ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.19: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.19: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

2.45: ಭಾರತ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ವಿಶ್ವ ಚಾಂಪಿಯನ್ ಮಾಗ್ನಸ್ ಕಾರ್ಲ್ಸನ್ ವಿರುದ್ಧ ಅದ್ಭುತ ಜಯ ಸಾಧಿಸಿದರೂ ವಿಶ್ವ Rapid ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ದುಬೈನಲ್ಲಿ ಟೂರ್ನಿ ನಡೆದಿತ್ತು.
1.30: ಅತ್ಯಾಚಾರ ಆರೋಪ ಹೊತ್ತಿರುವ ರಸಗೊಬ್ಬರ ಖಾತೆ ರಾಜ್ಯ ಸಚಿವ ನಿಹಾಲ್ ಚಂದ್ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.
1.00: ಜೈಪುರದ ವಿರಾಟ್ ನಗರ ಬಳಿ ಕಂದಕಕ್ಕೆ ಬಸ್ ಉರುಳಿದ ಪರಿಣಾಂಅ 15ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿರುವ ವರದಿ ಬಂದಿದೆ.

Vishwanathan Anand

10.15: ಬಿಜಾಪುರದ ಕೊಳವೆ ಬಾವಿ ದುರಂತ : ಮಣ್ಣು ಬಿದ್ದಿದ್ದರಿಂದ ಕಾರ್ಯಾಚರಣೆಗೆ ಅಡ್ಡಿ [ಅಪ್ದೇಡ್ ಗಾಗಿ ಇಲ್ಲಿ ಓದಿ]

10.01 : ಛತ್ತೀಸ್ ಗಢ ರಾಜ್ಯಪಾಲ ಶೇಖರ್ ದತ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
9.45: ಯುಎಸ್ ಗೆ ತೆರಳಿರುವ ನಟಿ ಪ್ರೀತಿ ಜಿಂಟಾ ಅವರು ಗುರುವಾರ ಭಾರತಕ್ಕೆ ಹಿಂತಿರುಗುವ ಸಾಧ್ಯತೆಯಿದೆ. ಪೊಲೀಸರ ಎದುರು ತಮ್ಮ ಹೇಳಿಕೆ ನೀಡುವ ನಿರೀಕ್ಷೆಯಿದೆ.

Top news in brief for the day

9.30 : ಅತಿಕ್ರಮಣದ ಆರೋಪದ ಮೇಲೆ ತಮಿಳುನಾಡಿನ 47 ಮೀನುಗಾರರನ್ನು ಶ್ರೀಲಂಕಾದ ಜಲಸೇನೆ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದು, 11 ಬೋಟುಗಳನ್ನು ಜಪ್ತಿ ಮಾಡಿದ್ದಾರೆ.
9.00 : ಇರಾಕಿನಲ್ಲಿ ಅಪಹರಣವಾಗಿರುವ 40ಕ್ಕೂ ಅಧಿಕ ಭಾರತೀಯರ ಕುಟುಂಬದವರು ದೆಹಲಿಗೆ ತೆರಳಿದ್ದಾರೆ. ಅಕಾಲಿದಳದ ನಾಯಕ ಮನ್ಜೀತ್ ಜಿಕೆ ಅವರು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿದ್ದಾರೆ. [ಹೆಚ್ಚಿನ ಓದಿಗೆ]
English summary
Top news in brief for the day: Preity Zinta to return from the United States today, likely to record her statement with the police and Here the news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X