ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಡೊನಾಲ್ಡ್ ಟ್ರಂಪ್: 2ನೇ ದಿನದ ಕಾರ್ಯಕ್ರಮಗಳ ವೇಳಾಪಟ್ಟಿ

|
Google Oneindia Kannada News

ನವದೆಹಲಿ, ಫೆಬ್ರವರಿ 25: ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಸೋಮವಾರ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗುಜರಾತ್‌ನ ಸಬರಮತಿ ಆಶ್ರಮ, ಮೊಟೆರಾ ಕ್ರೀಡಾಂಗಣ, ಆಗ್ರಾದ ತಾಜ್‌ ಮಹಲ್‌ಗೆ ಭೇಟಿ ನೀಡಿ ನವದೆಹಲಿಯ ಐಷಾರಾಮಿ ಹೋಟೆಲ್ ಐಟಿಸಿ ಮೌರ್ಯದಲ್ಲಿ ವಾಸ್ತವ್ಯ ಹೂಡಿದ್ದರು.

ಎರಡನೆಯ ದಿನವಾದ ಮಂಗಳವಾರ ಕೂಡ ಟ್ರಂಪ್ ಹಲವು ಕಾರ್ಯಕ್ರಮಗಳಲ್ಲಿ, ಮಾತುಕತೆಗಳಲ್ಲಿ ಭಾಗಿಯಾಗಲಿದ್ದಾರೆ.

ಡೊನಾಲ್ಡ್ ಟ್ರಂಪ್ ದಂಪತಿ ಜೊತೆಗಿರುವ ಮಹಿಳೆ ಯಾರು?ಡೊನಾಲ್ಡ್ ಟ್ರಂಪ್ ದಂಪತಿ ಜೊತೆಗಿರುವ ಮಹಿಳೆ ಯಾರು?

ಭಾರತ-ಅಮೆರಿಕ ಜಾಗತಿಕ ಸಹಭಾಗಿತ್ವವನ್ನು ವಿಸ್ತರಿಸುವ ಉತ್ಸಾಹದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಈ ಕುರಿತು ತೀವ್ರ ಚರ್ಚೆ ನಡೆಸಲಿದ್ದಾರೆ.

ಮಂಗಳವಾರ ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಭವ್ಯ ಸ್ವಾಗತ ಸಮಾರಂಭದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ದಂಪತಿ ಪಾಲ್ಗೊಳ್ಳಲಿದ್ದಾರೆ.

ದೆಹಲಿಗೆ ಯಡಿಯೂರಪ್ಪ; ಟ್ರಂಪ್ ಜೊತೆ ಔತಣಕೂಟದಲ್ಲಿ ಭಾಗಿದೆಹಲಿಗೆ ಯಡಿಯೂರಪ್ಪ; ಟ್ರಂಪ್ ಜೊತೆ ಔತಣಕೂಟದಲ್ಲಿ ಭಾಗಿ

ಅಲ್ಲಿಂದ ಅವರು ರಾಜಘಟ್‌ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ನಂತರ ಹೈದರಾಬಾದ್ ಹೌಸ್‌ನಲ್ಲಿ ಟ್ರಂಪ್ ಹಾಗೂ ಮೋದಿ ನಡುವೆ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ.

ಖಾಸಗಿ ಕಾರ್ಯಕ್ರಮಗಳು

ಖಾಸಗಿ ಕಾರ್ಯಕ್ರಮಗಳು

ಮಾತುಕತೆ ಪೂರ್ಣಗೊಂಡ ಬಳಿಕ ಪ್ರಧಾನಿ ಮೋದಿ ಆಯೋಜಿಸಿರುವ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಅಮೆರಿಕ ರಾಯಭಾರ ಕಚೇರಿಯಲ್ಲಿ ಕೈಗಾರಿಕಾ ಪ್ರತಿನಿಧಿಗಳ ಜತೆಗೆ ದುಂಡು ಮೇಜಿನ ಮಾತುಕತೆ ಸೇರಿದಂತೆ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಟ್ರಂಪ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ರಾಷ್ಟ್ರಪತಿ ಭವನದಲ್ಲಿ ಔತಣ

ರಾಷ್ಟ್ರಪತಿ ಭವನದಲ್ಲಿ ಔತಣ

ಸಂಜೆ ರಾಷ್ಟ್ರಪತಿ ಭವನಕ್ಕೆ ತೆರಳಲಿರುವ ಡೊನಾಲ್ಡ್ ಟ್ರಂಪ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲಿ ಕೋವಿಂದ್ ಆಯೋಜಿಸಿರುವ ಔತಣಕೂಟದಲ್ಲಿ ಟ್ರಂಪ್, ಮೋದಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಂತರ ಟ್ರಂಪ್ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಟ್ರಂಪ್ ಉಳಿದುಕೊಳ್ಳಲಿರುವ ಹೋಟೆಲ್‌ನಲ್ಲಿ ಏನೇನಿರಲಿದೆ? ಒಂದು ದಿನದ ವೆಚ್ಚವೆಷ್ಟು?ಟ್ರಂಪ್ ಉಳಿದುಕೊಳ್ಳಲಿರುವ ಹೋಟೆಲ್‌ನಲ್ಲಿ ಏನೇನಿರಲಿದೆ? ಒಂದು ದಿನದ ವೆಚ್ಚವೆಷ್ಟು?

