ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ 2.5 ಕೋಟಿ ಡಾಲರ್ ನೀಡಿದ ಅಮೆರಿಕಾ!

|
Google Oneindia Kannada News

ನವದೆಹಲಿ, ಜುಲೈ 28: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಬೆಂಬಲಿಸುವುದಕ್ಕಾಗಿ ಯುಎಸ್ ಸರ್ಕಾರದಿಂದ ಹೆಚ್ಚುವರಿ 2.5 ಕೋಟಿ ಡಾಲರ್ ಆರ್ಥಿಕ ನೆರವು ನೀಡಲಾಗುವುದು ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಬುಧವಾರ ಘೋಷಿಸಿದ್ದಾರೆ.

ದ್ವಿಪಕ್ಷೀಯ ಮಾತುಕತೆ ನಂತರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. "ಎರಡೂ ಡೋಸ್ ಲಸಿಕೆ ಪಡೆದ ವ್ಯಕ್ತಿಗಳ ಶೇಕಡಾವಾರು ಪ್ರಮಾಣದಲ್ಲಿ ದೇಶವು ಇನ್ನೂ ಎರಡು-ಅಂಕಿ ತಲುಪಿಲ್ಲ. ಆದ್ದರಿಂದ ಭಾರತದಾದ್ಯಂತ ಲಸಿಕೆ ಪೂರೈಕೆಯನ್ನು ಬಲಪಡಿಸುವ ಮೂಲಕ ಈ ಹಣವು ಜೀವ ಉಳಿಸಲು ಕಾರ್ಯಕ್ಕೆ ವಿನಿಯೋಗವಾಗಲಿದೆ," ಎಂದು ಬ್ಲಿಂಕೆನ್ ಹೇಳಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಉಪಸ್ಥಿತರಿದ್ದರು. "ಭಾರತದಲ್ಲೇ ಕೊರೊನಾವೈರಸ್ ಲಸಿಕೆಯನ್ನು ಉತ್ಪಾದಿಸುವುದಕ್ಕಾಗಿ ಅಮೆರಿಕಾದಿಂದ ಕಚ್ಚಾವಸ್ತುವನ್ನು ಪೂರೈಸಲು ಅವಕಾಶ ಕಲ್ಪಿಸಿದ ಅಧ್ಯಕ್ಷ ಜೋ ಬೈಡನ್ ಅವರಿಗೆ ಧನ್ಯವಾದ ಅರ್ಪಿಸಿದರು.

US announces additional 2.5 Crore Dollars to support Indias Coronavirus vaccination program

20 ಕೋಟಿ ಡಾಲರ್ ಅನುದಾನ ನೀಡಿದ ಯುಎಸ್ ಏಜೆನ್ಸಿ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ರೋಗದ ವಿರುದ್ಧ ಹೋರಾಡುವುದಕ್ಕೆ ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳಿಗೆ ಯುಎಸ್ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ಮೂಲಕ ಯುಎಸ್ ಸರ್ಕಾರವು 20 ಕೋಟಿ ಡಾಲರ್ ಹಣವನ್ನು ಅನುದಾನವಾಗಿ ನೀಡಿದೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ರಾಷ್ಟ್ರಗಳನ್ನು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಮಿತ್ರರಾಷ್ಟ್ರಗಳಿಗೆ ಲಸಿಕೆಯ ಉಡುಗೊರೆ ನೀಡಿದ ಯುಎಸ್:

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತನ್ನ ನೆರೆ ಹಾಗೂ ಮಿತ್ರರಾಷ್ಟ್ರಗಳಿಗೆ ನೆರವು ನೀಡುವುದಕ್ಕಾಗಿ 8 ಕೋಟಿ ಡೋಸ್ ಕೊರೊನಾವೈರಸ್ ಲಸಿಕೆಯನ್ನು ನೀಡುವುದಾಗಿ ಘೋಷಿಸಿತ್ತು. 8 ಕೋಟಿ ಡೋಸ್ ಲಸಿಕೆ ಯೋಜನೆಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ 2.50 ಕೋಟಿ ಡೋಸ್ ಲಸಿಕೆಯನ್ನು ರವಾನಿಸಲಾಗಿದೆ. ಎರಡು ವಾರಗಳ ನಂತರದಲ್ಲಿ ಎರಡನೇ ಹಂತದಲ್ಲಿ 5.50 ಕೋಟಿ ಡೋಸ್ ಲಸಿಕೆ ರವಾನಿಸುವ ಬಗ್ಗೆ ಅಮೆರಿಕಾ ಸ್ಪಷ್ಟಪಡಿಸಿದೆ. 5.50 ಕೋಟಿ ಡೋಸ್ ಲಸಿಕೆ ಪೈಕಿ ಕೊವ್ಯಾಕ್ಸ್ ಸೌಲಭ್ಯದ ಅಡಿಯಲ್ಲಿ ಏಷಿಯಾಗೆ 1.60 ಕೋಟಿ ಡೋಸ್ ಕಳುಹಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಿಂದ 1.60 ಕೋಟಿ ಡೋಸ್ ಲಸಿಕೆ ಪಡೆದುಕೊಂಡಿರುವ 18 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಕೂಡಾ ಸೇರಿದೆ.

