ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.26: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಅ.26: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

18.30: ಪ್ರಧಾನಿ ಮೋದಿ ಅವರು ನೀಡಿದ ಚಹಾಕೂಟದ ನಂತರ ಮಾತನಾಡಿದ ಮಹಾರಾಷ್ಟ್ರದ ಬಿಜೆಪಿ ಶಾಸಕ ವಿನೋದ್ ತಾವ್ಡೆ: ಶಿವಸೇನಾ ಜೊತೆ ಬಿಜೆಪಿ ಮರು ಮೈತ್ರಿಯನ್ನು ಜನತೆ ಬಯಸಿದ್ದಾರೆ. ಸಿಎಂ ಸ್ಥಾನಕ್ಕೆ ಯಾರೂ ರೇಸ್ ನಡೆಸಿಲ್ಲ. ಈ ಬಗ್ಗೆ ಹಿರಿಯ ನಾಯಕರು ನಿರ್ಧರಿಸಲಿದ್ದಾರೆ ಎಂದಿದ್ದಾರೆ.
18.10: ಸಂಸದರಿಗೆ ದೀಪಾವಳಿ ಪ್ರಯುಕ್ತ ಪ್ರಧಾನಿ ಮೋದಿ ಅವರು ನೀಡಿದ ಚಹಾಕೂಟ ಸಂಪನ್ನಗೊಂಡಿದೆ.

17.30: ಪ್ರಧಾನಿ ಮೋದಿ ಅವರು ಸಂಸದರನ್ನು ರಿಪೋರ್ಟ್ ಕಾರ್ಡ್ ತೋರಿಸಿ ಎಂದಿದ್ದಾರಂತೆ. ನಿಮ್ಮ ಪ್ರಗತಿ ಬಗ್ಗೆ ಪರಿಶೀಲನಾ ವರದಿಯನ್ನು ನೀವೆ ಒಪ್ಪಿಸಬೇಕು ಎಂದು ಮೋದಿ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

16.15: ಪ್ರಧಾನಿ ಮೋದಿ ಕರೆದಿರುವ ಚಹಾಕೂಟದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಪ್ರಮುಖ ಎನ್ ಡಿಎ ಮುಖಂಡರು ಪಾಲ್ಗೊಂಡಿದ್ದಾರೆ.

16.05: ಮೋದಿ ನಿವಾಸದಲ್ಲಿ ಸಂಸದರ ಚಹಾಕೂಟ 7 ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಆರಂಭವಾಗಿದೆ. ಕೇಂದ್ರ ಸಚಿವ ಅನಂತ ಗೀತೆ ನೇತೃತ್ವದಲ್ಲಿ ಶಿವಸೇನಾ ಸಂಸದರು ಪಾಲ್ಗೊಂಡಿದ್ದಾರೆ.

Narendra Modi

15.30: ಸಾನಿಯಾ ಮಿರ್ಜಾ ಅವರು ಕ್ಲಾರಾ ಬ್ಲ್ಯಾಕ್ ಜೊತೆಯಾಗಿ ಡಬ್ಲ್ಯೂಟಿಎ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಸಾನಿಯಾ ಅವರ ತಂದೆ ನೀಡಿದ ಪ್ರತಿಕ್ರಿಯೆ.

14.05: ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ಮಿತ್ರರ ಜೊತೆ ಚಹಾಕೂಟ ನಡೆಸಿದ ಬೆನ್ನಲ್ಲೇ ಎನ್ ಡಿಎ ಮಿತ್ರಪಕ್ಷಗಳ ಸಂಸದರ ಜೊತೆ ಭಾನುವಾರ ಚಹಾಕೂಟ ನಡೆಸಲಿದ್ದಾರೆ. ಅದರೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಆಹ್ವಾನ ಸಿಕ್ಕಿಲ್ಲ ಎಂದು ಸೇನೆ ಕಾರ್ಯಕರ್ತರು ಟೀಕಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಬಿಜೆಪಿ, ಉದ್ಧವ್ ಸಂಸದರಲ್ಲ, ಇಂದು ಸಂಸದರಿಗೆ ಮಾತ್ರ ಆಹ್ವಾನ ಸಿಕ್ಕಿದೆ ಎಂದಿದೆ. ಶಿವಸೇನಾ ಮುಖಂಡರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


12.15: ಅಸ್ಸಾಂ ಬಸ್ ದುರಂತದಲ್ಲಿ ಕರ್ನಾಟಕದ ಗದಗ್ ಮೂಲದ ಯೋಧ ಬಸವರಾಜ್(32) ಸಾವನ್ನಪ್ಪಿರುವ ಸುದ್ದಿ ಬಂದಿದೆ. ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಬಸವರಾಜ್ ಅವರು ಜೋಧ್ ಪುರದಲ್ಲಿ ಸೇನಾ ತರಬೇತಿ ಕ್ಯಾಂಪಿನಲ್ಲಿದ್ದರು.

12.00: ಅಕ್ರಮ ಆಸ್ತಿ ಗಳಿಕೆ ಆರೋಪ ನಿರಾಕರಿಸಿರುವ ರೈಲ್ವೆ ಸಚಿವ ಸದಾನಂದ ಗೌಡ ಅವರು ಮಂಗಳೂರಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

11.45: ಹರ್ಯಾಣದಲ್ಲಿ ಸಿಎಂ ಆಗಿ ಮನೋಹರ್ ಲಾಲ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭಕ್ಕೆ ಬಂದಿದ್ದ ಅತಿಥಿಗಳ ಚಿತ್ರ

11.30: ಹರ್ಯಾಣದ ಪಂಚಕುಲದಲ್ಲಿ ಹರ್ಯಾಣದ ಪ್ರಪ್ರಥಮ ಬಿಜೆಪಿ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.[ಖಟ್ಟರ್ ವ್ಯಕ್ತಿಚಿತ್ರ ಓದಿ]

10.25: ಬೆಂಗಳೂರಿನಲ್ಲಿ ಬಿದ್ದಿರುವ ಭಾರಿ ಮಳೆಗೆ ಗೋಡೆ ಕುಸಿದು ಒಂದು ಮಗು ಹಾಗೂ ಮೂವರಿಗೆ ಗಾಯಗಳಾಗಿವೆ. ಭಾನುವಾರ ಕೂಡಾ ನಗರದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರೆದಿದೆ.

10.20: ಹರ್ಯಾಣದ ನೂತನ ಸಿಎಂ ಆಗಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ರಾಮ್ ರಹಿಂ ಅವರನ್ನು ಆಹ್ವಾನಿಸಲಿದ್ದಾರೆ.

Updates India, International News in Brief Oct 26


10.10:
ಜಾರ್ಖಂಡಿನ ಬೊಕರೊದಲ್ಲಿ ಭಾನುವಾರ ಮುಂಜಾನೆ ಅಗ್ನಿ ಆಕಸ್ಮಿಕ ಸಂಭವಿಸಿದೆ.

10.00: ಪ್ರಧಾನಿ ಮೋದಿ ಅವರು ಉದ್ದೇಶಿತ ಶ್ರೀಲಂಕಾ ಪ್ರವಾಸಕ್ಕೆ ಎಂಡಿಎಂಕೆ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

English summary
Top News of the today : Prime Minister Narendra Modi to host a special Deepavali party for NDA's allies in New Delhi. NDA MPs arrive at 7 RCR for PM Modi's Tea Party
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X