ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UNSC:ಭಾರತಕ್ಕೆ ಬೆಂಬಲ ಘೋಷಿಸಿದ ಡೊನಾಲ್ಡ್ ಟ್ರಂಪ್

|
Google Oneindia Kannada News

ನವದೆಹಲಿ, ಫೆಬ್ರವರಿ 26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಪಡೆಯಲು ಭಾರತಕ್ಕೆ ಪಾಕಿಸ್ತಾನವೂ ಈ ಹಿಂದೆ ಬೆಂಬಲ ವ್ಯಕ್ತಪಡಿಸಿದ್ದು ನೆನಪಿರಬಹುದು. ಎರಡು ವರ್ಷಗಳ ಸದಸ್ಯ ಸ್ಥಾನವನ್ನು ಭಾರತ 8ನೇ ಬಾರಿಗೆ ಪಡೆದುಕೊಂಡಿದೆ. ಆದರೆ, ಶಾಶ್ವತ ಸದಸ್ಯ ಸ್ಥಾನ ಪಡೆಯುವ ಭಾರತದ ಯತ್ನಕ್ಕೆ ಇನ್ನೂ ಫಲ ಸಿಕ್ಕಿಲ್ಲ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ನಿಟ್ಟಿನಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದ ಟ್ರಂಪ್ ಅವರು ಇಂದು ಇಂಡೋ-ಯುಎಸ್ ಜಾಗತಿಕ ರಾಜತಾಂತ್ರಿಕ ಮೈತ್ರಿ ಕುರಿತಂತೆ ಜಂಟಿ ಪತ್ರಿಕಾ ಹೇಳಿಕೆ ಪ್ರಕಟಿಸಿದ್ದಾರೆ. ಅಣ್ವಸ್ತ್ರ ಪೂರೈಕೆ ಗುಂಪು(ಎನ್ಎಸ್ ಜಿ) ಸೇರಲು ಭಾರತ ಅರ್ಹವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ(UNSC)ಯಲ್ಲಿ ಭಾರತ ಕಾಯಂ ಸ್ಥಾನ ಪಡೆಯಲು ಬೇಕಾದ ಅಗತ್ಯ ಬೆಂಬಲವನ್ನು ಅಮೆರಿಕ ನೀಡಲಿದೆ ಎಂದು ಟ್ರಂಪ್ ಹೇಳಿದರು.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರ

ಪ್ರಧಾನಿ ಮೋದಿ ಹಾಗೂ ಯುಎಸ್ ಅಧ್ಯಕ್ಷ ಟ್ರಂಪ್ ಇಬ್ಬರು ಪತ್ರಿಕಾ ಹೇಳಿಕೆಯಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ತನ್ನ ಗಡಿಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. 26/11 ಮುಂಬೈ ದಾಳಿ ಹಾಗೂ ಪಠಾಣ್ ಕೋಟ್ ದಾಳಿ ಬಗ್ಗೆ ಉಲ್ಲೇಖಿಸಲಾಗಿದೆ.

US-India Joint Statement: ‘Support Permanent Seat For India in UNSC,’ Says President Trump

ಅಮೆರಿಕ, ರಷ್ಯಾ, ಬ್ರಿಟನ್, ಚೀನಾ ಹಾಗೂ ಫ್ರಾನ್ಸ್ ದೇಶಗಳು ಯುಎನ್ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನವನ್ನು ಹೊಂದಿವೆ. ಬೆಲ್ಜಿಯಂ, ಐವರಿ ಕೋಸ್ಟ್, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್, ದಕ್ಷಿಣ ಆಫ್ರಿಕಾ, ಡೊಮೊನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ ತಾತ್ಕಾಲಿಕ ಸದಸ್ಯರಾಷ್ಟ್ರಗಳಾಗಿವೆ. ಭಾರತ 1950-51 ರಿಂದ 2011-2012 ರ ತನಕ ಏಳು ಬಾರಿ ತಾತ್ಕಾಲಿಕ ಸದಸ್ಯತ್ವ ಪಡೆದುಕೊಂಡಿತ್ತು.

2021-22ರ ಅವಧಿಗೆ 5 ತಾತ್ಕಾಲಿಕ ಸ್ಥಾನಕ್ಕಾಗಿ ಜೂನ್ 2020ರಲ್ಲಿ ಚುನಾವಣೆ ನಡೆಯಲಿದೆ, ಒಟ್ಟು 193 ಸದಸ್ಯ ಬಲದಲ್ಲಿ 55 ಸದಸ್ಯರಾಷ್ಟ್ರಗಳ ಬೆಂಬಲವನ್ನು ಭಾರತ ಪಡೆದಿದೆ.

English summary
India and the US on Wednesday released a joint statement a day after US President Donald Trump, on Tuesday, finished his two-day maiden state visit to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X