ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ 'ಕೇಸರಿ ಕ್ರಾಂತಿ'ಗೆ ಕರೆ ನೀಡಿದ ಮೋದಿ

By Mahesh
|
Google Oneindia Kannada News

ಶ್ರೀನಗರ, ಆ.12: ಭಾರತದ ಭೂಶಿರ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ತುದಿ ಲೆಹ್ ​​​ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅತಿ ಎತ್ತರದ ಯುದ್ಧ ಭೂಮಿ ಎನಿಸಿರುವ ಸಿಯಾಚಿನ್​ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡುತ್ತಾ ಕಾಶ್ಮೀರದಲ್ಲಿ 'ಕೇಸರಿ ಕ್ರಾಂತಿ' ಆಗಬೇಕಿದೆ ಎಂದು ಕರೆ ನೀಡಿದ್ದಾರೆ.

'ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಸರಿ ಕ್ರಾಂತಿಯಾಗಬೇಕಿದೆ. ಅಂದರೆ ಇಲ್ಲಿನ ಜನಜೀವನದ ಜೊತೆ ಹಾಸು ಹೊಕ್ಕಾಗಿರುವ ಕೇಸರಿ ಪದಾರ್ಥದ ಉತ್ಪಾದನೆ ಹಾಗೂ ಮಾರುಕಟ್ಟೆ ವಿಸ್ತಾರಗೊಳ್ಳಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಲೆಹ್ ​'ನಿಂದ ಶ್ರೀನಗರದವರೆಗಿನ ಮೊದಲ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಮೋದಿ ಅವರು ನಿಮೂ ಬಾಜ್ಗೋನಲ್ಲಿ 45 ಮೆಗಾವ್ಯಾಟ್ ಮತ್ತು ಕಾರ್ಗಿಲ್ ಜಿಲ್ಲೆಯ ಚಟಕ್ ನಲ್ಲಿ 44 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಜಲ ವಿದ್ಯುತ್ ಯೋಜನೆಗಳನ್ನೂ ಉದ್ಘಾಟಿಸಿದರು.

ವಿದ್ಯುತ್ ಪ್ರಸರಣ ಮಾರ್ಗ ಯೋಜನೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸು. 300 ಕೋಟಿ ಮೊತ್ತದ ಯೋಜನೆಯ ವೆಚ್ಚ ಈಗ ರೂ. 1,700 ಕೋಟಿಯಷ್ಟಾಗಿದೆ. ಈ ಯೋಜನೆ ಬಗ್ಗೆ ಮೋದಿ ಕೂಡ ವೈಯಕ್ತಿಕ ಆಸಕ್ತಿ ಹೊಂದಿದ್ದರು.

ಸಿಯಾಚಿನ್ ಗೆ ಆಗಮಿಸುತ್ತಾ ಇರುವ ಮೋದಿಗೆ ಕೇಂದ್ರ ವಿದ್ಯುತ್ ಸಚಿವ ಪಿಯೂಶ್ ಗೋಯಲ್ ಮತ್ತು ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ಧೋವಲ್ ಸಾಥ್ ನೀಡಲಿದ್ದಾರೆ. ಇದೇ ವೇಳೆ ಭಾರತೀಯ ಭೂ ಸೇನೆ ಮತ್ತು ವಾಯುಸೇನೆಯ ಅಧಿಕಾರಿಗಳನ್ನು ಮೋದಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಅವರ ಪ್ರವಾಸ, ಭಾಷಣದ ಅಪ್ಡೇಟ್ಸ್ ಇಲ್ಲಿದೆ...

ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಭಾಷಣ

ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಭಾಷಣ

* ಕಾಶ್ಮೀರದ ಪಶ್ಮೀನಾ ಶಾಲುಗಳ ಆಧುನೀಕರಣಕ್ಕೆ ಮೋದಿ ಕರೆ ನೀಡಿದ್ದಾರೆ. ಲೆಹ್ ನಲ್ಲಿ ಮಾತನಾಡುತ್ತಾ ಪ್ರಕಾಶ್, ಪರ್ಯಾವರಣ್, ಪರ್ಯಾಟನ್ ಎಂಬ ಮೂರು ಮಂತ್ರಗಳನ್ನು ಬೋಧಿಸಿದ್ದಾರೆ.
* ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ. ನಾಡಿನಲ್ಲಿ ಸಂಪತ್ತಿಗೇನು ಕೊರತೆ ಇಲ್ಲ. ಆದರೆ, ಇಚ್ಛಾಶಕ್ತಿ ಕೊರತೆ ಇದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಸಂಪತ್ತು ಬಡವರಿಗೆ ಹಂಚಿಕೆ ಮಾಡುವತ್ತ ಸರ್ಕಾರ ಹೆಜ್ಜೆ ಇರಿಸಿದೆ.

ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಟ್ವೀಟ್

ಪ್ರಧಾನಿ ಮೋದಿ ಪ್ರವಾಸ, ಭಾಷಣದ ಬಗ್ಗೆ ಟ್ವೀಟ್

ಪ್ರವಾಸೋದ್ಯಮ ಅಭಿವೃದ್ಧಿಗೆ ಕರೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಕರೆ

ಬಟಾಣಿ ಮಾರಾಟಗಾರರು, ಚಹಾವಾಲ, ಕುದುರೆವಾಲ ಮುಂತಾದವರಿಗೆ ಪ್ರವಾಸೋದ್ಯಮದಿಂದ ಲಾಭವಾಗಲಿದೆ. ಸಿಎಂ ಒಮರ್ ಅಬ್ದುಲ್ಲಾ ಅವರಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ. ಆಹಾರ ಧಾನ್ಯ ಎಫ್ ಸಿಐಗೆ ಕಳಿಸುವುದರ ಬಗ್ಗೆ ಎದ್ದಿರುವ ಪ್ರತಿಭಟನೆಗಳನ್ನು ಪರಿಹರಿಸಲು 60 ಕೋಟಿ ಪರಿಹಾರ ನೀಡಲಾಗುವುದು ಎಂದರು.

ಸಿಯಾಚಿನ್ ನಲ್ಲಿ ಮೋದಿ ಭಾಷಣ

ಸಿಯಾಚಿನ್ ನಲ್ಲಿ ಮೋದಿ ಭಾಷಣ

ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಭಾಷಣ ಮಾಡುತ್ತಾ ಸಿಯಾಚಿನ್ ವಿಷಯದಲ್ಲಿ ಸರ್ಕಾರ ಕೈಕಟ್ಟಿ ಕೂರುವುದಿಲ್ಲ. ಇಲ್ಲಿ ಯುದ್ಧ ಸ್ಮಾರಕ ನಿರ್ಮಿಸಲಾಗುವುದು ಎಂದರು.

ಲೆಹ್ ನಲ್ಲಿ ಶಂಕುಸ್ಥಾಪನೆ ಮಾಡಿದ ಮೋದಿ

ಲೆಹ್ ನಲ್ಲಿ ಶಂಕುಸ್ಥಾಪನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

English summary
Prime Minister Narendra Modi arrived here on Tuesday(Aug.12) on his maiden visit to inaugurate two hydro-power projects in the Ladakh region and a 330 km Leh-Srinagar transmission line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X