ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: UPSC ಸಿಡಿಎಸ್-2 ಅಂತಿಮ ಫಲಿತಾಂಶ ಪ್ರಕಟ; ಇಲ್ಲಿದೆ ಪರಿಶೀಲಿಸುವ ವಿಧಾನ

|
Google Oneindia Kannada News

ನವದೆಹಲಿ, ಜೂನ್ 4: ದೇಶದಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ನಡೆಸಿದ 2021ನೇ ಸಾಲಿನ CDS 2 ಅಂತಿಮ ಫಲಿತಾಂಶವನ್ನು ಶನಿವಾರ ಪ್ರಕಟಿಸಲಾಗಿದೆ.

ಸಂಯೋಜಿತ ರಕ್ಷಣಾ ಸೇವೆ(CDS)ಗಾಗಿ ನಡೆಸಿದ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಸರ್ಕಾರದ ಅಧಿಕೃತ ವೆಬ್ ಸೈಟ್‌ upsc.gov.in ನಲ್ಲಿ ಪರಿಶೀಲಿಸಬಹುದು ಎಂದು ಇಲಾಖೆ ತಿಳಿಸಿದೆ.

ಕಳೆದ 2021ನೇ ಸಾಲಿನಲ್ಲಿ ನಡೆದ UPSC CDS 2 ಪರೀಕ್ಷೆಯಲ್ಲಿ ಒಟ್ಟು 142 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಹೇಗೆ ಪರಿಶೀಲಿಸಬಹುದು ಎಂಬುದನ್ನು ಈ ಕೆಳಗಿನ ಹಂತಗಳಲ್ಲಿ ತಿಳಿದುಕೊಳ್ಳಬಹುದು.

UPSC CDS 2 2021 Final result declared; Know How to check


ಅಂತಿಮ ಫಲಿತಾಂಶ ಪರಿಶೀಲನೆ ಹಂತಗಳು:

* ಮೊದಲು upsc.gov.in ನಲ್ಲಿ UPSC ಯ ಅಧಿಕೃತ ಸೈಟ್‌ಗೆ ಭೇಟಿ ನೀಡಿ

* ಮುಖಪುಟದಲ್ಲಿ ಲಭ್ಯವಿರುವ UPSC CDS II ಅಂತಿಮ ಫಲಿತಾಂಶ 2021 ಲಿಂಕ್ ಅನ್ನು ಕ್ಲಿಕ್ ಮಾಡಿ

* ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹುದಾದ ಹೊಸ PDF ಫೈಲ್ ತೆರೆದುಕೊಳ್ಳುತ್ತದೆ

* ಮುಂದಿನ ಅಗತ್ಯಕ್ಕಾಗಿ ಪುಟವನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಹಾರ್ಡ್ ಪ್ರತಿಯನ್ನು ಇಟ್ಟುಕೊಳ್ಳಿ

2021ರ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಎಕ್ಸಾಮಿನೇಷನ್ (II) ಗಾಗಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA)ಯ ಅಂತಿಮ ಫಲಿತಾಂಶದ ಘೋಷಣೆಯ ನಂತರ ಅಭ್ಯರ್ಥಿಗಳ ಅಂಕಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಅಭ್ಯರ್ಥಿಗಳು UPSC ಯ ಅಧಿಕೃತ ಸೈಟ್ ಮೂಲಕ ಹೆಚ್ಚಿನ ಸಂಬಂಧಿತ ವಿವರಗಳನ್ನು ಪರಿಶೀಲಿಸಬಹುದು.

Recommended Video

ಶೇನ್ ವಾರ್ನ್ ಎಸೆದಿದ್ದ ಬಾಲ್ ಆಫ್ ದಿ ಸೆಂಚುರಿಯನ್ನು ಸ್ಮರಿಸಿದ ICC | #Cricket | OneIndia Kannada

English summary
UPSC CDS 2 2021 Final result declared; Know How to check.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X