ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯು.ಎಸ್. ಏರ್ಫೋರ್ಸ್ ಬ್ಯಾಂಡ್ ಆಫ್‌ ದಿ ಪೆಸಿಫಿಕ್ ಜೊತೆ ಗಿರಿಧರ್ ಉಡುಪ ಸಹಯೋಗ

|
Google Oneindia Kannada News

ಬೆಂಗಳೂರು, ಮಾರ್ಚ್ 17: ಹವಾಯಿ ಮೂಲದ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ಆಫ್ ದಿ ಪೆಸಿಫಿಕ್ ಭಾರತದ ಅತ್ಯಂತ ಪ್ರಾಚೀನ ತಾಳವಾದ್ಯಗಳಲ್ಲಿ ಒಂದಾದ ಘಟಂ ನುಡಿಸುವ ಖ್ಯಾತ ಭಾರತೀಯ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ ಅವರ ಸಹಯೋಗದಲ್ಲಿ ಮಾರ್ಚ್ 12 ರಂದು ಅವರ ಸಂಗೀತ ವೀಡಿಯೋ ಬಿಡುಗಡೆ ಮಾಡಿತು. ಈ ಸಹಯೋಗವು ಬ್ಯಾಂಡ್‌ನ ಏರೋ ಇಂಡಿಯಾ 2021 ಅನ್ನು ಬೆಂಬಲಿಸುವ ಬದ್ಧತೆಯ ದ್ಯೋತಕವಾಗಿದೆ. ಅಮೆರಿಕ-ಭಾರತ ಪ್ರಮುಖ ರಕ್ಷಣಾ ಸಹಭಾಗಿತ್ವ ಮತ್ತು ಎರಡೂ ದೇಶಗಳ ಜನರ ನಡುವಿನ ಸಂಬಂಧವನ್ನು ವರ್ಧಿಸುವ ಉದ್ದೇಶ ಹೊಂದಿದೆ.

ಯು.ಎಸ್. ಏರ್ ಫೋರ್ಸ್ ಬ್ಯಾಂಡ್ ಆಫ್ ಪೆಸಿಫಿಕ್ ಅನ್ನು ಪ್ರತಿನಿಧಿಸುವ ಸ್ಯಾಕ್ಸೋಫೋನ್ ವಾದಕ ಸ್ಟಾಫ್ ಸಾರ್ಜೆಂಟ್ ಲೂಯಿ ರೋಸಾ ಮೂಲ ಗೀತೆ "ಓಪನ್ ಕ್ಲಸ್ಟರ್ಸ್"ಅನ್ನು ಸಂಯೋಜಿಸಿದ್ದಾರೆ. ಇದು ಭಾರತೀಯ ಮತ್ತು ಪೋರ್ಟೊ ರಿಕನ್ ಸಂಸ್ಕೃತಿ ಹಾಗೂ ಲಯ ಹಿನ್ನೆಲೆಯ ಇಬ್ಬರು ಸಂಗೀತ ದಿಗ್ಗಜರ ಸಮ್ಮಿಲನವಾಗಿದೆ. ಈ ಸಂಯೋಜನೆಯಲ್ಲಿ ಗಿಟಾರ್‌ನಲ್ಲಿ ಸೀನಿಯರ್ ಏರ್‌ಮ್ಯಾನ್ ಗೈ ಜೇಮ್ಸ್, ಬಾಸ್‌ನಲ್ಲಿ ಸ್ಟಾಫ್ ಸಾರ್ಜೆಂಟ್ ಆಂಡ್ರ್ಯೂ ಡೆಟ್ರಾ ಮತ್ತು ತಾಳವಾದ್ಯದಲ್ಲಿ ಟೆಕ್ನಿಕಲ್ ಸಾರ್ಜೆಂಟ್ ವಿಲ್ಫ್ರೆಡೋ ಕ್ರೂಜ್ ಕೂಡ ತಮ್ಮ ಸಂಗೀತ ಧಾರೆ ಎರೆದಿದ್ದಾರೆ.

