• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸಮರ್ಥವಾಗಿ ನಿಭಾಯಿಸುವಲ್ಲಿ ವಿಶ್ವದಲ್ಲೇ ಮೋದಿ ನಂಬರ್ 1

|

ನವದೆಹಲಿ, ಏಪ್ರಿಲ್ 23: ಕೊರೊನಾ ವೈರಸ್ ಸಮರ್ಥವಾಗಿ ನಿಭಾಯಿಸಿದ 10 ದೇಶಗಳ ನಾಯಕರುಗಳ ಪೈಕಿ ಮೋದಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

   ಮಾಜಿ ಪ್ರೇಮಿಗಳಿಗೆ ಮದುವೆ ಮಾಡಿಸಿದ ಸಾತನೂರು ಪೊಲೀಸರು | Satanur Police

   ಕಳೆದ ಜನವರಿ 1ರಿಂದ ಏ.14ರವರೆಗಿನ ಜಾಗತಿಕ ವರದಿಗಳನ್ನಾಧರಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಮೊದಲನೇ ಸ್ಥಾನ ಲಭಿಸಿದೆ.

   ಮಾರಕ ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಈ ಕುರಿತು ಅಮೆರಿಕದ 'ಮಾರ್ನಿಂಗ್ ಕನ್ಸಲ್ಟ್' ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ, ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

   ಕೊರೊನಾ ವೈರಸನ್ನು ಸಮರ್ತವಾಗಿ ನಿಭಾಯಿಸಿದ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೋದಿಯವರನ್ನು ಕೊಂಡಾಡಿದ್ದಾರೆ.

   ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶ ಸಮರ್ಥ ನಾಯಕತ್ವದಡಿಯಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಈ ಸಮೀಕ್ಷಾ ವರದಿಯೇ ಸಾಕ್ಷಿ ಎಂದು ಹೇಳಿದ್ದಾರೆ.

   ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವ ನಾಯಕರ ಪಟ್ಟಿಯನ್ನು ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು ಅಗ್ರಸ್ಥಾನ ಪಡೆದಿದ್ದರು. ಈ ಸಂತದ ಸಂಗತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಂಚಿಕೊಂಡಿದ್ದರು.

   ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ನಾಯಕರುಗಳು

   ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ನಾಯಕರುಗಳು

   ನರೇಂದ್ರ ಮೋದಿ-ಭಾರತ, ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್- ಮೆಕ್ಸಿಕೋ, ಬೋರಿಸ್ ಜಾನ್ಸನ್-ಇಂಗ್ಲೆಂಡ್, ಜೈರ್ ಬೋಲ್ಸನಾರೋ- ಬ್ರೆಜಿಲ್, ಸ್ಕಾಟ್ ಮಾರಿಸನ್- ಆಸ್ಟ್ರಲೀಯಾ, ಜಸ್ಟಿನ್ ಟ್ರುಡೊ- ಕೆನಡಾ, ಏಂಜೆಲಾ ಮಾರ್ಕೆಲ್- ಜರ್ಮನಿ,

   ಶಿಂಜೋ ಅಬೆ- ಜಪಾನ್, ಇಮ್ಯಾನುಯೆಲ್ ಮ್ಯಾಕ್ರೋನ್- ಫ್ರಾನ್ಸ್, ಹಾಗೂ ಡೊನಾಲ್ಡ್ ಟ್ರಂಪ್- ಅಮೆರಿಕ

   ಈ ಪೈಕಿ ಶಿಂಜೋ ಅಬೆ(ಜಪಾನ್), ಇಮ್ಯಾನುಯೆಲ್ ಮ್ಯಾಕ್ರೋನ್(ಫ್ರಾನ್ಸ್) ಹಾಗೂ ಡೊನಾಲ್ಡ್ ಟ್ರಂಪ್(ಅಮೆರಿಕ)ಅವರಿಗೆ ನಕಾರಾತ್ಮಕ ಅಂಕಗಳು ದೊರೆತಿರುವುದು ಅಚ್ಚರಿಗೆ ಕಾರಣವಾಗಿದೆ.

   ಮೋದಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ

   ಮೋದಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ

   ದೇಶ ಸಮರ್ಥ ನಾಯಕತ್ವದ ಅಡಿಯಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಈ ಸಮೀಕ್ಷಾ ವರದಿಯೇ ಸಾಕ್ಷಿ. ಸತ್ಯಕ್ಕೆ ಯಾವುದೇ ಸಾಕ್ಷಿಗಳನ್ನೂ ಒದಗಿಸುವ ಅವಶ್ಯಕತೆ ಇರುವುದಿಲ್ಲ. ಖುದ್ದು ಸತ್ಯವೇ ಸಾಕ್ಷಿಯಾಗಿದೆ. ಕೊರೊನಾ ವೈರಸನ್ನು ಪ್ರಧಾನಿ ಮೋದಿ ನಿರ್ವಹಿಸುತ್ತಿರುವ ರೀತಿಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಮೋದಿ ಕೇವಲ ಭಾರತ ಮಾತ್ರವಲ್ಲದೇ, ಇಡೀ ವಿಶ್ವ ಸಮುದಾಯದ ಆರೋಗ್ಯದ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯನೂ ಸುರಕ್ಷತೆಯ ಭಾವನೆ ಅನುಭವಿಸುತ್ತಿರುವುದಕ್ಕೆ ಪ್ರಧಾನಿ ಮೋದಿಯವರ ಪರಿಣಾಮಕಾರಿ ನೀತಿಗಳೇ ಕಾರಣ ಎಂದು ಕೊಂಡಾಡಿದ್ದಾರೆ.

   ಸಮೀಕ್ಷೆ ಹಂಚಿಕೊಂಡಿದ್ದ ನಿರ್ಮಲಾ ಸೀತಾರಾಮನ್

   ಸಮೀಕ್ಷೆ ಹಂಚಿಕೊಂಡಿದ್ದ ನಿರ್ಮಲಾ ಸೀತಾರಾಮನ್

   ಮಾರ್ನಿಂಗ್ಸ್ ಕನ್ಸಲ್ಟ್ ನಡೆಸಿದ್ದ ಸಮೀಕ್ಷೆಯ ವರದಿಯಲ್ಲಿ ನಿನ್ನೆ(ಏ.22) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಕೊರೊನಾ ವೈರಸ್‌ನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಅಗ್ರಸ್ಥಾನ ಲಭಿಸಿರುವುದು ಭಾರತಕ್ಕೆ ಸಂದ ಗೌರವ ಎಂದು ನಿರ್ಮಲಾ ಸಂತಸ ವ್ಯಕ್ತಪಡಿಸಿದ್ದರು.

   ಕೊರೊನಾವನ್ನು ಭಾರತದ ನೆಲದಿಂದ ಒದ್ದೋಡಿಸುವುದು ನಿಶ್ಚಿತ

   ಕೊರೊನಾವನ್ನು ಭಾರತದ ನೆಲದಿಂದ ಒದ್ದೋಡಿಸುವುದು ನಿಶ್ಚಿತ

   ಭಾರತ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರನಾ ವೈರಸ್ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದ್ದು, ಮಾರಕ ವೈರಾಣುವನ್ನು ಈ ನೆಲದಿಂದ ಒದ್ದೊಡಿಸುವುದು ನಿಶ್ಚಿತ ಎಂದು ನಿರ್ಮಲಾ ಸೀತಾರಾಮನ್ ಭರವಸೆ ವ್ಯಕ್ತಪಡಿಸಿದ್ದರು. ಇಡೀ ವಿಶ್ವವೇ ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದೆ ಎಂದು ನಿರ್ಮಲಾ ಹೇಳಿಕೊಂಡಿದ್ದರು.

   English summary
   The United States Research company 'Morning Consult', in its research has ranked Indian Prime Minister Narendra Modi number 1 in combating the deadly COVID-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X