ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.6: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.6: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

4.15: ಜುಲೈನಲ್ಲಿ ಪ್ರಧಾನಿ ಮೋದಿ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
3.45: ಸೋಮವಾರ ತನಕ ಲೋಕಸಭೆ ಕಲಾಪ ಮುಂದೂಡಲಾಗಿದೆ.
3.30: ನಿತಿನ್ ಗಡ್ಕರಿ ಅವರ ಮಾನನಷ್ಟ ಮೊಕದ್ದಮೆ ಪ್ರಕರಣ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಚಾರ್ಜ್ ಶೀಟ್
3.15: ಸೆನ್ಸೆಕ್ಸ್ ನಲ್ಲಿ 358.72 ಅಂಕ ಜಿಗಿತ. 25,378.23 ದಾಟಿ ಹೊಸ ದಾಖಲೆ. ನಿಫ್ಟಿ ಕೂಡಾ 7,572.80 ಅಂಕ ದಾಟಿ ದಾಖಲೆ.
2.15: ಸೆ.266 ಅಥವಾ ಸೆ.30ರಂದು ಮೋದಿ-ಒಬಾಮ ಭೇಟಿ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Narendra Modi

1.00: ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ವಿದೇಶ ಪ್ರವಾಸವನ್ನು ಭೂತಾನ್‌ನಿಂದ ಆರಂಭಿಸುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಶುಕ್ರವಾರ ಉನ್ನತ ಅಧಿಕಾರಿಗಳ ತಂಡವೊಂದು ರಾಜಧಾನಿ ಥಿಂಪುವಿಗೆ ತೆರಳಲಿದೆ.
12.45: ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಕೈ ಕಾಲು ಕಳೆದುಕೊಂಡವರಿಗೆ ಉಚಿತ ಕೃತಕ ಅಂಗಗಳನ್ನು ನೀಡುವುದಾಗಿ ಜೈಪುರ್ ಫುಟ್ ತಯಾರಕರು ತಿಳಿಸಿದ್ದಾರೆ. ಜೂ.8ರಿಂದ ತಿಂಗಳ ಕಾಲ ಕಾಬೂಲ್ನಲ್ಲಿ ಭಗವಾನ್ ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿ (ಬಿಎಂವಿಎಸ್ಎಸ್) ಶಿಬಿರವನ್ನು ನಡೆಸಲಿದೆ.
11.45 : 16ನೇ ಲೋಕಸಭೆಯ ಸ್ಪೀಕರ್ ಆಗಿ ಬಿಜೆಪಿಯ ಸುಮಿತ್ರಾ ಮಹಾಜನ್ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯ ಸುಮಿತ್ರಾ ಮಹಾಜನ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವರ ಆಯ್ಕೆಯನ್ನು ಇಂದು ಅಧಿಕೃತವಾಗಿ ಘೋಷಿಸಲಾಗಿದೆ.
10.25: ಮಹಾರಾಷ್ಟ್ರದಲ್ಲಿನ ಆಮ್‌ ಆದ್ಮಿ ಪಾರ್ಟಿಯ ಹಿರಿಯ ನಾಯಕಿ ಅಂಜಲಿ ದಮಾನಿಯಾ ಅವರು ಪಕ್ಷಕ್ಕೆ ರಾಜೀನಾಮೆ ಹಿಂಪಡೆದಿದ್ದು, ಮಹಾರಾಷ್ಟ್ರದಲ್ಲಿ ಎಎಪಿ ಬೆಳೆಸುವುದಾಗಿ ಹೇಳಿದ್ದಾರೆ.
Sumitra Mahajan

10.15: ಪುಣೆಯಲ್ಲಿ ಟೆಕ್ಕಿ ಹತ್ಯೆಯನ್ನು ಅಮೆರಿಕದ ಹಿಂದೂ ಸಂಘಟನೆ ಖಂಡಿಸಿದೆ.
10.00: ಆಪರೇಷನ್ ಬ್ಲೂ ಸ್ಟಾರ್ ಕುರಿತಂತೆ ಚರ್ಚೆ ಮತ್ತೆ ಆರಂಭಗೊಂಡಿದೆ. 1984ರ ಸಿಖ್ ಹತ್ಯಾಕಾಂಡದ ತನಿಖೆಯನ್ನು ವಿಶ್ವಸಂಸ್ಥೆ ವಹಿಸಿಕೊಳ್ಳಬೇಕು ಎಂದು ಸಿಖ್ ಸಂಘಟನೆಗಳು ಕೇಳಿಕೊಂಡಿವೆ, ಅಕಾಲಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
News in brief on June 6

9.45: ಎಎಪಿಯಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ ಮನೀಷ್ ಸಿಸೋಡಿಯಾ ಹಾಗೂ ಯೋಗೇಂದ್ರ ಯಾದವ್ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ.
9.30: ಸಿಯಾಟಲ್ ನ ವಿಶ್ವವಿದ್ಯಾಲಯವೊಂದರಲ್ಲಿ ಶೂಟೌಟ್ ನಡೆದಿದ್ದು ಒಬ್ಬ ಮೃತಪಟ್ಟು, ಮೂವರಿಗೆ ಗಾಯಗಳಾಗಿವೆ.
9.15: ಬೆಂಗಳೂರಿನ ಮಂಡೂರಿನ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಹೊಸ ಡೆಡ್ ಲೈನ್ ನೀಡಲಾಗಿದೆ.
English summary
Top news in brief for the day: Operation Bluestar debate reignites, Sikh groups demand UN intervention into 1984 Bluestar operation,while Akalis oppose international probe. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X