ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕ

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕಲ್ ಪೊಂಪಿಯೊ, ಭಾರತದ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳುವ ಪ್ರಯತ್ನಗಳಿಗೆ ಅಮೆರಿಕ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.

ಲಡಾಖ್‌ನ ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಜೂನ್ ತಿಂಗಳಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ.

ಭಾರತ-ಅಮೆರಿಕ ಮಾತುಕತೆ: ಮಹತ್ವದ ಒಪ್ಪಂದಕ್ಕೆ ಸಹಿಭಾರತ-ಅಮೆರಿಕ ಮಾತುಕತೆ: ಮಹತ್ವದ ಒಪ್ಪಂದಕ್ಕೆ ಸಹಿ

'ನಾವು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದು, ಗಲ್ವಾನ್ ಕಣಿವೆಯಲ್ಲಿ ಪಿಎಲ್‌ಎದಿಂದ ಹತ್ಯೆಗೀಡಾದ 20 ಯೋಧರು ಸೇರಿದಂತೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಸೇನೆಯ ಧೈರ್ಯಶಾಲಿ ಪುರುಷ ಮತ್ತು ಮಹಿಳೆಯರ ಗೌರವ ಸಲ್ಲಿಸಿದ್ದೇವೆ' ಎಂದು ಅವರು ಹೇಳಿದರು.

US Secretary Of State Mike Pompeo Says US Stands With India On Galwan Clash

'ಇಂದು ಎರಡು ಮಹಾನ್ ಪ್ರಜಾಪ್ರಭುತ್ವ ದೇಶಗಳಿಗೆ ಪರಸ್ಪರ ಸಮೀಪದಿಂದ ಬೆಳೆಯಲು ಅಪೂರ್ವ ಅವಕಾಶ ಸಿಕ್ಕಿದೆ. ಕೋವಿಡ್ ಪಿಡುಗಿನ ನಡುವೆ ಸಹಕಾರ ವೃದ್ಧಿಯ ವಿಚಾರವಾಗಿ ಚೀನಾದ ಕಮ್ಯುನಿಸ್ಟ್ ಪಕ್ಷವು ಈ ಪ್ರದೇಶದಲ್ಲಿ ಒಡ್ಡುತ್ತಿರುವ ಭದ್ರತೆ ಮತ್ತು ಸ್ವಾತಂತ್ರ್ಯದ ಮೇಲಿನ ಬೆದರಿಕೆ ಹಾಗೂ ಶಾಂತಿ ಮತ್ತು ಸ್ಥಿರತೆ ವಿಚಾರವಾಗಿ ಚರ್ಚೆ ನಡೆಸಲು ಸಾಕಷ್ಟು ಸಂಗತಿಗಳಿವೆ' ಎಂದು ಮೈಕಲ್ ಪೊಂಪಿಯೊ ತಿಳಿಸಿದರು.

ಭಾರತ ಅಮೆರಿಕಾ ನಡುವೆ 2+2 ಚರ್ಚೆ: ವಿಶೇಷವೇನು?ಭಾರತ ಅಮೆರಿಕಾ ನಡುವೆ 2+2 ಚರ್ಚೆ: ವಿಶೇಷವೇನು?

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಒದಗಿಸಲು ತನ್ನ ಬೆಂಬಲವನ್ನು ಪುನರುಚ್ಚರಿಸಿದರು. ಭಾರತವನ್ನು ಬಹು ಪಕ್ಷೀಯ ಸಹಭಾಗಿ ಎಂದು ಅಮೆರಿಕ ಪರಿಗಣಿಸಿದೆ ಎಂದು ತಿಳಿಸಿದರು.

English summary
US Secretary Of State Mike Pompeo said America stands with India on Galwan Valley clash with Chinese PLA soldiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X