ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.22: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

Updates India, International News in Brief Sept 22
ಬೆಂಗಳೂರು, ಸೆ.22: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.


15.03:
ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರು ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಸ್ಕ್ವಾಶ್ ಪಟು ಮಲೇಷಿಯಾದ ನಿಕೋಲ್ ಡೇವಿಡ್ ವಿರುದ್ಧ ದೀಪಿಕಾ ಸೋಲೊಪ್ಪಿಕೊಂಡಿದ್ದಾರೆ.

Deepika

12.25: ಬಾಲಿವುಡ್ ನಟ ಶಶಿ ಕಪೂರ್(76) ಅವರು ಎದೆನೋವಿನಿಂದ ಬಳಲುತ್ತಿದ್ದು, ಮುಂಬೈನ ಕೋಕಿಲಾಬೇನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

12.00: ಏಷ್ಯನ್ ಗೇಮ್ಸ್ 2014: ಭಾರತೀಯ ಮಹಿಳಾ ಶೂಟರ್ಸ್ 25 ಮೀ. ಪಿಸ್ತೂಲ್ ಟೀಂ ಇವೆಂಟ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

11.50: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೋಮವಾರ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಲಿದ್ದಾರೆ.

11.40: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಕೇಂದ್ರ ಚುನಾವಣಾ ಸಮಿತಿ ಸಭೆ ದೆಹಲಿಯ 10 ಜನಪಥ್ ನಲ್ಲಿ ಜಾರಿಯಲ್ಲಿದೆ. ಎನ್ ಸಿಪಿ ಜೊತೆ ಸಖ್ಯ ಬೇಕೇ? ಬೇಡವೇ? ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

11.20: ಪ್ರವಾಹ ಪೀಡಿತ ಕಾಶ್ಮೀರದ ಮೇಲೆ ಸಂಭಾವ್ಯ ಉಗ್ರರ ದಾಳಿ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ನಾಗರಿಕರು ಹಾಗೂ ರಾಜಕಾರಣಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ.

10.50 : ಬಿಜೆಪಿ ನಾಯಕ ಓಂ ಮಾಥೂರ್ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಜೊತೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

10.40: ಸಿಎಲ್ಟಿ20: ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸತತ 11ನೇ ಗೆಲುವು ದಾಖಲಿಸಿದೆ. ಕಳೆದ ರಾತ್ರಿ ಲಾಹೋರ್ ಲಯನ್ಸ್ ತಂಡವನ್ನು ಸೋಲಿಸಿದೆ.

10.30: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ.23 ರಿಂದ ಸಿಎಲ್ಟಿ20 ಪಂದ್ಯಗಳು ನಡೆಯಲಿದೆ[ ವಾಹನ ನಿಲುಗಡೆ ವಿವರ ಇಲ್ಲಿದೆ]

English summary
Top news in brief for the day: Top news in brief for the day: India's Dipika Pallikal settled for a bronze medal at the Asian Games 2014 here today after losing her Women's singles semi-final squash match to world number one Nicol David of Malaysia and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X