• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾವೈರಸ್ ಲಸಿಕೆ ಉತ್ಪಾದನೆಯಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದ ಬೈಡನ್!

|
Google Oneindia Kannada News

ನವದೆಹಲಿ, ಆಗಸ್ಟ್ 4: "ಭಾರತದಂತಾ ರಾಷ್ಟ್ರಗಳಲ್ಲಿ ಕೊರೊನಾವೈರಸ್ ಲಸಿಕೆ ಉತ್ಪಾದಿಸುವ ವೇಗವನ್ನು ಹೆಚ್ಚಿಸುವುದಕ್ಕೆ ಅಗತ್ಯವಿರುವ ಸಹಾಯ ಮಾಡುವುದಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಪ್ರಯತ್ನಿಸುತ್ತಿದೆ," ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ವೈಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಜಗತ್ತಿನ ಇತರೆ ರಾಷ್ಟ್ರಗಳಿಗೆ ಪ್ರಜಾಪ್ರಭುತ್ವ ದೇಶಗಳು ಸಹಕಾರ ನೀಡಬೇಕು ಎಂದಿದ್ದಾರೆ.

ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ 2.5 ಕೋಟಿ ಡಾಲರ್ ನೀಡಿದ ಅಮೆರಿಕಾ!ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ 2.5 ಕೋಟಿ ಡಾಲರ್ ನೀಡಿದ ಅಮೆರಿಕಾ!

"ಜಗತ್ತಿನಾದ್ಯಂತ ಕೊರೊನಾವೈರಸ್ ಅನ್ನು ಸಮರ್ಥವಾಗಿ ಎದುರಿಸುವುದಕ್ಕೆ ಕೋಟಿ ಕೋಟಿ ಡೋಸ್ ಲಸಿಕೆಗಳ ಅಗತ್ಯವಿದೆ. ಈ ಪೈಕಿ 50 ಕೋಟಿ ಡೋಸ್ ಲಸಿಕೆಯನ್ನು ಇತರೆ ರಾಷ್ಟ್ರಗಳಿಗೆ ಉಚಿತವಾಗಿ ಪೂರೈಸುವುದಕ್ಕೆ ಯುಎಸ್ ಸಿದ್ಧವಾಗಿದೆ," ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಕೊವಿಡ್-19 ಲಸಿಕೆ ಉತ್ಪಾದನೆ ಹೆಚ್ಚಿಸಲು ಸಹಾಯ

ಕೊವಿಡ್-19 ಲಸಿಕೆ ಉತ್ಪಾದನೆ ಹೆಚ್ಚಿಸಲು ಸಹಾಯ

"50 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವುದಕ್ಕೆ ನಾವು ಬದ್ಧವಾಗಿದ್ದೇವೆ. ಇದರ ಜೊತೆಗೆ ಹೆಚ್ಚುವರಿ ಲಸಿಕೆಯನ್ನು ಪೂರೈಸಲು ಪ್ರಯತ್ನಿಸುತ್ತೇವೆ. ಅದೇ ರೀತಿ ಭಾರತದಂತಾ ರಾಷ್ಟ್ರಗಳಲ್ಲಿ ತಮಗೆ ಅಗತ್ಯವಿದ್ದಷ್ಟು ಪ್ರಮಾಣದ ಲಸಿಕೆಯ ಜೊತೆಗೆ ಹೆಚ್ಚುವರಿ ಲಸಿಕೆ ಉತ್ಪಾದಿಸಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯವಾಗಿರುವ ಎಲ್ಲ ರೀತಿ ನೆರವು ನೀಡುತ್ತೇವೆ. ಇದೀಗ ನಾವು ಅದನ್ನೇ ಮಾಡುತ್ತಿದ್ದೇವೆ," ಎಂದು ಬೈಡನ್ ಹೇಳಿದ್ದಾರೆ.

