ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ ಅಮೆರಿಕದ 24MH-60R ಹೆಲಿಕಾಪ್ಟರ್

|
Google Oneindia Kannada News

ಭಾರತೀಯ ನೌಕಾಪಡೆಗೆ ಮೊದಲ ಎರಡು ಎಂಎಚ್‌-60 ಹೆಲಿಕಾಪ್ಟರ್‌ಗಳನ್ನು ಅಮೆರಿಕ ನೌಕಾಪಡೆ ಹಸ್ತಾಂತರಿಸಿದೆ.

ಸಮಾರಂಭದಲ್ಲಿ ಅಮೆರಿಕಾದಲ್ಲಿ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಭಾಗವಹಿಸಿದ್ದರು. ಎಲ್ಲಾ ಹವಾಮಾನಗಳಿಗೂ ಹೊಂದಿಕೊಳ್ಳುವ ಬಹು ಪಾತ್ರ ಹೆಲಿಕಾಪ್ಟರ್‌ಗಳ ಸೇರ್ಪಡೆಯು ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತದೆ ಎಂದು ಸಂಧು ಹೇಳಿದ್ದಾರೆ.

ಚೀನಾಕ್ಕೆ ಯಾವ ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ: ರಕ್ಷಣಾ ಸಚಿವಾಲಯಚೀನಾಕ್ಕೆ ಯಾವ ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ: ರಕ್ಷಣಾ ಸಚಿವಾಲಯ

ಮಲ್ಟಿ ರೋಲ್ ಹೆಲಿಕಾಪ್ಟರ್‌ ಎಂಆರ್ ಎಚ್ ಅನ್ನು ಭಾರತೀಯ ನೌಕಾಪಡೆಗೆ ಔಪಚಾರಿಕವಾಗಿ ಹಸ್ತಾಂತರಿಸುವ ಸಮಾರಂಭವನ್ನು ನೇವಲ್ ಏರ್ ಸ್ಟೇಷನ್ ನಾರ್ತ್ ಐಲ್ಯಾಂಡ್ ಅಥವಾ ಎನ್ಎಎಸ್ ನಾರ್ತ್ ಐಲ್ಯಾಂಡ್, ಸ್ಯಾನ್ ಡಿಯಾಗೋದಲ್ಲಿ ನಡೆಸಲಾಯಿತು.

US Hands Over First 2 Of 24 MH-60R Maritime Helicopters To Indian Navy

ಎಂಎಚ್ -60 ಆರ್ ಹೆಲಿಕಾಪ್ಟರ್‌ ಎಲ್ಲಾ ಹವಾಮಾನದಲ್ಲು ಚಲಾಯಿಸಬಲ್ಲ ಸಮುದ್ರ ಹೆಲಿಕಾಪ್ಟರ್ ಆಗಿದ್ದು, ಅತ್ಯಾಧುನಿಕ ಏವಿಯಾನಿಕ್ಸ್‌ನೊಂದಿಗೆ ಅನೇಕ ಕಾರ್ಯಾಚರಣೆಗಳನ್ನು ನಡೆಸಲು ವಿನ್ಯಾಸಗೊಳಿಸಲಾಗಿದೆ. ಈ ವಾಹಕವು ಭಾರತೀಯ ನೌಕಾಪಡೆಯ ಮೂರು ಆಯಾಮದ ಸಾಮರ್ಥ್ಯಗಳನ್ನು ಇನ್ನಷ್ಟು ಹೆಚ್ಚಳ ಮಾಡಲಿದೆ.

ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಭೇಟಿಗೆ ವಾರಗಳ ಮುಂಚೆ 2020 ರ ಫೆಬ್ರವರಿಯಲ್ಲಿ ಭಾರತ ಸರ್ಕಾರದ ಸಚಿವ ಸಂಪುಟ ಹೆಲಿಕಾಪ್ಟರ್ ಖರೀದಿಗೆ ಅನುಮತಿ ನೀಡಿತ್ತು.

ಹೆಲಿಕಾಪ್ಟರ್ ಗಳ ಸೇರ್ಪಡೆ ಭಾರತ-ಅಮೆರಿಕ ರಕ್ಷಣಾ ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ಸಂಧು ಟ್ವೀಟ್ ಮಾಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 20 ಬಿಲಿಯನ್ ಡಾಲರ್‌ಗಳಿಗೆ ವಿಸ್ತರಿಸಿದೆ ಎಂದು ಅವರು ಗಮನಿಸಿದ್ದಾರೆ.

ರಕ್ಷಣಾ ವ್ಯಾಪಾರವನ್ನು ಮೀರಿ, ಭಾರತ ಮತ್ತು ಯುಎಸ್ ಬೇರೆ ಬೇರೆ ಕ್ಷೇತ್ರಗಳಲ್ಲಿ ಒಟ್ಟಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ವಿದೇಶಿ ಹೂಡಿಕೆದಾರರಿಗೆ ಹೊಸ ಅವಕಾಶಗಳನ್ನು ತೆರೆದಿಟ್ಟಿರುವ ಇತ್ತೀಚಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತ ಕೈಗೊಂಡಿರುವ ಸುಧಾರಣಾ ಕ್ರಮಗಳನ್ನೂ ಅವರು ಎತ್ತಿ ತೋರಿಸಿದರು.

English summary
The Indian Navy has received two MH-60R multi-role helicopters from the US, in a boost to its combat capabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X