• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ರಾಯಭಾರ ಕಚೇರಿಯಿಂದ ವಿಶ್ವ ಭೂಮಿ ದಿನಕ್ಕಾಗಿ ವಿಡಿಯೋ ಸ್ಪರ್ಧೆ

By ಒನ್ಇಂಡಿಯಾ ಪ್ರತಿನಿಧಿ
|

ಬೆಂಗಳೂರು, ಏಪ್ರಿಲ್ 24: ವಿಶ್ವ ಭೂಮಿ ದಿನದ ಅಂಗವಾಗಿ ಚೆನ್ನೈನಲ್ಲಿರುವ ರಾಯಭಾರ ಕಚೇರಿಯು ವಿಡಿಯೋ ಸ್ಪರ್ಧೆ ಆಯೋಜಿಸಿದೆ. ತಮಿಳುನಾಡು, ಪುದುಚೆರಿ, ಕೇರಳ, ಕರ್ನಾಟಕ ಮತ್ತು ಅಂಡಮಾನ್-ನಿಕೋಬಾರ್ ನ ಹದಿನೆಂಟು ವರ್ಷ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಪರಿಸರ ಜಾಗೃತಿ ಮೂಡಿಸುವ, ಪ್ರೇರಣೆ ನೀಡುವ 60ರಿಂದ 90 ಸೆಕೆಂಡ್ ಗಳ ಉತ್ತಮ ಗುಣಮಟ್ಟದ ವಿಡಿಯೋ ಸ್ಟೋರಿಗಳನ್ನು ಆಹ್ವಾನಿಸಲಾಗಿದೆ. ನವೀಕೃತ ಅಥವಾ ಪರ್ಯಾಯ ಇಂಧನ, ಪರಿಸರ ಸಾಕ್ಷರತೆ, ಹಸಿರು, ನೀರು ಮತ್ತು ನೀರಿನ ಸೆಲೆಗಳು ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ವಿಷಯಗಳನ್ನು ಮುಖ್ಯವಾಗಿಟ್ಟುಕೊಂಡು ವಿಡಿಯೋಗಳನ್ನು ಮಾಡಿರಬೇಕು.[ಸುಪ್ರ ಸುಂದರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ]

ಇಮೇಲ್ ಮೂಲಕ ವಿಡಿಯೋಗಳನ್ನು ಸಲ್ಲಿಸಬೇಕು. ಅಂದಹಾಗೆ ಏಪ್ರಿಲ್ 25, 2017ರ ಸಂಜೆ 5 ಗಂಟೆಯೊಳಗೆ ವಿಡಿಯೋಗಳನ್ನು ಸಲ್ಲಿಸಬೇಕು. ಇ ಮೇಲ್ ವಿಳಾಸ amcongenchennaicontest@gmail.com. ಈ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದಕ್ಕೆ ಈ ಫೇಸ್ ಬುಕ್ ಪೇಜ್ ನ ನೋಡಿ.

ಮೊದಲ ಮೂರು ಅತ್ಯುತ್ತಮ ವಿಡಿಯೋ ಎಂದು ತೀರ್ಪುಗಾರರು ಆರಿಸಿದ್ದಕ್ಕೆ ಅತ್ಯುತ್ತಮ ಬಹುಮಾನಗಳನ್ನು ನೀಡಲಾಗುವುದು. ಅಂತಿಮವಾಗಿ ಆಯ್ಕೆಯಾದ ವಿಡಿಯೋಗಳನ್ನು ರಾಯಭಾರ ಕಚೇರಿಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸಲಾಗುವುದು. ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In commemoration of Earth Day 2017, the U.S. Consulate General Chennai has launched “Care, Conserve, Capture,” a video contest for residents of Tamil Nadu, Puducherry, Kerala, Karnataka, and Andaman and Nicobar Islands aged 18 years and above.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more