ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.3: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಆ.3: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

10.40: ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರ ವಾಸಯೋಗ್ಯ ಅನುಮತಿಯನ್ನು ಭಾರತ ಸರ್ಕಾರ ರದ್ದು ಮಾಡಿದ್ದು, ಪ್ರವಾಸಿ ವೀಸಾ ನೀಡಿದೆ ಎಂದು ಬಾಂಗ್ಲಾದೇಶದ ಲೇಖಕಿ ಟ್ವೀಟ್ ಮಾಡಿದ್ದಾರೆ.
10.35: ತಸ್ಲೀಮಾ ನಸ್ರೀನ್ ಅವರ ವೀಸಾ ಅವಧಿಯನ್ನು 1 ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ. ಶನಿವಾರ ಈ ಸಂಬಂಧ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ನಸ್ರೀನ್ ಭೇಟಿ ಮಾಡಿದ್ದರು.


10.30: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ನೇಪಾಳ ಪ್ರವಾಸ ಆರಂಭಗೊಂಡಿದೆ. ಭಾನುವಾರ ಸಂಜೆ ನೇಪಾಳ ಸಂಸತ್ತಿನಲ್ಲಿ ಮೋದಿ ಅವರು ಭಾಷಣ ಮಾಡಲಿದ್ದಾರೆ.
10.15: ನೇಪಾಳದಲ್ಲಿ ಭೂ ಕುಸಿತ ಭಾರಿ ಮಳೆಯ ಕಾರಣ ಬಿಹಾರದ ಕೋಸಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

Taslima Nasreen

10.00: ನಟ್ವತ್ ಸಿಂಗ್ ಅವರ ಒನ್ ಲೈಫ್ ಇಸ್ ನಾಟ್ ಎನಫ್ ಪುಸ್ತಕ ಪ್ರಕಾಶಕರಾದ ರೂಪ ಪಬ್ಲಿಕೇಷನ್, ಮುಂಬೈ ಮಾಲೀಕರಿಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆಯಂತೆ.
9.30: ನಟ ಅಮೀರ್ ಖಾನ್ ಅವರ ಪಿಕೆ ಪೋಸ್ಟರ್ ವಿರುದ್ಧ ಉತ್ತರ ಪ್ರದೇಶದ ವಕೀಲರೊಬ್ಬರು ಮೊಕದ್ದಮೆ ಹೂಡಿದ್ದಾರೆ. ಇದು ಲೈಂಗಿಕ ಪ್ರಚೋದಕ ಜಾಹೀರಾತಾಗಿದೆ ಎಂದು ವಾದಿಸಿದ್ದಾರೆ.
English summary
Top news in brief for the day: Narendra Modi Govt cancels Taslima Nasreen's resident permit, gives her a tourist visa. Seeking long-term extension of her residence permit, controversial author Taslima Nasreen on Saturday met Union Home Minister Rajnath Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X