ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ: ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

|
Google Oneindia Kannada News

ನವದೆಹಲಿ, ಜೂನ್ 22: 2022ರ ನಾಗರಿಕ ಸೇವಾ (ಪ್ರಾಥಮಿಕ) ಪರೀಕ್ಷೆಯಲ್ಲಿ 13,000ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಬುಧವಾರ ಫಲಿತಾಂಶ ಪ್ರಕಟಿಸಿದೆ.

ನಾಗರಿಕ ಸೇವೆಗಳ ಪರೀಕ್ಷೆಯನ್ನು ಆಯೋಗವು ವಾರ್ಷಿಕವಾಗಿ ಮೂರು ಹಂತಗಳಲ್ಲಿ ನಡೆಸುತ್ತದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹುಬ್ಬಳ್ಳಿ; ಯುಪಿಎಸ್‌ಸಿ ಯಶಸ್ಸಿನ ಪಯಣ ಹಂಚಿಕೊಂಡ ತಹಸಿನ್ ಬಾನುಹುಬ್ಬಳ್ಳಿ; ಯುಪಿಎಸ್‌ಸಿ ಯಶಸ್ಸಿನ ಪಯಣ ಹಂಚಿಕೊಂಡ ತಹಸಿನ್ ಬಾನು

ಜೂನ್ 5, 2022 ರಂದು ಪೂರ್ವಭಾವಿ ಪರೀಕ್ಷೆಯ ಆಯೋಜಿಸಲಾಗಿತ್ತು. ಸುಮಾರು 11.52 ಲಕ್ಷ ಜನರು ಪರೀಕ್ಷೆಗೆ ಬರೆದಿದ್ದರು ಮತ್ತು 13,090 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

UPSC Preliminary Exam 2022 Result Published: List of Eligible Candidates

ಯುಪಿಎಸ್‌ಸಿ (UPSC) ತನ್ನ ವೆಬ್‌ಸೈಟ್ www.upsc.gov.in ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುವ ಅಭ್ಯರ್ಥಿಗಳ ರೋಲ್ ಸಂಖ್ಯೆಯನ್ನು ನಮೂದಿಸುವ ವಿವರವಾದ ಪಟ್ಟಿಯನ್ನು ಅಪ್‌ಲೋಡ್ ಮಾಡಿದೆ. ಆರಂಭದಲ್ಲಿ, 2022 ರ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಒಟ್ಟು 861 ಹುದ್ದೆಗಳನ್ನು ಭರ್ತಿ ಮಾಡಲು ಕೋರಲಾಗಿತ್ತು, ಈಗ ಅದನ್ನು 1,022 ಕ್ಕೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೊರೋನಾ ವೇಳೆ ಜನರ ಸಂಕಷ್ಟ ಕಂಡು ವಿದೇಶಾಂಗ ಇಲಾಖೆ ಆಯ್ಕೆ ಮಾಡಿಕೊಂಡೆ: ರಾಜ್ಯದ ಐಎಎಸ್ ಟಾಪರ್ ಹೇಳಿಕೆಕೊರೋನಾ ವೇಳೆ ಜನರ ಸಂಕಷ್ಟ ಕಂಡು ವಿದೇಶಾಂಗ ಇಲಾಖೆ ಆಯ್ಕೆ ಮಾಡಿಕೊಂಡೆ: ರಾಜ್ಯದ ಐಎಎಸ್ ಟಾಪರ್ ಹೇಳಿಕೆ

ಮುಖ್ಯ ಪರೀಕ್ಷೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು

ಎಲ್ಲಾ ಯಶಸ್ವಿ ಅಭ್ಯರ್ಥಿಗಳು ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ 2022 ಗಾಗಿ ವಿವರವಾದ ಅರ್ಜಿ ನಮೂನೆ-I (DAF-I) ನಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕೇಳಲಾಗಿದೆ ಎಂದು ಯುಪಿಎಸ್‌ಸಿ (UPSC) ತಿಳಿಸಿದೆ.

UPSC Preliminary Exam 2022 Result Published: List of Eligible Candidates

DAF-I ಅನ್ನು ಭರ್ತಿ ಮಾಡಲು ಮತ್ತು ಅದರ ಸಲ್ಲಿಕೆಗೆ ದಿನಾಂಕಗಳು ಮತ್ತು ಪ್ರಮುಖ ಸೂಚನೆಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.

2022 ರ ನಾಗರಿಕ ಸೇವಾ ಪ್ರಾಥಮಿಕ ಪರೀಕ್ಷೆಯ ಅಂಕಗಳು, ಕಟ್-ಆಫ್ ಅಂಕಗಳು ಮತ್ತು ಕೀ ಉತ್ತರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ 2022 ರ ನಾಗರಿಕ ಸೇವಾ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆ ಮುಗಿದ ನಂತರ, ಅಂದರೆ ಅಂತಿಮ ಫಲಿತಾಂಶದ ಘೋಷಣೆಯ ನಂತರವೇ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.

ಆಯೋಗವು ನವದೆಹಲಿಯ ಷಹಜಹಾನ್ ರಸ್ತೆಯಲ್ಲಿರುವ ಧೋಲ್‌ಪುರ್ ಹೌಸ್‌ನಲ್ಲಿರುವ ಪರೀಕ್ಷಾ ಸಭಾಂಗಣದ ಕಟ್ಟಡದ ಬಳಿ ಸೌಲಭ್ಯ ಕೌಂಟರ್ ಹೊಂದಿದೆ. ಅಭ್ಯರ್ಥಿಗಳು ತಮ್ಮ ಪೂರ್ವಭಾವಿ ಪರೀಕ್ಷೆಯ ಫಲಿತಾಂಶದ ಕುರಿತು ಯಾವುದೇ ಮಾಹಿತಿ, ಸ್ಪಷ್ಟೀಕರಣವನ್ನು ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ವೈಯಕ್ತಿಕವಾಗಿ ಅಥವಾ ದೂರವಾಣಿ ಸಂಖ್ಯೆ 011-23385271, 011-23098543 ಅಥವಾ 011-23381125 ಮೂಲಕ ಫೆಸಿಲಿಟೇಶನ್ ಕೌಂಟರ್‌ನಿಂದ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

English summary
Over 13,000 candidates have passed the 2022 Civil Service (Preliminary) Examination. The Union Public Service Commission (UPSC) announced the results on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X