ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಯುಎಸ್‌ ಪ್ರವಾಸ: 'ಸಂಬಂಧ ಗಟ್ಟಿಗೊಳಿಸಲು ಉತ್ತಮ ಅವಕಾಶ' ಎಂದ ಮೋದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 22: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ದಿನಗಳ ಯುಎಸ್‌ ಪ್ರವಾಸಕ್ಕೆ ತೆರಳಿದ್ದಾರೆ. ಈ ಭೇಟಿಯ ಬಗ್ಗೆ ತಿಳಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ "ಈ ಭೇಟಿಯು ಅಮೆರಿಕದೊಂದಿಗೆ ಸಂಬಂಧವನ್ನು ಗಟ್ಟಿ ಪಡಿಸಲು ಒಂದು ಉತ್ತಮ ಅವಕಾಶ," ಎಂದು ಹೇಳಿದ್ದಾರೆ.

ಹಾಗೆಯೇ ಇದೇ ಸಂದರ್ಭದಲ್ಲಿ, "ಜಪಾನ್‌ ಹಾಗೂ ಆಸ್ಟ್ರೇಲಿಯಾದೊಂದಿಗೂ ಸಂಬಂಧವನ್ನು ಗಟ್ಟಿಗೊಳಿಸಲು ಇದು ಸದಾವಕಾಶ," ಎಂದು ಪ್ರಧಾನಿ ಮೋದಿ ಅಭಿಪ್ರಾಯಿಸಿದ್ದಾರೆ. ಅಮೆರಿಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒಗಳ ಜೊತೆಯಲ್ಲಿ ಸಭೆ ನಡೆಸಲಿದ್ದಾರೆ. ಹಾಗೆಯೇ ದ್ವಿಪಕ್ಷೀಯ ಸಭೆಗಳನ್ನು ಕೂಡಾ ನಡೆಸಲಿದ್ದಾರೆ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಕೂಡಾ ಮಾತನಾಡಲಿದ್ದಾರೆ. ಕ್ವಾಡ್‌ ಶೃಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ ಜೋ ಬೈಡನ್ ಅಮೆರಿಕ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಜೋ ಬೈಡೆನ್‌ರನ್ನು ಭೇಟಿಯಾಗಲಿದ್ದಾರೆ.

 ಭಾರತದ ಲಸಿಕೆ ರಫ್ತು ನಿರ್ಧಾರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾತು ಭಾರತದ ಲಸಿಕೆ ರಫ್ತು ನಿರ್ಧಾರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾತು

ತಾನು ವಾಷಿಂಗ್ಟನ್‌ಗೆ ಹೊರಟ ಸಂದರ್ಭದಲ್ಲಿ ಪ್ರಧಾನಿ ಮೋದಿ, "ನನ್ನ ಈ ಅಮೆರಿಕ ಪ್ರವಾಸವು ಯುಎಸ್‌ಎ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಲು ಒಂದು ಉತ್ತಮ ಅವಕಾಶವಾಗಲಿದೆ. ಹಾಗೆಯೇ ಜಪಾನ್‌ ಹಾಗೂ ಆಸ್ಟ್ರೇಲಿಯಾದೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಲು ಕೂಡಾ ಸದಾವಕಾಶವಾಗಲಿದೆ. ಪ್ರಮುಖ ಜಾಗತಿಕ ವಿಚಾರದಲ್ಲಿ ನಮ್ಮ ಸಹಯೋಗ ಮುಂದುವರಿಸಲು ಸಹಕಾರಿಯಾಗಲಿದೆ," ಎಂದು ತಿಳಿಸಿದ್ದಾರೆ.

US Visit Occasion To Strengthen Strategic Partnership Says PM Modi

ಹವಾಮಾನ ಬದಲಾವಣೆ, ಭಯೋತ್ಪಾದನೆ ಹಾಗೂ ಕೊರೊನಾ ವೈರಸ್‌ ಸಾಂಕ್ರಾಮಿಕ ಸೇರಿದಂತೆ ಜಾಗತಿಕ ಸಮಸ್ಯೆಗಳನ್ನು ಪ್ರಮುಖವಾಗಿ ಮುಂದಿಟ್ಟುಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. "ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆಗಿನ ತನ್ನ ಮಾತುಕತೆಯಲ್ಲಿ ಭಾರತ ಹಾಗೂ ಅಮೆರಿಕದ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಮಾತನಾಡಲಿದ್ದೇನೆ. ಜಾಗತಿಕ ಹಾಗೂ ಸ್ಥಳೀಯ ವಿಚಾರಗಳ ಬಗ್ಗೆ ಮಾತನಾಡಲಿದ್ದೇನೆ," ಎಂದು ಹೇಳಿದ್ದಾರೆ.