ಕೊರೊನಾವೈರಸ್ ಕಾಲದಲ್ಲಿ ಲಸಿಕೆಯ ಶಸ್ತ್ರಾಗಾರ ಅಮೆರಿಕಾ

ಕೊರೊನಾವೈರಸ್ ಕಾಲದಲ್ಲಿ ಲಸಿಕೆಯ ಶಸ್ತ್ರಾಗಾರ ಅಮೆರಿಕಾ

ಜಗತ್ತಿನ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಪ್ರಜಾಪ್ರಭುತ್ವದ ಶಸ್ತ್ರಾಗಾರವಾಗಿತ್ತು. ಕೊರೊನಾವೈರಸ್ ವಿರುದ್ಧ ನಡೆದಿರುವ ಈ ಯುದ್ಧದ ಸಂದರ್ಭದಲ್ಲಿ ಲಸಿಕೆ ಶಸ್ತ್ರಾಗಾರವಾಗಲಿದೆ ಎಂದು ಬೈಡನ್ ಪ್ರತಿಪಾದಿಸಿದ್ದಾರೆ. ಅಲ್ಲದೇ, ನಾವು ನೀಡುತ್ತಿರುವ ಲಸಿಕೆಗೆ ಯಾವುದೇ ರೀತಿ ಹಣವನ್ನು ನೀಡಬೇಕಾಗಿಲ್ಲ. ನಾವು ಉಚಿತವಾಗಿಯೇ ಲಸಿಕೆಯನ್ನು ಪೂರೈಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.

ಸಂಪೂರ್ಣ ಮಾಹಿತಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶುರುವಾಗಿ 200 ದಿನಸಂಪೂರ್ಣ ಮಾಹಿತಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶುರುವಾಗಿ 200 ದಿನ

500 ದಶಲಕ್ಷ ಲಸಿಕೆ ಪೈಕಿ 100 ದಶಲಕ್ಷ ಲಸಿಕೆಯ ದಾನ

500 ದಶಲಕ್ಷ ಲಸಿಕೆ ಪೈಕಿ 100 ದಶಲಕ್ಷ ಲಸಿಕೆಯ ದಾನ

ಪ್ರಪಂಚದಾದ್ಯಂತ COVID-19 ಲಸಿಕೆಗಳನ್ನು ತಲುಪಿಸುವ ಜಾಗತಿಕ ಪ್ರಯತ್ನವಾಗಿ ನಾವು COVAXಗೆ ಇತರೆ ರಾಷ್ಟ್ರಗಳಿಗಿಂತ ಹೆಚ್ಚಿನ ಕೊಡುಗೆಯನ್ನು ನೀಡಲು ನಾವು ಬದ್ಧವಾಗಿದ್ದೇವೆ. ಮಿತ್ರರಾಷ್ಟ್ರ ಎನಿಸಿರುವ ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸಹಭಾಗಿತ್ವದ ಮೂಲಕ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಕಳೆದ ಜೂನ್ ತಿಂಗಳ ಯುರೋಪ್ ಪ್ರವಾಸದ ವೇಳೆ ಯುಎಸ್ 500 ದಶಲಕ್ಷ ಡೋಸ್ ಲಸಿಕೆಯನ್ನು ಖರೀದಿಸಿದ್ದು, ಈ ಪೈಕಿ 100 ದಶಲಕ್ಷ ಡೋಸ್ ಲಸಿಕೆಯನ್ನು ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯವನ್ನು ಹೊಂದಿರುವ ರಾಷ್ಟ್ರಗಳಿಗೆ ಉಚಿತವಾಗಿ ನೀಡಲಾಯಿತು. ಜೂನ್ ತಿಂಗಳಾಂತ್ಯದ ವೇಳೆಗೆ ಲಸಿಕೆ ಸರಬರಾಜು ಶುರು ಮಾಡಲಾಗಿತ್ತು.

