ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ ವೇಳೆಗೆ ಭಾರತದಲ್ಲಿ ಮತ್ತೊಂದು ಲಸಿಕೆ ಬಿಡುಗಡೆ ಸಾಧ್ಯತೆ

|
Google Oneindia Kannada News

ನವದೆಹಲಿ, ಜೂನ್ 17: ಇದೇ ಸೆಪ್ಟೆಂಬರ್‌ ವೇಳೆಗೆ ಅಮೆರಿಕ ಮೂಲದ ನೋವಾವ್ಯಾಕ್ಸ್‌ ಕೊರೊನಾ ಲಸಿಕೆಯ ಭಾರತೀಯ ಆವೃತ್ತಿಯನ್ನು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪರಿಚಯಿಸುವ ನಿರೀಕ್ಷೆಯಿದ್ದು, ಜುಲೈನಲ್ಲಿಯೇ ಮಕ್ಕಳ ಮೇಲೆ ಈ ಲಸಿಕೆಯ ಪ್ರಯೋಗ ಆರಂಭಿಸುವುದಾಗಿ ಮೂಲಗಳು ತಿಳಿಸಿವೆ.

ನೋವಾವ್ಯಾಕ್ಸ್‌ ಲಸಿಕೆಯ ಭಾರತೀಯ ಆವೃತ್ತಿ "ಕೋವಾವ್ಯಾಕ್ಸ್‌" ಲಸಿಕೆ ತಯಾರಿಯಲ್ಲಿ ಸೆರಂ ಇನ್‌ಸ್ಟಿಟ್ಯೂಟ್ ತೊಡಗಿಕೊಂಡಿದೆ. ಇದೇ ಸೆಪ್ಟೆಂಬರ್‌ ವೇಳೆಗೆ ಲಸಿಕೆ ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.

ಕೊರೊನಾ ವಿರುದ್ಧ ನೋವಾವ್ಯಾಕ್ಸ್ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ಏನು ಹೇಳುತ್ತೆ? ಕೊರೊನಾ ವಿರುದ್ಧ ನೋವಾವ್ಯಾಕ್ಸ್ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ಏನು ಹೇಳುತ್ತೆ?

ಕಳೆದ ವಾರವಷ್ಟೆ, ನೋವಾವ್ಯಾಕ್ಸ್‌ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆದಿದ್ದು, ಕೊರೊನಾ ಸೋಂಕಿನ ವಿರುದ್ಧ ಈ ಲಸಿಕೆ 90.4% ಪರಿಣಾಮಕಾರಿಯಾಗಿರುವುದಾಗಿ ಸಂಸ್ಥೆ ಹೇಳಿಕೆ ನೀಡಿತ್ತು.

US Based Novavax Covid Vaccine To Launch In India By September

"ಕೋವಿಡ್ 19 ವಿರುದ್ಧದ ನೋವಾವ್ಯಾಕ್ಸ್ ಲಸಿಕೆಯ ದಕ್ಷತೆಯ ದತ್ತಾಂಶವು ಭರವಸೆ ಮೂಡಿಸಿದೆ ಹಾಗೂ ಅದರ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದನ್ನು ಭಾರತದಲ್ಲಿಯೂ ಉತ್ಪಾದನೆ ಮಾಡಲಾಗುವುದು," ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ತಿಳಿಸಿದ್ದರು.

ನೋವಾವ್ಯಾಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ NVX-CoV2373 ಲಸಿಕೆ ಕುರಿತು ಅಧ್ಯಯನ ನಡೆದಿದ್ದು, ಮಧ್ಯಮ ಹಾಗೂ ತೀವ್ರ ಸ್ವರೂಪದ ಸೋಂಕಿನ ವಿರುದ್ಧ ಲಸಿಕೆಯು 100% ಪರಿಣಾಮಕಾರಿಯಾಗಿದೆ. ಒಟ್ಟಾರೆಯಾಗಿ ಸೋಂಕಿನ ವಿರುದ್ಧ 90.4% ಪರಿಣಾಮಕಾರಿ ಎಂಬುದು ಸಾಬೀತಾಗಿರುವುದಾಗಿ ಸಂಸ್ಥೆ ಹೇಳಿಕೆ ನೀಡಿತ್ತು.

"ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಅಗತ್ಯಗಳನ್ನು ಆದ್ಯತೆಯಾಗಿಸಿಕೊಂಡು ಲಸಿಕೆ ಅಭಿವೃದ್ಧಿಯಲ್ಲಿ ನೋವಾವ್ಯಾಕ್ಸ್ ಮುಂದಡಿ ಇಟ್ಟಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆಗಳಿಗೆ ಉಂಟಾಗಿರುವ ಅಭಾವವನ್ನು ಅರ್ಥೈಸಿಕೊಂಡು ಲಸಿಕೆಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ," ಎಂದು ನೋವಾವ್ಯಾಕ್ಸ್ ಸಂಸ್ಥೆಯ ಅಧ್ಯಕ್ಷ ಸ್ಟಾನ್ಲಿ ಸಿ ಎರ್ಕ್ ತಿಳಿಸಿದ್ದರು. ಅಮೆರಿಕ ಹಾಗೂ ಯುರೋಪಿಯನ್ ದೇಶಗಳಲ್ಲಿ ಈಗಾಗಲೇ ಈ ಲಸಿಕೆಯನ್ನು ನೀಡಲಾಗುತ್ತಿದೆ.

ಭಾರತದಲ್ಲಿ ಮಕ್ಕಳಿಗೆ ಈ ಲಸಿಕೆ ನೀಡುವ ಸಂಬಂಧ ಜುಲೈ ತಿಂಗಳಿನಿಂದ ಪ್ರಯೋಗ ನಡೆಸಲಾಗುವುದಾಗಿ ತಿಳಿದುಬಂದಿದೆ.

English summary
Serum institute of india to introduce US firm Novavax's indian version of covid vaccine "Covavax" by this september says sources,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X