 'ವಿಶ್ವಸಂಸ್ಥೆ ವಿಶ್ವ ನಾಯಕರ ಸಭೆಗೆ ನಾವೂ ಹಾಜರಾಗು‌ತ್ತೇವೆ' ಎಂದ ತಾಲಿಬಾನ್‌ 'ವಿಶ್ವಸಂಸ್ಥೆ ವಿಶ್ವ ನಾಯಕರ ಸಭೆಗೆ ನಾವೂ ಹಾಜರಾಗು‌ತ್ತೇವೆ' ಎಂದ ತಾಲಿಬಾನ್‌

ಕ್ವಾಡ್‌ ಸಭೆಗೆ ಮೊದಲ ಬಾರಿಗೆ ವೈಯಕ್ತಿಕವಾಗಿ ಭಾಗಿಯಾಗುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ಜಪಾನ್‌ ಪ್ರಧಾನ ಮಂತ್ರಿ ಯೊಶೊಹಿದೆ ಸುಗಾರೊಂದಿಗೆ ಮಾತನಾಡಿ, ಕಳೆದ ಮಾರ್ಚ್‌ನಲ್ಲಿ ನಡೆದ ವರ್ಚುವಲ್‌ ಶೃಂಗಸಭೆಯ ಫಲಿತಾಂಶಗಳ ಬಗ್ಗೆ ತಿಳಿಯುತ್ತೇನೆ. ಇಂಡೋ-ಪೆಸಿಫಿಕ್ ಪ್ರದೇಶದ ಬಗೆಗಿನ ನಿರ್ಧಾರಗಳ ಬಗ್ಗೆ ತಿಳಿಯುತ್ತೇನೆ," ಎಂದಿದ್ದಾರೆ.

"ನಾನು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ಜಪಾನ್‌ ಪ್ರಧಾನ ಮಂತ್ರಿ ಯೊಶೊಹಿದೆ ಅವರನ್ನು ಕೂಡಾ ಭೇಟಿಯಾಗಲಿದ್ದೇನೆ. ಜಪಾನ್‌ ಹಾಗೂ ಆಸ್ಟ್ರೇಲಿಯಾ ಜೊತೆಗಿನ ಸಂಬಂಧಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಜಾಗತಿಕ ಹಾಗೂ ಸ್ಥಳೀಯ ವಿಷಯಗಳ ಬಗ್ಗೆ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ಜಪಾನ್‌ ಪ್ರಧಾನ ಮಂತ್ರಿ ಯೊಶೊಹಿದೆ ಜೊತೆಯೂ ಚರ್ಚೆ ನಡೆಸಲಾಗುವುದು," ಪ್ರಧಾನಿ ತಿಳಿಸಿದ್ದರು.

ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರನ್ನು ಮೊದಲ ಬಾರಿಗೆ ಭೇಟಿಯಾಗುತ್ತಿರುವ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ವಿಜ್ಞಾನ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಅಧಿಕ ಸಹಕಾರವನ್ನು ಕೋರಿ ಈ ಚರ್ಚೆಯನ್ನು ನಡೆಸಲಾಗುವುದು," ಎಂದಿದ್ದಾರೆ. ಜೂನ್‌ ತಿಂಗಳಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಫೋನ್‌ ಮೂಲಕ ಮಾತುಕತೆ ನಡೆಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೆಚ್ ವಿ ಶ್ರಿಂಗ್ಲಾ"ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 22ರಂದು ಯುಎಸ್ ಪ್ರವಾಸ ಆರಂಭಿಸಲಿದ್ದು, ಸೆಪ್ಟೆಂಬರ್ 26ರಂದು ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಅವರು ಇಎಎಮ್‌, ಎನ್‌ಎಸ್‌ಎ ಸೇರಿದಂತೆ ಉನ್ನತ ಮಟ್ಟದ ನಿಯೋಗವೂ ಜೊತೆಗೆ ಇರಲಿದೆ. ಇದರ ಜೊತೆ ಪ್ರಧಾನಿಯವರು ತಮ್ಮ ಪ್ರವಾಸದ ಸಮಯದಲ್ಲಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ನಿರ್ಧರಿಸಿದ್ದಾರೆ," ಎಂದು ತಿಳಿಸಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Prime Minister Narendra Modi, leaving for his three-day visit to the US this morning, called it an "occasion to strengthen our strategic partnership with the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X