ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅನುಮತಿ ಇಲ್ಲದೆ ಇಇಝೆಡ್‌ನಲ್ಲಿ ಸಮರಾಭ್ಯಾಸ ನಡೆಸಿದ ಅಮೆರಿಕ ನೌಕಾಪಡೆ

|
Google Oneindia Kannada News

ನವದೆಹಲಿ, ಏಪ್ರಿಲ್ 9: ಭಾರತಕ್ಕೆ ಮೀಸಲಾದ ಆರ್ಥಿಕ ವಲಯದಲ್ಲಿ (ಇಇಝೆಡ್) ತನ್ನ ಯುದ್ಧ ನೌಕೆಗಳು ಪೂರ್ವಾನುಮತಿ ಇಲ್ಲದೆ ಸಮರಾಭ್ಯಾಸ ನಡೆಸುವ ಮೂಲಕ ಭಾರತದ ಸಾಗರ ನೀತಿಯನ್ನು ಉಲ್ಲಂಘನೆ ಮಾಡಿಕೊಂಡಿರುವುದಾಗಿ ಅಮೆರಿಕದ ನೌಕಾಪಡೆ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಿದೆ. ಒಂದು ದೇಶದ ಜಲ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿ ಅಭ್ಯಾಸ ನಡೆಸಿರುವುದಲ್ಲದೆ ಅದರ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವುದು ತೀರಾ ವಿರಳ ಹಾಗೂ ಅಸಹಜ ನಡೆಯಾಗಿದೆ.

ಭಾರತದ ಇಇಝೆಡ್‌ನಲ್ಲಿ ತಮ್ಮ ಯುದ್ಧ ನೌಕೆಗಳು ಫ್ರೀಡಂ ಆಫ್ ನೇವಿಗೇಷನ್ ಕಾರ್ಯಾಚರಣೆ ನಡೆಸಿರುವುದಾಗಿ ಅಮೆರಿಕ ನೌಕಾಪಡೆ ತಿಳಿಸಿದೆ. ಭಾರತದ ಸಾಗರ ಭದ್ರತಾ ನೀತಿಯಡಿ ತನ್ನ ಜಲ ವ್ಯಾಪ್ತಿಯಲ್ಲಿ ಅಂತಹ ಸಮರಾಭ್ಯಾಸಗಳನ್ನು ನಡೆಸಲು ಭಾರತದ ಅನುಮತಿ ಪಡೆಯಬೇಕು.

'ಏಪ್ರಿಲ್ 7ರಂದು ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ನೌಕೆಯು ಅಂತಾರಾಷ್ಟ್ರೀಯ ಕಾನೂನಿನಂತೆ ಭಾರತದ ಪೂರ್ವ ಸಮ್ಮತಿಗೆ ಕೋರದೆಯೇ ಭಾರತದ ಎಕ್ಸ್‌ಕ್ಲೂಸಿವ್ ಎಕಾನಮಿಕ್ ಝೋನ್‌ ಒಳಗಿನ ಲಕ್ಷದ್ವೀಪದ ಪಶ್ಚಿಮದ 130 ಮೈಲು ದೂರದಲ್ಲಿ ಸಮರಾಭ್ಯಾಸ ನಡೆಸಿದೆ' ಎಂದು ಅಮೆರಿಕದ 7 ಫ್ಲೀಟ್ ಪಬ್ಲಿಕ್ ಅಫೇರ್ಸ್ ಹೇಳಿಕೆ ನೀಡಿದೆ.

US Navy Conducts Exercise In Indias Exclusive Economic Zone Without Consent

'ನಾವು ಈ ಹಿಂದೆ ಮಾಡಿದ್ದಂತೆ ದಿನಚರಿಯ ಭಾಗವಾಗಿ ಮತ್ತು ಸಾಮಾನ್ಯವಾಗಿರುವ ನೇವಿಗೇಷನ್ ಸ್ವಾತಂತ್ರ್ಯದ ಕಾರ್ಯಾಚರಣೆಗಳನ್ನು (ಎಫ್‌ಒಎನ್‌ಒಪಿಎಸ್) ನಡೆಸಿದ್ದೇವೆ. ಅದನ್ನು ಮುಂದೆಯೂ ನಡೆಸಲಿದ್ದೇವೆ. ಎಫ್‌ಒಎನ್‌ಒಪಿಎಸ್ ಒಂದು ದೇಶ ಅಥವಾ ರಾಜಕೀಯ ಹೇಳಿಕೆಗಳನ್ನು ನೀಡುವುದಲ್ಲ' ಎಂದು ಹೇಳಿದೆ.

ಈ ಬಗ್ಗೆ ಇದುವರೆಗೂ ಭಾರತೀಯ ನೌಕಾಪಡೆ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿಲ್ಲ.

English summary
US Navy has conducted exercise in India's Exclusive Economic Zone without prior consent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X