ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ; ಕನಿಷಕ್ ಕಟಾರಿಯಾ ಟಾಪರ್

|
Google Oneindia Kannada News

ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಮುಖ್ಯ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಐಐಟಿ ಬಾಂಬೆಯ ಬಿ.ಟೆಕ್., ಪದವೀಧರ ಕನಿಷಕ್ ಕಟಾರಿಯಾ ಮೊದಲ ಸ್ಥಾನ ಪಡೆದಿದ್ದಾರೆ. ಶುಕ್ರವಾರ ಸಂಜೆ ಯುಪಿಎಸ್ ಸಿ ಮುಖ್ಯ ಪರೀಕ್ಷೆಯ ಫಲಿತಾಂಶ ಘೋಷಣೆ ಆಗಿದೆ. ಕಟಾರಿಯಾ ಪರಿಶಿಷ್ಟ ಜಾತಿಯ ಕ್ಯಾಟಗರಿಗೆ ಸೇರುತ್ತಾರೆ. ತಮ್ಮ ಮುಖ್ಯ ಪರೀಕ್ಷೆಗೆ ಗಣಿತವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದರು ಎಂದು ಯುಪಿಎಸ್ ಸಿ ತಿಳಿಸಿದೆ.

ಮಹಿಳೆಯರಲ್ಲಿ ಸೃಷ್ಟಿ ಜಯಂತ್ ದೇಶ್ ಮುಖ್ ಟಾಪರ್ ಆಗಿದ್ದಾರೆ. ಅವರು ಒಟ್ಟಾರೆ ಐದನೇ ಸ್ಥಾನ ಪಡೆದಿದ್ದಾರೆ. ಅವರು ಭೋಪಾಲ್ ನಲ್ಲಿನ ರಾಜೀವ್ ಗಾಂಧಿ ಪ್ರೌದ್ಯೋಗಿಕಿ ವಿಶ್ವವಿದ್ಯಾಲಯದಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಮೊದಲ ಟಾಪ್ ಇಪ್ಪತ್ತೈದು ಅಭ್ಯರ್ಥಿಗಳಲ್ಲಿ ಹದಿನೈದು ಪುರುಷರು ಹಾಗೂ ಹತ್ತು ಮಹಿಳೆಯರಿದ್ದಾರೆ.

106 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ106 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

ಒಟ್ಟು 759 ಅಭ್ಯರ್ಥಿಗಳಲ್ಲಿ 577 ಪುರುಷರು, 182 ಮಹಿಳೆಯರು ಭಾರತೀಯ ಆಡಳಿತಾತ್ಮಕ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರೀಯ ಸೇವೆಯ ಗ್ರೂಪ್ A ಹಾಗೂ ಗ್ರೂಪ್ B ಹುದ್ದೆಗಳಿಗೆ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.

UPSC final exam results out: Kanishak Kataria tops

ನಾಗರಿಕ ಸೇವಾ (ಪ್ರಾಥಮಿಕ) ಪರೀಕ್ಷೆ ಜೂನ್ ನಲ್ಲಿ ನಡೆದಿತ್ತು. 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. 5 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದರು. 10,468 ಮಂದಿ ಮುಖ್ಯಪರೀಕ್ಷೆ ತೆಗೆದುಕೊಂಡಿದ್ದರು. 2018ರ ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಒಟ್ಟಾರೆ 1994 ಅಭ್ಯರ್ಥಿಗಳು ಕಳೆದ ಫೆಬ್ರವರಿ- ಮಾರ್ಚ್ ನಲ್ಲಿ ವ್ಯಕ್ತಿತ್ವ ಪರೀಕ್ಷೆ ನಡೆದಿತ್ತು.

English summary
Kanishak Kataria, a B. Tech graduate from IIT Bombay has topped the civil services final exam, the UPSC announced this evening as it declared the results. Mr Kataria, who belongs to the SC Category, qualified the examination with Mathematics as his optional subject, Union Public Service Commission or UPSC said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X