ಪೆಸಿಫಿಕ್ ಪ್ರಚಾರ ವಿಭಾಗದ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ನ ಮುಖ್ಯ ತಾಂತ್ರಿಕ ಸಾರ್ಜೆಂಟ್ ವಿಲ್ಫ್ರೆಡೋ ಕ್ರೂಜ್: "ಈ ಸಂಗೀತ ಸೆಲೆಯನ್ನು ಸೃಷ್ಟಿ ಮಾಡಲು ನಮಗೆ ಸಾಧ್ಯವಾದುದಕ್ಕೆ ನಮಗೆ ಹೆಮ್ಮೆ ಇದೆ. ವಿಶ್ವಾದ್ಯಂತ ನಮ್ಮ ಎಲ್ಲ ವೀಕ್ಷಕರಿಗೆ ಈ ಸಂಗೀತ ಸುಧೆಯನ್ನು ಉಣಬಡಿಸಲು ಸಂತಸವಾಗಿದೆ. ಸಾಂಕ್ರಾಮಿಕ ರೋಗದ ಕಾರಣವಾಗಿ ಏರೋ ಇಂಡಿಯಾದ ಸಮಯದಲ್ಲಿ ಲೈವ್ ಪ್ರದರ್ಶನ ನೀಡಲು ಭಾರತದಲ್ಲಿರಲು ನಮಗೆ ಅವಕಾಶ ಸಿಗಲಿಲ್ಲ, ಆದರೂ ಸಂಗೀತವು ದೂರ ಅಥವಾ ಗಡಿಗಳನ್ನು ಲೆಕ್ಕಿಸದೆ ಎಲ್ಲರನ್ನೂ ಒಂದುಗೂಡಿಸುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದ ಮೂಲಕ ನಮ್ಮ ಸ್ನೇಹಿತರು ಮತ್ತು ಸಹಭಾಗಿಗಳೊಂದಿಗೆ ಹೊಂದಿರುವ ಬಾಂಧವ್ಯವನ್ನು ಬಲಪಡಿಸಲು ನಾವು ಸಂಗೀತದ ಶಕ್ತಿಯನ್ನು ಬಳಸುತ್ತಿದ್ದೇವೆ. ಈ ವರ್ಚುವಲ್ ಪ್ರದರ್ಶನವನ್ನು ಸೃಷ್ಟಿಸುವಾಗ ನಮಗೆ ಆದಷ್ಟೇ ಸಂತೋಷ ಇದನ್ನು ಕೇಳುವ ನಿಮಗೂ ಆಗುತ್ತದೆ ಎಂದು ನಂಬಿದ್ದೇವೆ! " ಎಂದು ಹೇಳಿದರು.

US Air Force Band Of Pacific Collaborates With Renowned Ghatam Artist Giridhar Udupa

ಅಂತರ-ಸಹಯೋಗದ ಕುರಿತು ಮಾತನಾಡುತ್ತಾ, ಭಾರತೀಯ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ, "ಅಮೆರಿಕದ ವಾಯುಪಡೆಯ ಬ್ಯಾಂಡ್‌ನ ಉತ್ಕೃಷ್ಟ ಸಂಗೀತಗಾರರೊಂದಿಗೆ ಹೊಸದಾಗಿ ಸಂಯೋಜಿಸಲಾದ ಟ್ರ್ಯಾಕ್ ಬಗ್ಗೆ ನನಗೆ ಬಹಳ ಸಂತೋಷ ಇದೆ. ಈ ಸಂಯೋಜನೆಯು ವಿಶ್ವ ಸಂಗೀತದ ಚೌಕಟ್ಟಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. " ಎಂದರು.