110 ದಶಲಕ್ಷ ಡೋಸ್ ಲಸಿಕೆಯನ್ನು ರವಾನಿಸಿರುವ ಯುಎಸ್

110 ದಶಲಕ್ಷ ಡೋಸ್ ಲಸಿಕೆಯನ್ನು ರವಾನಿಸಿರುವ ಯುಎಸ್

"ಜಗತ್ತಿನ ಇತರೆ ರಾಷ್ಟ್ರಗಳಿಗೆ 80 ದಶಲಕ್ಷ ಡೋಸ್ ಕೊರೊನಾವೈರಸ್ ಲಸಿಕೆಯನ್ನು ಉಚಿತವಾಗಿ ಪೂರೈಸುವುದಾಗಿ ಯುೆಸ್ ಘೋಷಿಸಿತ್ತು. ಅದರ ಅಂಗವಾಗಿ ಈಗಾಗಲೇ 110 ದಶಲಕ್ಷ ಡೋಸ್ ಲಸಿಕೆಯನ್ನು ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿರುವ ಜಗತ್ತಿನ 65 ರಾಷ್ಟ್ರಗಳಿಗೆ ರವಾನಿಸಲಾಗಿದೆ," ಎಂದು ಬೈಡನ್ ಹೇಳಿದ್ದಾರೆ. ಕೇವಲ ಲಸಿಕೆಯಷ್ಟೇ ಅಲ್ಲ. ಕೊವಿಡ್-19 ಸೋಂಕು ನಿಯಂತ್ರಿಸುವ ಮತ್ತು ನಿರ್ವಹಣೆಗೆ ಅಗತ್ಯವಿರುವ ವೈದ್ಯಕೀಯ ಕಿಟ್ ಹಾಗೂ ಸೌಕರ್ಯಗಳನ್ನು ಭಾರತ ಮತ್ತು ಇತರೆ ರಾಷ್ಟ್ರಗಳಿಗೆ ಒದಗಿಸಿದ್ದೇವೆ.

ಅಮೆರಿಕಾದಿಂದ ಯಾವ ರಾಷ್ಟ್ರಕ್ಕೆ ಎಷ್ಟು ಡೋಸ್ ಲಸಿಕೆ?

ಅಮೆರಿಕಾದಿಂದ ಯಾವ ರಾಷ್ಟ್ರಕ್ಕೆ ಎಷ್ಟು ಡೋಸ್ ಲಸಿಕೆ?

* ಎರಡನೇ ಹಂತದಲ್ಲಿ ಘೋಷಿಸಿದ 55 ದಶಲಕ್ಷ ಡೋಸ್ ಕೊರೊನಾವೈರಸ್ ಲಸಿಕೆಯಲ್ಲಿ ಶೇ.75ರಷ್ಟು ಪ್ರಮಾಣವನ್ನು ಅಂದರೆ 41 ದಶಲಕ್ಷ ಡೋಸ್ ಅನ್ನು ಈ ರೀತಿ ಹಂಚಿಕೆ ಮಾಡಲಾಗುತ್ತಿದೆ.

* ಲ್ಯಾಟಿನ್ ಅಮೆರಿಕಾ, ಕೆರಿಬಿಯನ್ 14 ದಶಲಕ್ಷ ಡೋಸ್ ಲಸಿಕೆ: ಬ್ರೆಜಿಲ್, ಅರ್ಜೆಂಟೇನಿಯಾ, ಕೊಲಂಬಿಯಾ, ಪೆರು, ಪ್ಯಾರಾಗುವಾ, ಬೊಲಿವಿಯಾ, ಗುವಾಟೆಮಾಲಾ, ಇಎಲ್ ಸಲ್ವಾದೊರ್, ಹೊಂದುರಾಸ್, ಹೈಟಿ, ಡೊಮಿನಿಕನ್ ರಿಪಬ್ಲಿಕ್, ಪನಾಮಾ ಮತ್ತು ಕೊಸ್ಟಾ ರಿಕಾ

* ಏಷಿಯಾಗೆ 16 ದಶಲಕ್ಷ ಡೋಸ್ ಲಸಿಕೆ: ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ್, ಮಾಲ್ಡೀವ್ಸ್, ಭೂತಾನ್, ಫಿಲಿಫೈನ್ಸ್, ವಿಯೆಟ್ನಾಂ, ಇಂಡೋನೆಷ್ಯಾ, ಥೈಲ್ಯಾಂಡ್, ಮಲೇಶಿಯಾ, ಲಾವೊಸ್, ಪಪುವಾ, ತೈವಾನ್, ಕಾಂಬೊಡಿಯಾ ಮತ್ತು ಫೆಸಿಫಿಕ್ ದ್ವೀಪ

* ಆಫ್ರಿಕನ್ ಒಕ್ಕೂಟದ ಜೊತೆಗಿನ ಸಹಕಾರದೊಂದಿಗೆ ಆಫ್ರಿಕಾದ ಆಯ್ದ ರಾಷ್ಟ್ರಗಳಿಗೆ 10 ದಶಲಕ್ಷ ಡೋಸ್ ಲಸಿಕೆ

