ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.17: ದೇಶ, ವಿದೇಶಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಆ.17:ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.45: ಸಹರನ್ ಪುರ್ ಗಲಭೆ ಹಿಂದೆ ಬಿಜೆಪಿ ಕೈವಾಡವಿದೆ ಎಂಬ ವರದಿ ಬಗ್ಗೆ ಪ್ರತಿಕ್ರಿಯಿಸಲು ಗೃಹ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದ್ದಾರೆ.
6.00: ಸಹರನ್ ಪುರದ ಕೋಮು ಗಲಭೆಗೆ ಬಿಜೆಪಿ ಒಂದೇ ಅಲ್ಲ ಸಮಾಜವಾದಿ ಪಕ್ಷವೂ ಕಾರಣ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಯಾವತಿ ಹೇಳಿದ್ದಾರೆ.
5.30: ಸಹರನ್ ಪುರದ ಕೋಮು ಗಲಭೆ ಹಿಂದೆ ಬಿಜೆಪಿ ಸಂಸದ ರಾಘವ್ ಲಖನ್ ಪಾಲ್ ಕೈವಾಡವಿದೆ ಎಂದು ಉತ್ತರಪ್ರದೇಶ ಸರ್ಕಾರ ತನ್ನ ವರದಿಯಲ್ಲಿ ಹೇಳಿದೆ.
4.30: ಐದು ದಿನಗಳ ಸಿಂಗಪುರ ಪ್ರವಾಸಕ್ಕೆ ತೆರಳುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬಿಜೆಪಿ ಗೇಲಿ ಮಾಡಿದೆ.

Updates India, International News in Brief Aug 17

1.50: ನೇಪಾಳದಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದ ಸುಮಾರು 84 ಮಂದಿ ಸಾವನ್ನಪ್ಪಿದ್ದು, 156 ಮಂದಿ ನಾಪತ್ತೆಯಾಗಿದ್ದಾರೆ.
12.00: ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣಜನ್ಮಾಷ್ಟಮಿಯ ಶುಭ ಹಾರೈಕೆ ತಿಳಿಸಿದ್ದಾರೆ.

10.25: ಜಮ್ಮು ಮತ್ತು ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ ನಲ್ಲಿ ಪಾಕಿಸ್ತಾನ ಭಾನುವಾರ ದಿನ ಕೂಡಾ ತನ್ನ ಕಳ್ಳಯುದ್ಧ ಮುಂದುವರೆಸಿದೆ. ಭಾರತ ಗಡಿ ಭದ್ರತಾ ಪಡೆಯ 7 ಯೋಧರು ಇದರಿಂದ ಗಾಯಗೊಂಡಿದ್ದಾರೆ.
10.15: ಎಬೋಲಾ ಭೀತಿಯಿಂದ ಪಶ್ಚಿಮ ಆಫ್ರಿಕಾ ದೇಶಗಳ ವಿಮಾನಗಳಿಗೆ ಕೀನ್ಯಾ ದೇಶ ಪ್ರವೇಶ ನಿರ್ಬಂಧಿಸಿದೆ.
10.00: ಉತ್ತರಾಖಂಡದ ಮೇಘ ಸ್ಫೋಟ ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ 32ಕ್ಕೇರಿದೆ.

Updates India, International News in Brief Aug 17

9.45: ಬಿಹಾರದಲ್ಲಿ ನಡೆಯಲಿರುವ ಆ.21ರ ಉಪಚುನಾವಣೆಗಾಗಿ ಲಾಲೂ ಪ್ರಸಾದ್ ಹಾಗೂ ನಿತೀಶ್ ಕುಮಾರ್ ಅವರು ಎರಡನೇ ಬಾರಿಗೆ ಭಾನುವಾರ ಚುನಾವಣಾ ಪ್ರಚಾರ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
9.30: ಈಶಾನ್ಯ ಭಾರತದಲ್ಲಿ ಲಘು ಭೂಕಂಪ ಸಂಭವಿಸಿದೆ.ರಿಕ್ಚರ್ ಮಾಪಕದಲ್ಲಿ ಪ್ರಮಾಣ 4.8ರಷ್ಟಿತ್ತು.
English summary
A UP government panel on Sunday accused a BJP MP of inciting Saharanpur riots, besides blaming laxity by local officials, sparking a war of words among parties with BJP dismissing the report as "politically motivated" and an attempt by ruling Samajwadi Party to hide its "failures".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X