ಯುಎಸ್ಎಎಫ್ ಬ್ಯಾಂಡ್ ಆಫ್ ದಿ ಪೆಸಿಫಿಕ್: ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ಆಫ್ ದಿ ಪೆಸಿಫಿಕ್ ವೃತ್ತಿಪರ ಯು.ಎಸ್. ವಾಯುಪಡೆಯ ಸಂಗೀತಗಾರರ ತಂಡ ಆಗಿದ್ದು ಅದು ವೈವಿಧ್ಯಮಯ ಸಂಗೀತ ಕೃತಿಗಳನ್ನು ಸೃಷ್ಟಿಸಿ ನಿರ್ವಹಿಸುತ್ತದೆ. ಸಂಗೀತದ ಹೊರತಾಗಿ ಪಶ್ಚಿಮ ಪೆಸಿಫಿಕ್ ಪ್ರದೇಶದಾದ್ಯಂತ ಸಾಮುದಾಯಿಕ ಸಂಬಂಧಗಳು ಮತ್ತು ಮಿಲಿಟರಿ ಕಾರ್ಯಗಳ ಹೊಣೆ ಕೂಡ ಈ ತಂಡದ ಮೇಲಿದೆ. ಈ ತಂಡಗಳು ವಾರ್ಷಿಕ 200 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ದೇಶಭಕ್ತಿಯ ಭಾವನೆ ಬೆಳೆಸುವುದಕ್ಕೆ ಸಹಕಾರಿಯಾಗುತ್ತವೆ. ಪೆಸಿಫಿಕ್ ವಾಯುಪಡೆ ಮತ್ತು ಯು.ಎಸ್. ವಾಯುಪಡೆಯ ಪರವಾಗಿ ಇಂಡೋ-ಪೆಸಿಫಿಕ್ ಪ್ರದೇಶದಾದ್ಯಂತ ಸಾಂಸ್ಕೃತಿಕ ಸಂಬಂಧಗಳನ್ನು ಬಲವರ್ಧಿಸುತ್ತವೆ.

ಘಟಮ್ ಗಿರಿಧರ್ ಉಡುಪ: ಗಿರಿಧರ್ ಉಡುಪ ಬೆಂಗಳೂರು ಮೂಲದ ಘಟಂ (ತಾಳವಾದ್ಯ) ಕಲಾವಿದರು. ಇವರ ಮೂರು ದಶಕಗಳ ಸಂಗೀತದ ನಂಟು ವಿಶ್ವದಾದ್ಯಂತ ಪ್ರಖ್ಯಾತ ಕಲಾವಿದರ ಸಹಯೋಗದೊಂದಿಗೆ, 50 ಕ್ಕೂ ಹೆಚ್ಚು ದೇಶಗಳಲ್ಲಿ ಸಂಗೀತ ಕಛೇರಿ ನಡೆಸಿದ ಖ್ಯಾತಿ ಮತ್ತು ಹಲವಾರು ಪುರಸ್ಕಾರಗಳು ಹಾಗೂ ಪ್ರಶಸ್ತಿಗಳಿಂದ ಸಮೃದ್ಧವಾಗಿದೆ, ಉಡುಪ ನಿಜವಾದ ಜಾಗತಿಕ ಆದರ್ಶ ವ್ಯಕ್ತಿಯಾಗಿದ್ದು ವಿಶ್ವ ಸಂಗೀತದ ರಾಯಭಾರಿಯಾಗಿದ್ದಾರೆ. ಅವರು ನ್ಯೂಯಾರ್ಕ್ ನಗರದ ಕಾರ್ನೆಗೀ ಹಾಲ್, ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಜಾನ್ ಎಫ್. ಕೆನಡಿ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್, ಮತ್ತು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ವೋರ್ಥಾಮ್ ಸೆಂಟರ್ ಸೇರಿದಂತೆ ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ.

English summary
US Air Force Band of Pacific collaborates with world-renowned Indian percussionist Giridhar Udupa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X