* 14 ದಶಲಕ್ಷ ಡೋಸ್ ಅಂದರೆ 55 ದಶಲಕ್ಷ ಡೋಸ್ ಲಸಿಕೆಯ ಶೇ.25ರಷ್ಟು ಪ್ರಮಾಣವನ್ನು ಈ ರಾಷ್ಟ್ರಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಅರ್ಜೆಂಟೇನಿಯಾ, ಹೈಟಿ ಹಾಗೂ ಇತರೆ ಕ್ಯಾರಿಕೊಮ್ ರಾಷ್ಟ್ರಗಳು, ಡೊಮಿನಿಕನ್ ರಿಪಬ್ಲಿಕನ್, ಕೊಸ್ಟಾ ರಿಕಾ, ಪನಾಮಾ, ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಪಾಕಿಸ್ತಾನ, ಫಿಲಿಫೈನ್ಸ್, ವಿಯೆಟ್ನಾಂ, ಇಂಡೋನೆಷ್ಯಾ, ದಕ್ಷಿಣ ಆಫ್ರಿಕಾ, ನೈಜಿರಿಯಾ, ಕೀನ್ಯಾ, ಘಾನ, ಕ್ಯಾಬೊ ವರ್ದೆ, ಈಜಿಪ್ಟ್, ಇರಾಕ್, ಯೆಮನ್, ಟುನಿಸಿಯಾ, ಓಮನ್, ಉಕ್ರೇನ್, ಕೊಸೊವೊ, ಮಾಲ್ಡೊವಾ

ದೇಶಕ್ಕೆ ಅಮೆರಿಕಾ ಎಷ್ಟು ಡೋಸ್ ಲಸಿಕೆ ನೀಡಿದೆ

ದೇಶಕ್ಕೆ ಅಮೆರಿಕಾ ಎಷ್ಟು ಡೋಸ್ ಲಸಿಕೆ ನೀಡಿದೆ

ಅಮೆರಿಕಾ ನೀಡುತ್ತಿರುವ ಕೊವ್ಯಾಕ್ಸ್ ಅಡಿಯಲ್ಲಿ ನೀಡುತ್ತಿರುವ ಲಸಿಕೆಯ ಪ್ರಮಾಣದ ಬಗ್ಗೆ ನಿಖರ ಮಾಹಿತಿಯಿಲ್ಲ. ಒಂದು ಅಂದಾಜಿನ ಪ್ರಕಾರ, ಎರಡನೇ ಅವಧಿಯಲ್ಲಿ ಹಂಚಿಕೆ ಮಾಡಲಾಗಿರುವ 5.50 ಕೋಟಿ ಡೋಸ್ ಲಸಿಕೆಯಲ್ಲಿ ಭಾರತಕ್ಕೆ 10 ರಿಂದ 20 ಲಕ್ಷ ಡೋಸ್ ಸಿಗುವುದಿಲ್ಲ. ಮೊದಲ ಹಂತದಲ್ಲಿ 2.50 ಕೋಟಿ ಡೋಸ್ ಪೈಕಿ ಭಾರತವು ಸುಮಾರು 20 ಲಕ್ಷದಿಂದ 30 ಲಕ್ಷ ಡೋಸ್ ಪಡೆಯುವ ನಿರೀಕ್ಷೆಯಿದೆ. ಅಮೆರಿಕಾ ಘೋಷಿಸಿರುವ ಕೊರೊನಾವೈರಸ್ ಲಸಿಕೆ ಹಂಚಿಕೆ ಯೋಜನೆ ಪ್ರಕಾರ ಭಾರತಕ್ಕೆ 30 ರಿಂದ 50 ಲಕ್ಷ ಡೋಸ್ ಲಸಿಕೆ ಸಿಗುವ ನಿರೀಕ್ಷೆಯಿದೆ. ದೇಶದಲ್ಲಿ ಒಂದೇ ದಿನ ಈ ಪ್ರಮಾಣಕ್ಕಿಂತ ಹೆಚ್ಚು ಜನರಿಗೆ ಲಸಿಕೆ ನೀಡಲಾಗುತ್ತಿದೆ.

