ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.11: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.11: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

5.45: ಸ್ಕೈ ಬಾಕ್ಸ್ ಕಂಪನಿಯನ್ನು 500 ಮಿಲಿಯನ್ ನೀಡಿ ಗೂಗಲ್ ಖರೀದಿಸುವ ಸಾಧ್ಯತೆಗಳಿವೆ.
5.15: ಲೆ.ಜ. ಸುಹಾಗ್ ಅವರು ಮುಂದಿನ ಭಾರತೀಯ ಸೇನಾ ಮುಖ್ಯಸ್ಥರಾಗುವ ಸಾಧ್ಯತೆಗಳಿವೆ.
4.30: ಪ್ರತಿ ಮನೆಗೂ ಒಬ್ಬ ಪೊಲೀಸ್ ಸಿಬ್ಬಂದಿ ಒದಗಿಸಿದರೂ ಅತ್ಯಾಚಾರ ತಡೆಗಟ್ಟಲು ಸಾಧ್ಯವಿಲ್ಲ: ಮಹಾರಾಷ್ಟ್ರ ಗೃಹ ಸಚಿವ ಆರ್ ಆರ್ ಪಾಟೀಲ್ ಹೇಳಿಕೆ.
9.10: ದೆಹಲಿಯ ವಿದ್ಯುತ್ ಸಮಸ್ಯೆ ಉಲ್ಬಣವಾಗಿದೆ. ಸಾರ್ವಜನಿಕರು ಲೋಡ್ ಶೆಡ್ಡಿಂಗ್ ನಿಂದ ಬೇಸತ್ತು ಪ್ರತಿಭಟನೆ ನಡೆಸುತ್ತಿದ್ದು, ಸಾರಿಗೆ ಸಂಸ್ಥೆ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ.
8.45: ಚೀನಾ ಗಣಿಯಲ್ಲಿ ಅನಿಲ ಸೋರಿಕೆ 10 ಜನ ಸಾವನ್ನಪ್ಪಿದ್ದಾರೆ.

News in brief on June 11

8.30: ಜೂ.15ರಿಂದ ಎರಡು ದಿನಗಳ ಪ್ರಧಾನಿ ನರೇಂದ್ರ ಮೋದಿ ಅವರು ಭೂತನ್ ಪ್ರವಾಸ ಕೈಗೊಳ್ಳಲಿದ್ದು, ಇದು ಪ್ರಧಾನಿಯಾಗಿ ಇವರ ಮೊದಲ ವಿದೇಶಿ ಪ್ರವಾಸವಾಗಿದೆ.
8.15: ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್, ಅಮ್ಮ ಮಿನರಲ್ ವಾಟರ್ ನಂತರ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ ಅಮ್ಮ ಉಪ್ಪು ಮಾರುಕಟ್ಟೆಗೆ ಬಿಡಲಾಗಿದೆ.
English summary
Top news in brief for the day: No respite from power cuts in Delhi, protesters set bus on fire. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X