ಭಾರತಕ್ಕೆ ಎಷ್ಟು ಡೋಸ್ ಕೊರೊನಾವೈರಸ್ ಲಸಿಕೆ?

ಅಮೆರಿಕಾ ನೀಡುತ್ತಿರುವ ಕೊವ್ಯಾಕ್ಸ್ ಲಸಿಕೆಯಲ್ಲಿ ಭಾರತಕ್ಕೆ ಎಷ್ಟು ಪ್ರಮಾಣ ಸಿಗಲಿದೆ ಎನ್ನುವುದು ನಿಖರವಾಗಿಲ್ಲ. ಒಂದು ಅಂದಾಜಿನ ಪ್ರಕಾರ, ಎರಡನೇ ಅವಧಿಯಲ್ಲಿ ಹಂಚಿಕೆ ಮಾಡಲಾಗಿರುವ 5.50 ಕೋಟಿ ಡೋಸ್ ಲಸಿಕೆಯಲ್ಲಿ ಭಾರತಕ್ಕೆ 10 ರಿಂದ 20 ಲಕ್ಷ ಡೋಸ್ ಸಿಗುವುದಿಲ್ಲ. ಮೊದಲ ಹಂತದಲ್ಲಿ 2.50 ಕೋಟಿ ಡೋಸ್ ಪೈಕಿ ಭಾರತವು ಸುಮಾರು 20 ಲಕ್ಷದಿಂದ 30 ಲಕ್ಷ ಡೋಸ್ ಪಡೆಯುವ ನಿರೀಕ್ಷೆಯಿದೆ. ಅಮೆರಿಕಾ ಘೋಷಿಸಿರುವ ಕೊರೊನಾವೈರಸ್ ಲಸಿಕೆ ಹಂಚಿಕೆ ಯೋಜನೆ ಪ್ರಕಾರ ಭಾರತಕ್ಕೆ 30 ರಿಂದ 50 ಲಕ್ಷ ಡೋಸ್ ಲಸಿಕೆ ಸಿಗುವ ನಿರೀಕ್ಷೆಯಿದೆ. ದೇಶದಲ್ಲಿ ಒಂದೇ ದಿನ ಈ ಪ್ರಮಾಣಕ್ಕಿಂತ ಹೆಚ್ಚು ಜನರಿಗೆ ಲಸಿಕೆ ನೀಡಲಾಗುತ್ತಿದೆ.

ಕೊವಿಡ್-19 ಲಸಿಕೆ ಹಂಚಿಕೆ ಬಗ್ಗೆ ಶ್ವೇತ ಭವನ ಮಾಹಿತಿ:

ಶ್ವೇತ ಭವನ ನೀಡಿರುವ ಮಾಹಿತಿ ಪ್ರಕಾರ, ಕೊರೊನಾವೈರಸ್ ಲಸಿಕೆ ಹಂಚಿಕೆಗೆ ಈ ರೀತಿಯಾಗಿ ಯೋಜನೆಯನ್ನು ರೂಪಿಸಲಾಗಿದೆ. ಕೊವಿಡ್-19 ಲಸಿಕೆ ಹಂಚಿಕೆ ಮಾನದಂಡ ಹಾಗೂ ಪ್ರಮಾಣದ ಕುರಿತು ಉಲ್ಲೇಖಿಸಿರುವ ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಯಾವ ರಾಷ್ಟ್ರಗಳಲ್ಲಿ ಎಷ್ಟು ಪ್ರಮಾಣದ ಲಸಿಕೆ?:

