತೀಯ ರೂಪಾಂತರ ಎಂದೂ ಉಲ್ಲೇಖಿಸಲಾಗಿದೆ. ಈ ವರದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

English summary
Taking umbrage against the B.1.617 mutant of the novel coronavirus being termed an Indian Variant, the Union Health Ministry on Wednesday said the WHO has not used the word "Indian" for this strain in its document.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X