ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.15: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.15: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.30: ಪಶ್ಚಿಮ ಬಂಗಾಳದ ಇತಿಹಾಸ ಪ್ರಸಿದ್ಧ ವಿಶ್ವಭಾರತಿ ವಿಶ್ವವಿದ್ಯಾಲಯ ವಿದ್ಯಾಥಿನಿಯೊಬ್ಬರು ತಮ್ಮ ಮೇಲೆ ಶಿಕ್ಷಕರೊಬ್ಬರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳವಾಗಿದೆ ಎಂದು ಆರೋಪಿಸಿದ್ದಾರೆ. ಶಿಕ್ಷಕನ ಮೇಲೆ ದೂರು ದಾಖಲಿಸಲಾಗಿದ್ದು, ಪೊಲೀಸರು ಎಫ್ ಐಆರ್ ಹಾಕಿದ್ದಾರೆ.
6.00: ಶಾರದಾ ಚಿಟ್ ಫಂದ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಪ್ರಮುಖ ಫುಟ್ಬಾಲ್ ಕ್ಲಬ್ ಗಳಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ.

5.40: 9 ಜನ ಪಕ್ಷೇತರ ಶಾಸಕರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸಮ್ಮುಖದಲ್ಲಿ ಎನ್ ಸಿಪಿಗೆ ಸೇರ್ಪಡೆಗೊಂಡಿದ್ದಾರೆ.

5.30: ಭಾರತದ ಡೇವಿಸ್ ಕಪ್ ಕನಸು ಅಂತ್ಯಗೊಂಡಿದೆ. ಸೆರ್ಬಿಯಾ ವಿರುದ್ಧ ಇಂಡಿಯಾ 3-2 ಅಂತರದಲ್ಲಿ ಸೋಲು ಕಂಡಿದೆ. ಯೂಕಿ ಭಾಂಬ್ರಿ ಅವರು 3-6, 4-6, 4-6 ಫಿಲಿಪ್ ಕ್ರೊಜಿನೊವಿಕ್ ಅವರಿಗೆ ಶರಣಾದರು.

2.25: ಖ್ಯಾತ ಶಿಕ್ಷಣ ತಜ್ಞ ಹಾಗೂ ಭಾರತ ಸರಕಾರದ ಮಾಜಿ ಶಿಕ್ಷಣ ಸಲಹೆಗಾರ ಕಿರೀಟ್ ಜೋಶಿ ಕ್ಯಾನ್ಸರ್‌ನೊಂದಿಗೆ ಹೋರಾಟ ನಡೆಸಿದ ಬಳಿಕ ಇಂದಿಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

12.00: ಬಿಜೆಪಿ ಹಾಗೂ ಶಿವಸೇನೆ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
11.50 : ಎಚ್ಎಸ್ ಪ್ರಣೋಯ್ ಅವರು ಇಂಡೋನೇಷಿಯನ್ ಓಪನ್ ಬಾಡ್ಮಿಂಟನ್ ಗೆದ್ದಿದ್ದಾರೆ.
11.45: ಉಗ್ರರು ಭಯೋತ್ಪಾದನೆ ಜೊತೆಗೆ ಅಕ್ರಮವಾಗಿ ಪ್ರಾಣಿಗಳ ಹತ್ಯೆಗೆ ಅಕ್ರಮ ಹಣವನ್ನು ಬಳಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

Uddhav Thackeray

11.30: ಭಾರತದ ಮಂಗಳಯಾನ ಶೇ 95ರಷ್ಟು ತನ್ನ ಪ್ರಯಾಣ ಯಶಸ್ವಿಯಾಗಿ ಮುಗಿಸಿದೆ ಎಂದು ಇಸ್ರೋ ಹೇಳಿದೆ.
11.15: ಬೆಂಗಳೂರಿನಲ್ಲಿ ನಡೆದಿರುವ ಡೇವಿಸ್ ಕಪ್ ನಲ್ಲಿ ಸೋಮದೇವ್ ದೇವ್ ವರ್ಮನ್ ಅವರ ಗೆಲುವಿನೊಂದಿಗೆ ಸೆರ್ಬಿಯಾ ವಿರುದ್ಧ ಭಾರತ ತಂಡ 2-2ರ ಸಮಬಲ ಸಾಧಿಸಿದೆ.
11.00: ಪ್ರವಾಹ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ವೈದ್ಯರು ಶ್ರಮಿಸುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರ ನೆರವು ಅಗತ್ಯವಿದೆ.
English summary
Top news in brief for the day:Visva Bharti student alleges harassment by teacher, says she was mentally harassed. An FIR has been filed against the student and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X