* ಎರಡನೇ ಹಂತದಲ್ಲಿ ಘೋಷಿಸಿದ 55 ದಶಲಕ್ಷ ಡೋಸ್ ಕೊರೊನಾವೈರಸ್ ಲಸಿಕೆಯಲ್ಲಿ ಶೇ.75ರಷ್ಟು ಪ್ರಮಾಣವನ್ನು ಅಂದರೆ 41 ದಶಲಕ್ಷ ಡೋಸ್ ಅನ್ನು ಈ ರೀತಿ ಹಂಚಿಕೆ ಮಾಡಲಾಗುತ್ತಿದೆ.

* ಲ್ಯಾಟಿನ್ ಅಮೆರಿಕಾ, ಕೆರಿಬಿಯನ್ 14 ದಶಲಕ್ಷ ಡೋಸ್ ಲಸಿಕೆ: ಬ್ರೆಜಿಲ್, ಅರ್ಜೆಂಟೇನಿಯಾ, ಕೊಲಂಬಿಯಾ, ಪೆರು, ಪ್ಯಾರಾಗುವಾ, ಬೊಲಿವಿಯಾ, ಗುವಾಟೆಮಾಲಾ, ಇಎಲ್ ಸಲ್ವಾದೊರ್, ಹೊಂದುರಾಸ್, ಹೈಟಿ, ಡೊಮಿನಿಕನ್ ರಿಪಬ್ಲಿಕ್, ಪನಾಮಾ ಮತ್ತು ಕೊಸ್ಟಾ ರಿಕಾ

* ಏಷಿಯಾಗೆ 16 ದಶಲಕ್ಷ ಡೋಸ್ ಲಸಿಕೆ: ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ್, ಮಾಲ್ಡೀವ್ಸ್, ಭೂತಾನ್, ಫಿಲಿಫೈನ್ಸ್, ವಿಯೆಟ್ನಾಂ, ಇಂಡೋನೆಷ್ಯಾ, ಥೈಲ್ಯಾಂಡ್, ಮಲೇಶಿಯಾ, ಲಾವೊಸ್, ಪಪುವಾ, ತೈವಾನ್, ಕಾಂಬೊಡಿಯಾ ಮತ್ತು ಫೆಸಿಫಿಕ್ ದ್ವೀಪ

* ಆಫ್ರಿಕನ್ ಒಕ್ಕೂಟದ ಜೊತೆಗಿನ ಸಹಕಾರದೊಂದಿಗೆ ಆಫ್ರಿಕಾದ ಆಯ್ದ ರಾಷ್ಟ್ರಗಳಿಗೆ 10 ದಶಲಕ್ಷ ಡೋಸ್ ಲಸಿಕೆ

* 14 ದಶಲಕ್ಷ ಡೋಸ್ ಅಂದರೆ 55 ದಶಲಕ್ಷ ಡೋಸ್ ಲಸಿಕೆಯ ಶೇ.25ರಷ್ಟು ಪ್ರಮಾಣವನ್ನು ಈ ರಾಷ್ಟ್ರಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಅರ್ಜೆಂಟೇನಿಯಾ, ಹೈಟಿ ಹಾಗೂ ಇತರೆ ಕ್ಯಾರಿಕೊಮ್ ರಾಷ್ಟ್ರಗಳು, ಡೊಮಿನಿಕನ್ ರಿಪಬ್ಲಿಕನ್, ಕೊಸ್ಟಾ ರಿಕಾ, ಪನಾಮಾ, ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಪಾಕಿಸ್ತಾನ, ಫಿಲಿಫೈನ್ಸ್, ವಿಯೆಟ್ನಾಂ, ಇಂಡೋನೆಷ್ಯಾ, ದಕ್ಷಿಣ ಆಫ್ರಿಕಾ, ನೈಜಿರಿಯಾ, ಕೀನ್ಯಾ, ಘಾನ, ಕ್ಯಾಬೊ ವರ್ದೆ, ಈಜಿಪ್ಟ್, ಇರಾಕ್, ಯೆಮನ್, ಟುನಿಸಿಯಾ, ಓಮನ್, ಉಕ್ರೇನ್, ಕೊಸೊವೊ, ಮಾಲ್ಡೊವಾ.

English summary
US announces additional 2.5 Crore Dollars to support India's Coronavirus vaccination program
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X