ಯುಎಸ್ ಕಡೆಗೆ ದೃಷ್ಟಿ ನೆಟ್ಟಿರುವ ಇತರೆ ರಾಷ್ಟ್ರಗಳು

ಯುಎಸ್ ಕಡೆಗೆ ದೃಷ್ಟಿ ನೆಟ್ಟಿರುವ ಇತರೆ ರಾಷ್ಟ್ರಗಳು

"ವಿಶ್ವದ ಹಲವು ರಾಷ್ಟ್ರಗಳು ಕೊರೊನಾವೈರಸ್ ಹೊಗಲಾಡಿಸುವ ನಿಟ್ಟಿನಲ್ಲಿ ಯುಎಸ್ ಕಡೆಗೆ ದೃಷ್ಟಿ ನೆಟ್ಟಿವೆ. ಜಗತ್ತಿನ ರಾಷ್ಟ್ರಗಳು ಎರಡು ಮಾರ್ಗಗಳಲ್ಲಿ ನಾವು ಮುನ್ನೆಡೆಸುತ್ತೇವೆ ಎಂದು ಅವರು ಭಾವಿಸಿದ್ದಾರೆ. ಒಂದು ಮನೆಯಲ್ಲಿದ್ದುಕೊಂಡೇ ಕೊವಿಡ್-19 ಸೋಂಕನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತೋರಿಸುತ್ತೇವೆ. ಎರಡನೆಯದ್ದು, ಕೊರೊನಾವೈರಸ್ ನಿಯಂತ್ರಿಸುವುದಕ್ಕೆ ಅಗತ್ಯ ನೆರವು ನೀಡುತ್ತೇವೆ ಎಂದು ಎದುರು ನೋಡುತ್ತಿವೆ. 'ಲಸಿಕೆ ಪಡೆದ ಅಮೆರಿಕಾ, ಜಗತ್ತಿಗೆ ಲಸಿಕೆ ನೀಡಿದ ಅಮೆರಿಕಾ' ಎಂದ ಧ್ಯೇಯದ ಮೇಲೆ ಸೋಂಕು ನಿಯಂತ್ರಿಸಬೇಕಿದೆ," ಎಂದು ಯುಎಸ್ ಅಧ್ಯಕ್ಷಕ್ಷ ಜೋ ಬೈಡನ್ ಹೇಳಿದ್ದಾರೆ.

ಭಾರತದಲ್ಲಿ ಲಸಿಕೆ ಕಾರ್ಯಕ್ರಮಕ್ಕಾಗಿ 2.5 ಕೋಟಿ ಡಾಲರ್

ಭಾರತದಲ್ಲಿ ಲಸಿಕೆ ಕಾರ್ಯಕ್ರಮಕ್ಕಾಗಿ 2.5 ಕೋಟಿ ಡಾಲರ್

ಕಳೆದ ಜುಲೈ 27ರಂದು ಭಾರತ ಪ್ರವಾಸ ಕೈಗೊಂಡಿದ್ದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಕಾರ್ಯಕ್ರಮ ಬೆಂಬಲಿಸುವುದಕ್ಕಾಗಿ ಯುಎಸ್ ಸರ್ಕಾರದಿಂದ ಹೆಚ್ಚುವರಿ 2.5 ಕೋಟಿ ಡಾಲರ್ ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದ್ದರು. ದ್ವಿಪಕ್ಷೀಯ ಮಾತುಕತೆ ನಂತರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. "ಎರಡೂ ಡೋಸ್ ಲಸಿಕೆ ಪಡೆದ ವ್ಯಕ್ತಿಗಳ ಶೇಕಡಾವಾರು ಪ್ರಮಾಣದಲ್ಲಿ ದೇಶವು ಇನ್ನೂ ಎರಡು-ಅಂಕಿ ತಲುಪಿಲ್ಲ. ಆದ್ದರಿಂದ ಭಾರತದಾದ್ಯಂತ ಲಸಿಕೆ ಪೂರೈಕೆಯನ್ನು ಬಲಪಡಿಸುವ ಮೂಲಕ ಈ ಹಣವು ಜೀವ ಉಳಿಸಲು ಕಾರ್ಯಕ್ಕೆ ವಿನಿಯೋಗವಾಗಲಿದೆ," ಎಂದು ಬ್ಲಿಂಕೆನ್ ಹೇಳಿದ್ದರು.

ಕೊವಿಡ್-19 ಸೋಂಕಿತ ಪ್ರಕರಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕೊವಿಡ್-19 ಸೋಂಕಿತ ಪ್ರಕರಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದಲ್ಲಿ ಒಂದೇ ದಿನ 42,625 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 36,668 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 562 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,17,69,132ಕ್ಕೆ ಏರಿಕೆಯಾಗಿದೆ. ಈವರೆಗೂ 3,09,33,022 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 4,25,757 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 4,10,353 ಸಕ್ರಿಯ ಪ್ರಕರಣಗಳಿವೆ. ಈ ಹಂತದಲ್ಲಿ 48 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 62,53,741 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 48,52,86,570 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
US helps to India For produce Coronavirus vaccine To other Nations: President Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X