ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.3: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.3: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

2.30: ಲೈಂಗಿಕ ದೌರ್ಜನ್ಯ ಪ್ರಕರಣ : ತರುಣ್ ತೇಜ್ಪಾಲ್ ಜಾಮೀನು ಅವಧಿ ಜೂ.27ರವರೆಗೆ ವಿಸ್ತರಣೆ
2.15: ಮಗಳ ಮದುವೆಯಲ್ಲಿ ಭಾಗವಹಿಸಲು ಕರೀಮ್ ಲಾಲ್ ತೆಲಗಿಗೆ ಹೈಕೋರ್ಟ್ ಅನುಮತಿ ನೀಡಿದೆ. ನಕಲಿ ಛಾಪಾ ಕಾಗದ ಹಗರಣ ಆರೋಪಿ ಕರೀಮ್ ಲಾಲ್ ತೆಲಗಿ ಅವರ ಪುತ್ರಿ ವಿವಾಹ ಬೆಂಗಳೂರಿನ ಮಿಲ್ಲರ್ ರಸ್ತೆಯಲ್ಲಿರುವ ಮಸೀದಿಯಲ್ಲಿ ಜೂ.5ರಂದು ನಡೆಯಲಿದೆ.
2.00 : ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ.
1.30 : ಕೋಲ್ಕತ್ತಾದ ಐಪಿಎಲ್ ವಿಜೇತ ತಂಡ ಕೆಕೆಆರ್ ಗೆ ಪಶ್ಚಿಮ ಬಂಗಾಳ ಸರ್ಕಾರದಿಂದ ಸನ್ಮಾನ.

News in brief on June 3

11.00: ಜರ್ಮನಿ ಹಾಗೂ ಇಟಲಿ ಹಿಂದಿಕ್ಕಿ ಭಾರತ ಈಗ ಜವಳಿ ಉದ್ಯಮದಲ್ಲಿ ನಂ.2 ಸ್ಥಾನಕ್ಕೇರಿದೆ. ಟೆಕ್ಸ್ ಟೈಲ್ ಉದ್ಯಮದಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದು, ಭಾರತಕ್ಕಿಂತ ಏಳು ಪಟ್ಟು ಹೆಚ್ಚು ರಫ್ತು ಮಾಡುತ್ತಿದೆ.
10.45: ಮಾವು ನಿಷೇಧದ ಸಾಧಕ-ಬಾಧಕ ಬಗ್ಗೆ ಪರಿಶೀಲನೆ ನಡೆಸಲು ಯುರೋಪಿನ ತಂಡ ಭಾರತಕ್ಕೆ ಬರುತ್ತಿದೆ.
10.30: ಹಾಕಿ ವಿಶ್ವಕಪ್: ಸತತ ಎರಡನೇ ಸೋಲು ಕಂಡ ಭಾರತ, ಬೆಲ್ಜಿಯಂ ನಂತರ ಇಂಗ್ಲೆಂಡ್ ವಿರುದ್ಧವೂ ಸೋಲು.

News in brief on June 3

10.15 : ನವಾಜ್ ಷರೀಫ್ ಅವರನ್ನು ಶಾಲಾ ಬಾಲಕನಂತೆ ಭಾರತ ನಡೆಸಿಕೊಂಡಿದೆ : ಇಮ್ರಾನ್ ಖಾನ್ ಹೇಳಿಕೆ.
10.00 : ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಸಲು ಇದು ಸಕಾಲ ಎಂದು ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಹೇಳಿಕೆ.
9.45: ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅಪಘಾತದಲ್ಲಿ ದುರ್ಮರಣ,ಮಹಾರಾಷ್ಟ್ರ ಮರಾಠವಾಡಾದ ಪರಲಿಯಲ್ಲಿ ನಾಳೆ ಬುಧವಾರ ಗೋಪಿನಾಥ್ ಮುಂಡೆ ಅಂತಿಮ ಸಂಸ್ಕಾರ ನಡೆಯಲಿದೆ[ವಿವರ ಇಲ್ಲಿದೆ]

9.30: ವಾರಣಾಸಿಗೆ ಅನಿಯಮಿತ ವಿದ್ಯುತ್ ಪೂರೈಕೆ ಮಾಡುವಂತೆ ಉತ್ತರಪ್ರದೇಶ ಸಿಎಂ ಆದೇಶ.

English summary
Top news in brief for the day:India has overtaken Germany and Italy to emerge as the world's second largest textile exporter. But it lags China, whose exports are nearly seven times higher. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X