ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.16 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜು.16: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
6.10: ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, ಆರ್ ಎಸ್ ಪುರ ಸೆಕ್ಟರ್ ಅಂತಾರಾಷ್ಟ್ರೀಯ ಗಡಿಯಲ್ಲಿ ಮೂವರು ಭಾರತೀಯ ಗಡಿ ಭದ್ರತಾ ಯೋಧರ ಹತ್ಯೆ
4.45: ಹಿಮಾಲಯದ ತಪ್ಪಲಿನಲ್ಲಿ ನೆಲೆಸಿರುವ ವೈಷ್ಣೋದೇವಿಯ ದರ್ಶನಕ್ಕೆ ತೆರಳುವ ಯಾತ್ರಿಗಳ ಅನುಕೂಲಕ್ಕೆ ಆರಂಭಗೊಂಡ ಶ್ರೀ ಶಕ್ತಿ ಎಕ್ಸ್​ಪ್ರೆಸ್​ ರೈಲು ಇಂದು ಅರ್ಧ ದಾರಿಯಲ್ಲೇ ಕೆಟ್ಟು ನಿಂತ ಘಟನೆ ನಡೆದಿದೆ. ಕಾತ್ರಾ ನಿಲ್ದಾಣದ ಬಳಿಯ ಸುರಂಗ ತಲುಪಿದಾಗ ರೈಲಿನ ಎಂಜಿನ್​ ಕೈಕೊಟ್ಟು ನಿಂತಿತ್ತು.

3.45: ಕೇದಾರನಾಥ್, ಬದ್ರಿನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

11.20: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಕೊಂಚ ಶಾಕ್ ತಗುಲಲಿದೆ. ಕಿರು ಅವಧಿಯ ನಿಗದಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಎಸ್ ಬಿಐ ಶೇ 7.5 ರಿಂದ ಶೇ 7ಕ್ಕಿಳಿಸಿದೆ. ನೂತನ ದರ ಜು.18ರಿಂದ ಜಾರಿಗೆ ಬರಲಿದೆ.

News in Brief on July 16

11.00: 'ಕಾಶ್ಮೀರ ಪ್ರತ್ಯೇಕ ರಾಜ್ಯ ಎಂದು ನಾನು ಹೇಳಿಲ್ಲ' ರಾಮದೇವ್ ವೇದ್ ಪ್ರತಾಪ್ ವೈದಿಕ್ ಪುನರುಚ್ಚಾರ.
10.30 : ಗಾಜಾದ ಮೇಲೆ ಇಸ್ರೇಲಿ ವೈಮಾನಿಕ ದಾಳಿಯಿಂದ ಮೃತರ ಸಂಖ್ಯೆ 200ಕ್ಕೇರಿದೆ.
10.15: ಮುಂಬೈನ ಭಾರಿ ಮಳೆಗೆ ಕಟ್ಟಡದ ಒಂದು ಭಾಗ ಕುಸಿದು ಇಬ್ಬರು ಮೃತ ಪಟ್ಟಿದ್ದಾರೆ.
10.00: ಬ್ರೆಜಿಲ್ಲಿನಲ್ಲಿ ನಡೆದಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಮಾತನಾಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ನಿರ್ಮೂಲನೆ ನಮ್ಮ ಗುರಿ ಎಂದಿದ್ದಾರೆ.
English summary
Top news in brief for the day: State Bank of IndiaBSE 1.55 % (SBI) reduced interest rate by 25 to 50 basis points for short tenure deposits with effect from July 18 and many more news from the around the globe on July 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X