• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ.25: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|

ಬೆಂಗಳೂರು, ಮೇ.25: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

2.45: 151 ಮಂದಿ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ ಪಾಕಿಸ್ತಾನ.

2.30: ಮೋದಿ ಕ್ಯಾಬಿನೆಟ್: ರಾಜನಾಥ್ ಗೆ ಗೃಹ ಖಾತೆ, ಅರುಣ್ ಜೇಟ್ಲಿ ವಿತ್ತ, ನಿತಿನ್ ಗಡ್ಕರಿ ಸಾರಿಗೆ ಸಿಗುವ ಸಾಧ್ಯತೆ.

2.15: ರಾಜಸ್ಥಾನ ಸರ್ಕಾರ ಶೀಘ್ರದಲ್ಲೇ ಏರ್ ಟ್ಯಾಕ್ಸಿ ಆರಂಭಿಸಲಿದೆ.

2.00: ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಭಾರಿ ಮಳೆ.

1.30: ಸ್ಟಾಕ್ ಹೋಮ್ ಗೆ ತೆರಳುತ್ತಿರುವ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಿ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

1.00: ವೈಎಸ್ಸಾರ್ ಪಕ್ಷದ ಇಬ್ಬರು ಸಂಸದರು ಎಸ್ ಪಿವೈ ರೆಡ್ಡಿ ಹಾಗೂ ರೇಣುಕಾ ಅವರು ಪಕ್ಷ ತೊರೆದು ತೆಲುಗುದೇಶಂ ಪಾರ್ಟಿ ಸೇರಿದ್ದಾರೆ.

11.00: ಶಿಕಾರಿಪುರ ಶಾಸಕ ಸ್ಥಾನಕ್ಕೆ ಶಿವಮೊಗ್ಗದ ಹಾಲಿ ಸಂಸದ ಬಿಎಸ್ ಯಡಿಯೂರಪ್ಪ ಅವರಿಂದ ರಾಜಿನಾಮೆ.

10.30: ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಟಿಡಿಪಿ ಮುಖ್ಯಸ್ಥ ಚಂದ್ರಬಾಬುನಾಯ್ಡು, ಐದು ಸ್ಥಾನಗಳಿಗೆ ಬೇಡಿಕೆ ಸಲ್ಲಿಕೆ.

10.15: ಉತ್ತರಪ್ರದೇಶದ ಸಚಿವ ಅಜಂ ಖಾನ್ ಅವರ ಏಳು ಎಮ್ಮೆ ಕದ್ದೊಯ್ದಿದ್ದ ಐವರನ್ನು ರಾಮಪುರದ್ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಫೆ.1 ರಂದು ಅಜಂ ಖಾನ್ ಅವರ ತೋಟದ ಮನೆಯಿಂದ ಎಮ್ಮೆಗಳು ಕಳುವಾಗಿತ್ತು.

10.00: ದಕ್ಷಿಣ ಆಫ್ರಿಕದ ಹಾಲಿ ಅಧ್ಯಕ್ಷ ಜಾಕೊಬ್ ಝುಮಾ ಎರಡನೆ ಅವಧಿಗೆ ಮತ್ತೆ ಆಯ್ಕೆಯಾಗಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಮೇ 7ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾಕೊಬ್ ಝುಮಾರ ‘ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್' 62% ಮತಗಳನ್ನು ಗಳಿಸಿ ಜಯಭೇರಿ ಬಾರಿಸಿತ್ತು.

9.45: ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ 1ಕೋಟಿ ರು ಕಳೆದುಕೊಂಡಿದೆ. ಸುರಕ್ಷಿತ ಹೂಡಿಕೆ ರೂಪದ ಮೊತ್ತದ ಹಣ ಎಎಪಿ ಕೈ ಸುಟ್ಟಿದೆ.

9.30: ದಕ್ಷಿಣ ಏಷ್ಯಾ ನಾಯಕರಿಗೆ ಮೋದಿ ಅವರು ನೀಡಿರುವ ಅಹ್ವಾನ ಉತ್ತಮ ಬೆಳವಣಿಗೆ ಎಂದು ಎಡಪಕ್ಷಗಳು ಮೋದಿಯನ್ನು ಹೊಗಳಿವೆ.

9.15: ಸನ್ ಫಾರ್ಮಾ ಹಾಗೂ ರಾನ್ ಬಾಕ್ಸಿ ಒಪ್ಪಂದದ ಮೇಲಿರುವ ತಡೆಯನ್ನು ಹೈಕೋರ್ಟ್ ಹಿಂಪಡೆದಿದೆ.

9.00: ಫಿಲಿಪ್ಸ್ ಮತ್ತೊಮ್ಮೆ ಭಾರತದ ಮೊಬೈಲ್ ಫೋನ್ ಮಾರುಕಟ್ಟೆ ಪ್ರವೇಶಿಸಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Top news in brief for the day:Months after Rampur Police arrested five men and claimed to have solved the case of theft of state minister Azam Khan's buffaloes, a man arrested here has allegedly accepted that he was involved in the heist. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more