ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.4: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಆ.4: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11.30: ಮುಂದೊಂದು ದಿನ ವರುಣ್ ಗಾಂಧಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಕಾಣುವ ಬಯಕೆಯನ್ನು ಅವರ ಅಮ್ಮ ಮೇನಕಾ ಗಾಂಧಿ ತೋಡಿಕೊಂಡಿದ್ದಾರೆ.
11.25: ಉತ್ತರಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಅಧಿಕಾರದಿಂದ ಕಿತ್ತುಹಾಕಲು ಜನ ಸಿದ್ಧರಾಗುತ್ತಿದ್ದಾರೆ: ಮೇನಕಾ ಗಾಂಧಿ.

Varun Gandhi

11.20: ನೇಪಾಳ ಪ್ರವಾಸ ನಿರತ ನರೇಂದ್ರ ಮೋದಿ ಅವರು ಪಶುಪತಿ ನಾಥ ದೇಗುಲದ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
11.15: ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಕಠ್ಮಂಡುವಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
11.10: ತಮಿಳುನಾಡು ಹಾಗೂ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸುತ್ತಿರುವ ಶ್ರೀಲಂಕಾ ವೆಬ್ ತಾಣಗಳ ವಿರುದ್ಧ ತಮಿಳು ಚಿತ್ರರಂಗ ಸಿಡಿದೆದ್ದಿದೆ. ರಾಜ್ಯಸಭೆಯಲ್ಲೂ ಇದು ಚರ್ಚೆಯಾಗಿದೆ.

10.45: ನಿಥಾರಿ ಕೊಲೆ ಪ್ರಕರಣ : ಮೊನಿಂದರ್ ಸಿಂಗ್ ಪಂಧೇರ್ ಗೆ ನಾಲ್ಕು ಕೇಸುಗಳಲ್ಲಿ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್
10.30: ಚೆನ್ನೈನಲ್ಲಿ ಪಂದ್ಯವಾಡಲು ಬಂದಿದ್ದ ಶ್ರೀಲಂಕಾದ ಅಂಡರ್ 16 ಕ್ರಿಕೆಟ್ ತಂಡವನ್ನು ಹಿಂದಕ್ಕೆ ಕಳಿಸಲಾಗಿದೆ.
10.00: ಎಫ್ ಡಿಐ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿಕೆ.
English summary
Top news in brief for the day: When next UP elections are here, teach Samajwadi Party a lesson and want to see Varun as UP CM : Maneka Gandhi and many more news from across the globe
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X