3 ಬಿಲಿಯನ್ ಡಾಲರ್ ಸೇನಾ ಒಪ್ಪಂದ

3 ಬಿಲಿಯನ್ ಡಾಲರ್ ಸೇನಾ ಒಪ್ಪಂದ

ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಭಾರತದೊಂದಿಗೆ ಸೇನಾ ಸಂಬಂಧ ವೃದ್ಧಿಸಿಕೊಳ್ಳುವುದಾಗಿ ತಿಳಿಸಿದ್ದರು. ಸೇನಾ ಹೆಲಿಕಾಪ್ಟರ್ ಹಾಗೂ ಸೇನಾ ಉಪಕರಣಗಳ ಖರೀದಿ ಸಂಬಂಧ ಭಾರತದೊಂದಿಗೆ 3 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ನಡೆಯಲಿದೆ ಎಂದು ತಿಳಿಸಿದ್ದರು. ಈ ವಿಚಾರವಾಗಿ ಮಂಗಳವಾರ ಮೋದಿ ಹಾಗೂ ಟ್ರಂಪ್ ಚರ್ಚಿಸುವ ನಿರೀಕ್ಷೆಯಿದೆ.

ರಕ್ಷಣೆ, ಮತ್ತಿತರ ಒಪ್ಪಂದಗಳ ಚರ್ಚೆ

ರಕ್ಷಣೆ, ಮತ್ತಿತರ ಒಪ್ಪಂದಗಳ ಚರ್ಚೆ

24 ಎಂಎಚ್-60 ರೋಮಿಯೋ ಹೆಲಿಕಾಪ್ಟರ್‌ಗಳನ್ನು ಅಮೆರಿಕದಿಂದ 2.6 ಬಿಲಿಯನ್ ಡಾಲರ್‌ಗೆ ಖರೀದಿಸುವುದು, 800 ಮಿಲಿಯನ್ ಡಾಲರ್ ವೆಚ್ಚದಲ್ಲಿ ಆರು ಎಎಚ್-64ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸುವುದರ ಒಪ್ಪಂದ ನಡೆಯುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಭಯೋತ್ಪಾದನಾ ವಿರೋಧಿ ಹೋರಾಟ, ಎಚ್‌1ಬಿ ವೀಸಾ, ಇಂಧನ ಭದ್ರತೆ, ಧಾರ್ಮಿಕ ಸ್ವಾತಂತ್ರ್ಯ, ತಾಲಿಬಾನ್ ಜತೆಗಿನ ಶಾಂತಿ ಒಪ್ಪಂದ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸ್ಥಿತಿಗತಿ ಮುಂತಾದವುಗಳ ಕುರಿತು ಸಹ ಇಬ್ಬರೂ ನಾಯಕರು ಚರ್ಚಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ಶಾಲೆಗೆ ಮೆಲಾನಿಯಾ

ದೆಹಲಿ ಶಾಲೆಗೆ ಮೆಲಾನಿಯಾ

ಮೆಲಾನಿಯಾ ಟ್ರಂಪ್ ದೆಹಲಿ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದು, ಅಲ್ಲಿನ 'ಆನಂದದ ಪಠ್ಯಕ್ರಮ' ತರಗತಿಯನ್ನು ವೀಕ್ಷಿಸಲಿದ್ದಾರೆ. ಶಾಲೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿಯೂ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಭದ್ರತಾ ಸಂಸ್ಥೆಗಳ ಸಲಹೆಯಂತೆ ಈ ಮಾರ್ಗಗಳ ಮರಗಳನ್ನು ಒಪ್ಪ ಓರಣಗೊಳಿಸಲಾಗಿದೆ. ದಕ್ಷಿಣ ದೆಹಲಿಯ ಶಾಲೆಗೆ ಮಧ್ಯಾಹ್ನ ಭೇಟಿ ನೀಡಲಿರುವ ಮೆಲಾನಿಯಾ, ಸುಮಾರು ಒಂದು ಗಂಟೆ ಅಲ್ಲಿ ಕಳೆಯಲಿದ್ದಾರೆ.

ರಸ್ತೆಗಳಿಗೆ ಅಲಂಕಾರ

ರಸ್ತೆಗಳಿಗೆ ಅಲಂಕಾರ

ಅಲ್ಲಿ ಶಾಲೆಯ ವಿವಿಧ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳ ಜತೆಗೆ ಸಮಯ ಕಳೆಯಲಿದ್ದಾರೆ. ದೆಹಲಿ ಸರ್ಕಾರ ಜಾರಿಗೆ ತಂದಿರುವ ವಿಶಿಷ್ಟ ಹ್ಯಾಪಿನೆಸ್ ಪಠ್ಯಕ್ರಮದ ಚಟುವಟಿಕೆಗಳನ್ನು ವೀಕ್ಷಿಸಲಿದ್ದಾರೆ. ಮೆಲಾನಿಯಾ ತೆರಳುಗ ರಸ್ತೆಗಳನ್ನು ಸಿಂಗರಿಸಲಾಗಿದೆ. ಹಾಳಾಗಿದ್ದ ರಸ್ತೆಯನ್ನು ದುರಸ್ತಿ ಮಾಡಿ, ಪಾದಚಾರಿ ಮಾರ್ಗಗಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ. ಶಾಲೆಯ ಸುತ್ತಲೂ ಗಿಡಗಳನ್ನು ನೆಡಲಾಗಿದೆ.

English summary
US President Donald Trump will held talks with PM Narendra Modi on defence contract and other things. Here is the details of his 2nd day schedule in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X